ಭಾರತ ತಂಡದ ಪರವಾಗಿ ಶಿವಂ ಮಾವಿ ನಾಲ್ಕು ಉಮ್ರಾನ್ ಮಾಲಿಕ್ ಹಾಗೂ ಹರ್ಶಾಲ್ ಪಟೇಲ್ ತಲಾ ಎರಡು ವಿಕೆಟ್ ಗಳನ್ನು ಪಡೆಯುವ ಮೂಲಕ ಶ್ರೀಲಂಕಾ ತಂಡದ ಬ್ಯಾಟಿಂಗ್ ಪಡೆಯನ್ನು ಕಟ್ಟಿ ಹಾಕಿದರು.
ಶ್ರೀಲಂಕಾ ತಂಡದ ಪರವಾಗಿ ದಾಸುನ್ ಶನಕಾ 45 ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ಗೆಲುವಿನ ಹಂತಕ್ಕೆ ತಂದಿದ್ದರು.
ಶ್ರೀಲಂಕಾ ತಂಡವು 20 ಓವರ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 160 ರನ್ ಗಳನ್ನು ಗಳಿಸಲಷ್ಟೇ ಶಕ್ತವಾಯಿತು.
ಇಶಾನ್ ಕಿಶನ್ 37 ದೀಪಕ್ ಹೂಡಾ 41 ಹಾಗೂ ಅಕ್ಸರ್ ಪಟೇಲ್ ಅವರ 31 ರನ್ ಗಳ ನೆರವಿನಿಂದ 162 ರನ್ ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು
ಭಾರತ ತಂಡವು 20 ಓವರ್ ಗಳಲ್ಲಿ ಐದು ವಿಕೆಟ್ ಗಳ ನಷ್ಟಕ್ಕೆ 162 ರನ್ ಗಳ ಸವಾಲಿನ ಮೊತ್ತವನ್ನು ಗಳಿಸಿತು.
ಭಾರತ ತಂಡವು ಶ್ರೀಲಂಕಾ ವಿರುದ್ಧ ಎರಡು ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.