ಚಾಂಪಿಯನ್ಸ್ ಟ್ರೋಫಿ ಗೆದ್ದರೆ ಟೀಂ ಇಂಡಿಯಾಗೆ ಸಿಗಲಿರುವ ಒಟ್ಟು ಬಹುಮಾನ ಮೊತ್ತ ಎಷ್ಟು?

Champions Trophy prize money: 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡವು 2.24 ಮಿಲಿಯನ್ ಡಾಲರ್ (ಸುಮಾರು 20 ಕೋಟಿ ರೂ.) ಪಡೆಯಲಿದೆ. ರನ್ನರ್ ಅಪ್ ತಂಡಕ್ಕೂ ಹಣದ ಮಳೆ ಸುರಿಯಲಿದೆ. ರನ್ನರ್ ಅಪ್ ತಂಡಕ್ಕೆ 1.24 ಮಿಲಿಯನ್ ಡಾಲರ್ (9.74 ಕೋಟಿ ರೂ.) ಸಿಗಲಿದೆ.

Written by - Bhavishya Shetty | Last Updated : Mar 8, 2025, 12:01 PM IST
    • ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಅಂತಿಮ ಪಂದ್ಯ
    • ಬಹುಮಾನದ ಹಣವನ್ನು ಶೇಕಡಾ 53 ರಷ್ಟು ಹೆಚ್ಚಿಸಲಾಗಿದೆ
    • ಚಾಂಪಿಯನ್ಸ್ ಟ್ರೋಫಿಯ ಜೊತೆಗೆ ಸುಮಾರು 20 ಕೋಟಿ ರೂಪಾಯಿ ಬಹುಮಾನ
ಚಾಂಪಿಯನ್ಸ್ ಟ್ರೋಫಿ ಗೆದ್ದರೆ ಟೀಂ ಇಂಡಿಯಾಗೆ ಸಿಗಲಿರುವ ಒಟ್ಟು ಬಹುಮಾನ ಮೊತ್ತ ಎಷ್ಟು?
Champions Trophy prize money

Champions Trophy prize money: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಅಂತಿಮ ಪಂದ್ಯ ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ದೇಶಗಳ ನಡುವಿನ ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ. ಈ ಪ್ರಶಸ್ತಿ ಪಂದ್ಯದಲ್ಲಿ, ಟ್ರೋಫಿ ಮಾತ್ರವಲ್ಲದೆ ಕೋಟ್ಯಂತರ ರೂಪಾಯಿಗಳ ಬಹುಮಾನದ ಹಣವೂ ಪಣಕ್ಕಿಡಲ್ಪಡುತ್ತದೆ. ಈ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಬಹುಮಾನದ ಹಣವನ್ನು ಶೇಕಡಾ 53 ರಷ್ಟು ಹೆಚ್ಚಿಸಲಾಗಿದೆ.

Add Zee News as a Preferred Source

ಇದನ್ನೂ ಓದಿ:  ಬಿಯರ್ ಕುಡಿದ್ರೆ ಬ್ಲಡ್ ಶುಗರ್‌ ಹೆಚ್ಚಾಗುತ್ತಾ? ಯಾವಾಗಾದ್ರು ಒಮ್ಮೆ ಎಣ್ಣೆ ಹೊಡಿತೀನಿ ಅನ್ನೋರೇ ಈ ಸ್ಟೋರಿ ಓದಿ..

2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡವು 2.24 ಮಿಲಿಯನ್ ಡಾಲರ್ (ಸುಮಾರು 20 ಕೋಟಿ ರೂ.) ಪಡೆಯಲಿದೆ. ರನ್ನರ್ ಅಪ್ ತಂಡಕ್ಕೂ ಹಣದ ಮಳೆ ಸುರಿಯಲಿದೆ. ರನ್ನರ್ ಅಪ್ ತಂಡಕ್ಕೆ 1.24 ಮಿಲಿಯನ್ ಡಾಲರ್ (9.74 ಕೋಟಿ ರೂ.) ಸಿಗಲಿದೆ.

ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದರೆ, ಚಾಂಪಿಯನ್ಸ್ ಟ್ರೋಫಿಯ ಜೊತೆಗೆ ಸುಮಾರು 20 ಕೋಟಿ ರೂಪಾಯಿ ಬಹುಮಾನವನ್ನು ಟೀಂ ಇಂಡಿಯಾ ಪಡೆಯಲಿದೆ. ಭಾರತ ತಂಡ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ರನ್ನರ್ ಅಪ್ ಸ್ಥಾನ ಪಡೆದರೆ, ಟ್ರೋಫಿಯನ್ನು ಕಳೆದುಕೊಂಡು 9.74 ಕೋಟಿ ರೂಪಾಯಿಗಳಿಗೆ ತೃಪ್ತಿಪಡಬೇಕಾಗುತ್ತದೆ.

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗೂ ಬಹುಮಾನ ಮೊತ್ತ
2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲಿಸ್ಟ್‌ಗಳಾದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸಹ ಸಮಾನ ಮೊತ್ತದ $560,000 (ರೂ. 4.87 ಕೋಟಿ) ಪಡೆಯಲಿವೆ. 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಒಟ್ಟು ಬಹುಮಾನದ ಮೊತ್ತ 60 ಲಕ್ಷ 90 ಸಾವಿರ ಡಾಲರ್ (ಸುಮಾರು 60 ಕೋಟಿ ರೂಪಾಯಿಗಳು). 2017ರ ಋತುವಿಗೆ ಹೋಲಿಸಿದರೆ ಈ ಬಾರಿ ಬಹುಮಾನದ ಮೊತ್ತವು ಶೇಕಡಾ 53 ರಷ್ಟು ಹೆಚ್ಚಾಗಿದೆ.

ಇನ್ನುಳಿದಂತೆ ಐದನೇ ಅಥವಾ ಆರನೇ ಸ್ಥಾನ ಪಡೆಯುವ ತಂಡಕ್ಕೆ 3.04 ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತದೆ. ಏಳನೇ ಮತ್ತು ಎಂಟನೇ ಸ್ಥಾನ ಪಡೆಯುವ ತಂಡಗಳಿಗೆ 1.22 ಕೋಟಿ ರೂ. ಸಿಗಲಿದೆ. ಹೆಚ್ಚುವರಿಯಾಗಿ, ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಂಟು ತಂಡಗಳು ತಲಾ ₹1.08 ಕೋಟಿ ಪಡೆಯಲಿವೆ. ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಯನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಗ್ರ ಎಂಟು ತಂಡಗಳ ನಡುವೆ ಆಡಲಾಗುತ್ತದೆ.
 
2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾವ ತಂಡಕ್ಕೆ ಎಷ್ಟು ಹಣ ಸಿಗುತ್ತದೆ?

  • 2025 ರ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡ - $2.24 ಮಿಲಿಯನ್ (ಸುಮಾರು 20 ಕೋಟಿ ರೂ.)
  • ರನ್ನರ್-ಅಪ್ ತಂಡ – $1.24 ಮಿಲಿಯನ್ (ರೂ 9.74 ಕೋಟಿ)
  • ಮೊದಲ ಸೆಮಿಫೈನಲ್‌ನಲ್ಲಿ ಸೋತ ತಂಡ (ಆಸ್ಟ್ರೇಲಿಯಾ) - $560,000 (ರೂ. 4.87 ಕೋಟಿ)
  • ಎರಡನೇ ಸೆಮಿಫೈನಲ್‌ನಲ್ಲಿ ಸೋತ ತಂಡ (ದಕ್ಷಿಣ ಆಫ್ರಿಕಾ) - $560,000 (ರೂ. 4.87 ಕೋಟಿ)

ಇದನ್ನೂ ಓದಿ:  ಈ ಕಾಯಿಲೆ ಇರುವವರು ಬಾಳೆಹಣ್ಣು ತಿನ್ನಲೇಬಾರದು! ಎಷ್ಟೇ ಆಸೆಯಾದ್ರೂ ಸರಿ ತಿನ್ನುವ ದುಸ್ಸಾಹಸಕ್ಕೆ ಹೋಗಲೇಬೇಡಿ 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News