ನ್ಯೂಯಾರ್ಕ್’ನ ನಸ್ಸೌ ಕೌಂಟಿ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ T20 ವಿಶ್ವಕಪ್ 2024ರ A ಗುಂಪಿನ ಮುಖಾಮುಖಿಯಲ್ಲಿ ಭಾರತವು ಪಾಕಿಸ್ತಾನವನ್ನು ಎದುರಿಸಿದೆ.
ಈ ಎರಡು ತಂಡಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಅಂದಹಾಗೆ ಈ ವರದಿಯಲ್ಲಿ ಭಾರತ vs ಪಾಕಿಸ್ತಾನ T20 ವಿಶ್ವಕಪ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಐದು ಬ್ಯಾಟರ್’ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಆಡಿರುವ 5 ಇನ್ನಿಂಗ್ಸ್’ಗಳಲ್ಲಿ 308 ರನ್ ಕಲೆಹಾಕಿರುವ ಟೀಂ ಇಂಡಿಯಾದ ದಿಗ್ಗಜ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಪಾಕಿಸ್ತಾನದ ಶೋಯೆಬ್ ಮಲಿಕ್ ಎರಡನೇ ಸ್ಥಾನದಲ್ಲಿದ್ದು, ಆಡಿರುವ 5 ಇನ್ನಿಂಗ್ಸ್’ನಲ್ಲಿ 100 ರನ್ ಗಳಿಸಿದ್ದಾರೆ.
ಇನ್ನು ಪಾಕಿಸ್ತಾನದ ಮಿಸ್ಬಾ-ಉಲ್-ಹಕ್ ಆಡಿರುವ 2 ಇನ್ನಿಂಗ್ಸ್’ನಲ್ಲಿ 96 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಪಾಕಿಸ್ತಾನದ ಮತ್ತೋರ್ವ ಆಟಗಾರ ಮೊಹಮ್ಮದ್ ರಿಜ್ವಾನ್ ಆಡಿರುವ 2 ಇನ್ನಿಂಗ್ಸ್’ನಲ್ಲಿ 83 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಐದನೇ ಸ್ಥಾನದಲ್ಲಿ ಪಾಕ್’ನ ಆಟಗಾರ ಉಮರ್ ಅಕ್ಮಲ್ ಇದ್ದು, ಆಡಿರುವ 3 ಇನ್ನಿಂಗ್ಸ್’ನಲ್ಲಿ 76 ರನ್ ಕಲೆಹಾಕಿದ್ದಾರೆ.