close

News WrapGet Handpicked Stories from our editors directly to your mailbox

ರಸ್ತೆಯಲ್ಲಿ ಶರ್ಟ್ ಬಿಚ್ಚಿ ಕುಳಿತ ಕೊಹ್ಲಿ ಫೋಟೋಗೆ ಟ್ವಿಟ್ಟಿಗರು ಹೇಳಿದ್ದೇನು ಗೊತ್ತೇ?

ಗುರುವಾರದಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ ನಲ್ಲಿ ಶರ್ಟ್ ಬಿಚ್ಚಿ ರಸ್ತೆಯಲ್ಲಿ ಕುಳಿತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

Updated: Sep 5, 2019 , 08:43 PM IST
 ರಸ್ತೆಯಲ್ಲಿ ಶರ್ಟ್ ಬಿಚ್ಚಿ ಕುಳಿತ ಕೊಹ್ಲಿ ಫೋಟೋಗೆ ಟ್ವಿಟ್ಟಿಗರು ಹೇಳಿದ್ದೇನು ಗೊತ್ತೇ?
Photo courtesy: Twitter

ನವದೆಹಲಿ: ಗುರುವಾರದಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ ನಲ್ಲಿ ಶರ್ಟ್ ಬಿಚ್ಚಿ ರಸ್ತೆಯಲ್ಲಿ ಕುಳಿತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಆದರೆ ಈಗ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಗೆ ಒಳಗಾಗಿದೆ. ಫೋಟೋ ಶೇರ್ ಮಾಡಿಕೊಂಡು ತತ್ವಜಾನಿ ರೀತಿ ಬರೆದುಕೊಂಡಿರುವ ಅವರ ಟ್ವೀಟ್ ನ್ನು ಹಲವರು ವ್ಯಂಗ್ಯವಾಡಿದ್ದಾರೆ. ಮಂಗಳವಾರದಂದು ಗುರುಗ್ರಾಮದಲ್ಲಿ ವ್ಯಕ್ತಿಯೋಬ್ಬನಿಗೆ ಹೆಲ್ಮೆಟ್ ಹಾಗೂ ಹಾಗೂ ನೋಂದಣಿ ಪತ್ರ ಇರದಿದ್ದರಿಂದಾಗಿ 23 ಸಾವಿರ ರೂಪಾಯಿ ದಂಡ ವಿಧಿಸಿದದ ನಂತರ ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಸ್ಯಬರಿತ  ಟ್ವೀಟ್ಗಳಿಗೆ ಸಾಕ್ಷಿಯಾಗಿತ್ತು.

ಈಗ ಟ್ವಿಟ್ಟಿಗರು ಕೊಹ್ಲಿಯನ್ನು ಇದೇ ಘಟನೆಗೆ ಸಂಬಂಧಿಸಿದ ಹಾಗೆ ಟ್ವೀಟ್ ಮಾಡಿದ್ದಾರೆ. ಅಭಿಷೇಕ್ ಕುಮಾರ್ ಎನ್ನುವವರು 'ಈಗ ವಿರಾಟ್ ಅವರ ಚಲನ್ ಅನ್ನು ಯಾರು ಕಟ್ ಮಾಡಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.