ನಾವು ಭಾರತಕ್ಕಿಂತ ಉತ್ತಮ ಸ್ಪಿನ್ನರ್ ಗಳನ್ನು ಹೊಂದಿದ್ದೇವೆ- ಅಸ್ಗರ್ ಸ್ಟ್ಯಾನಿಕ್ಜಾಯಿ

  

Updated: Jun 11, 2018 , 05:43 PM IST
ನಾವು ಭಾರತಕ್ಕಿಂತ ಉತ್ತಮ ಸ್ಪಿನ್ನರ್ ಗಳನ್ನು ಹೊಂದಿದ್ದೇವೆ- ಅಸ್ಗರ್ ಸ್ಟ್ಯಾನಿಕ್ಜಾಯಿ

ನವದೆಹಲಿ: ಅಫ್ಘಾನಿಸ್ತಾನ ತಂಡವು ಭಾರತಕ್ಕಿಂತ ಉತ್ತಮ ಸ್ಪಿನ್ನರ್ಗಳನ್ನು ಪಡೆದಿದೆ ತಂಡದ ನಾಯಕ ಅಸ್ಗರ್ ಸ್ಟ್ಯಾನಿಕ್ಜಾಯಿ ಎಂದು ತಿಳಿಸಿದ್ದಾರೆ. 

ಇದೇ ಮೊದಲ ಬಾರಿಗೆ ಟೆಸ್ಟ್ ಆಡುವ ಹನ್ನೆರಡನೆಯ ದೇಶವಾಗಿ ಕಣಕ್ಕೆ ಇಳಿದಿರುವ ಅಫ್ಘಾನಿಸ್ತಾನ್ ತಂಡವು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಐತಿಹಾಸಿಕ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಮಾಜಿ ತಂಡ ಸಿದ್ಧತೆ ನಡೆಸಿರುವ ಸಂದರ್ಭದಲ್ಲಿ ಅವರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.

ತಂಡದ ರಶೀದ್ ಮತ್ತು ಸಹವರ್ತಿ ಸ್ಪಿನ್ನರ್ಗಳಾದ ಮುಜೀಬ್ ಉರ್ ರಹ್ಮಾನ್, ಜಹೀರ್ ಖಾನ್ ಮತ್ತು ಹಮ್ಜಾ ಹಾಟಕ್ ಅವರನ್ನು ಒಳಗೊಂಡ 16 ಸದಸ್ಯರ ಅಫ್ಘಾನಿಸ್ತಾನ ತಂಡವು ಭಾರತ ವಿರುದ್ಧ ಉದ್ಘಾಟನಾ ಟೆಸ್ಟ್ ಪಂದ್ಯಕ್ಕಾಗಿ ಸೆಣಸಲಿದೆ.

ಮತ್ತೊಂದೆಡೆ, ವಿರಾಟ್ ಕೊಹ್ಲಿ ಇಂಗ್ಲಿಷ್ ಕೌಂಟಿಯ ಪಂಧ್ಯಕ್ಕಾಗಿ ಟೆಸ್ಟ್ ಪಂಧ್ಯದಿಂದ ಹೊರಗುಳಿಯಲು ನಿರ್ಧರಿಸಿದ ಬಳಿಕ ವಿರಾಟ್ ಕೊಹ್ಲಿ ಅವರು ಕುತ್ತಿಗೆ ನೋವಿನಿಂದ ಈಗ ಹೊರಗುಳಿದ್ದಿದ್ದಾರೆ.ಕೊಹ್ಲಿಯ ಅನುಪಸ್ಥಿತಿಯಲ್ಲಿ, ಭಾರತ ತಂಡವು ತಮ್ಮ ಸ್ಟಾರ್ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಟೆಸ್ಟ್ ಬೌಲರ್ಗಳ ಸ್ಥಾನಕ್ಕೆ ಕರೆಸಿಕೊಳ್ಳುವ ಸಾಧ್ಯತೆಗಳಿವೆ.