ಟ್ರಿನಿಡಾಡ್ನಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಮಳೆಯಿಂದಾಗಿ ಡ್ರಾದಲ್ಲಿ ಅಂತ್ಯಗೊಂಡ ನಂತರ ಪಾಕಿಸ್ತಾನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಟೇಬಲ್’ನಲ್ಲಿ ಅಗ್ರಸ್ಥಾನದಲ್ಲಿದೆ.
ಶ್ರೀಲಂಕಾ ವಿರುದ್ಧ ನಾಲ್ಕು ವಿಕೆಟ್ ಗಳ ಜಯ ಸಾಧಿಸಿದ ನಂತರ ಹೊಸ ಋತುವಿನಲ್ಲಿ ಪಾಕಿಸ್ತಾನ ಅಗ್ರಸ್ಥಾನ ಪಡೆದುಕೊಂಡಿದೆ. 100 ಶೇಕಡ ಅಂಕ ಪಡೆದು ಅಗ್ರಸ್ಥಾನದಲ್ಲಿದೆ.
ಭಾರತವು ಆಡಿರುವ 2 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೆ, ಮತ್ತೊಂದರಲ್ಲಿ ಡ್ರಾ ಮಾಡಿಕೊಂಡಿದೆ, ಈ ಕಾರಣದಿಂದ 66.67 ಶೇಕಡ ಪಡೆದುಕೊಂಡು 2ನೇ ಸ್ಥಾನದಲ್ಲಿದೆ.
ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳನ್ನು ಆಡಿದ್ದು, ಅದರಲ್ಲಿ 2 ಗೆಲುವು, 1 ಸೋಲು, 1 ಡ್ರಾ ಆಗಿದೆ. ಈ ಮೂಲಕ ಶೇ.54.17 ಅಂಕ ಪಡೆದುಕೊಂಡು ಮೂರನೇ ಸ್ಥಾನದಲ್ಲಿದೆ.
ಇಂಗ್ಲೆಂಡ್ ತಂಡ ಆಡಿರುವ 4 ಪಂದ್ಯಗಳ ಪೈಕಿ 1 ಗೆಲುವು, 2 ಸೋಲು, 1 ಡ್ರಾ ಮಾಡಿಕೊಂಡಿದೆ. ಈ ಮೂಲಕ ಶೇ.29.17 ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದೆ.
ಇನ್ನು ವೆಸ್ಟ್ ಇಂಡೀಸ್ ತಂಡ ಆಡಿರುವ 2 ಪಂದ್ಯದಲ್ಲಿ 1 ಸೋಲು, ಮತ್ತೊಂದು ಡ್ರಾದಲ್ಲಿ ಅಂತ್ಯಗೊಂಡಿದೆ, ಹೀಗಾಗಿ 16.67 ಶೇಕಡದೊಂದಿದೆ ಐದನೇ ಸ್ಥಾನದಲ್ಲಿದೆ
ಇನ್ನು ಶ್ರೀಲಂಕಾ ತಂಡ ಆಡಿದ್ದು ಒಂದು ಪಂದ್ಯ. ಆ ಪಂದ್ಯದಲ್ಲೂ ಸೋಲು ಕಂಡಿದ್ದು, ಶೂನ್ಯ ಅಂಕ ಸಂಪಾದನೆ ಮಾಡಿದೆ.