ಇದುವರೆಗೆ ಟಿ20 ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಆಟಗಾರರು ಯಾರೆಂದು ನಿಮಗೆ ಗೊತ್ತಾ..? ತಿಳಿಯಲು ಮುಂದೆ ಓದಿ...
ತಮ್ಮ ಡಿಫರೆಂಟ್ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿರುವ ಕ್ರಿಸ್ ಗೇಲ್, ಟಿ20 ವಿಶ್ವಕಪ್‌ನಲ್ಲಿ ಎರಡು ಭಾರಿ ಶತಕ ಸಿಡಿಸಿದ್ದಾರೆ ಮೊದಲು 2007 ರಲ್ಲಿ ನಂತರ 2016 ರಲ್ಲಿ.
ಟೀಮ್ ಇಂಡಿಯಾದ ಆಟಗಾರ ಸುರೇಶ್ ರೈನಾ ಕೂಡ 2010 ರಲ್ಲಿ ಶತಕ ಸಿಡಿಸಿ ದಾಖಲೆ ಮಾಡಿದ್ದಾರೆ.
ಶ್ರೀ ಲಂಕಾ ತಂಡದ ಆಟಗಾರ ಮಹೇಲಾ ಜಯವರ್ಧನೆ ಕೂಡ 2010 ರಲ್ಲಿ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ.
ಬ್ರೆಂಡನ್ ಮೆಕಲಮ್ 2012 ರ ಟಿ20 ವಿಶ್ವಕಪ್‌ನಲ್ಲಿ ಶತಕ ಸಿಡಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮ್ಯಾನ್ ಅಲೆಕ್ಸ್ ಹೇಲ್ಸ್ ಕೂಡ 2014 ರಲ್ಲಿ ಶತಕ ಸಿಡಿಸಿದ್ದಾರೆ.
ಪಾಕಿಸ್ತಾನಿ ತಂಡದ ಆಟಗಾರನಾಗಿರುವ ಅಹ್ಮದ್ ಶಹಜಾದ್ 2014 ರಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಬಾಂಗ್ಲಾದೇಶ ತಂಡದ ತಮೀಮ್ ಇಕ್ಷಾಲ್ 2016 ರಲ್ಲಿ ಶತಕ ಸಿಡಿಸಿದ್ದರು.
ಜೋಸ್ ಬಟ್ಲರ್ 2021 ಟಿ20 ವಿಶ್ವಕಪ್‌ನಲ್ಲಿ ಶತಕ ಸಿಡಿಸಿ ಸಾದನೆ ಮಾಡಿದ್ದಾರೆ.