)
Shreyas Iyer injury; ಟೀಮ್ ಇಂಡಿಯಾ ಕ್ರಿಕೆಟ್ಗೆ ಮತ್ತೊಂದು ಭಾರೀ ಹಿನ್ನಡೆಯಾಗಿದ್ದು, ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಮತ್ತಷ್ಟು ದಿನಗಳ ಕಾಲ ತಂಡದಿಂದ ಹೊರಗುಳಿಯಲಿದ್ದಾರೆ ಮೂಲಗಳು ತಿಳಿಸಿವೆ.ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಈಗಲೂ ಶ್ರೇಯಸ್ ಅಯ್ಯರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಕ್ಟೋಬರ್ನಲ್ಲಿ ಆಸ್ಸ್ಟೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯ ಮೂರನೇ ಪಂದ್ಯದ ವೇಳೆ ಮೈದಾನದಲ್ಲಿ ಕ್ಯಾಚ್ ಹಿಡಿಯಲು ಡೈವ್ ಮಾಡಿದ್ದ ಶ್ರೇಯಸ್ ಅಯ್ಯರ್ ಅವರು ಪಕ್ಕೆಲುಬಿನ ಗಾಯಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಪರೀಕ್ಷಿಸಿದ್ದ ವೈದ್ಯಕೀಯ ತಂಡ ಗಾಯದ ಗಂಭೀರತೆಯನ್ನು ಅರಿತು ಸಿಡ್ನಿಯ ಆಸ್ಪತ್ರೆಗೆ ದಾಖಲಿಸಿತ್ತು. ಸಿಡ್ನಿಯಲ್ಲಿ ಐಸಿಯು ಕೊಠಡಿಯಲ್ಲಿ ಅಯ್ಯರ್ ಪಕ್ಕೆಲುಬಿನ ಗುಲ್ಮಾ (spleen)ದ ಚಿಕಿತ್ಸೆಗೆ ಒಳಗಾಗಿದ್ದರು. ಈಗಾಗಲೇ ಸಿಡ್ನಿಯ ಆಸ್ಪತ್ರೆಯಿಂದ ಡಿಸ್ಛಾರ್ಜ್ ಆಗಿರುವ ಶ್ರೇಯಸ್ ಅಯ್ಯರ್ ಅವರು ಭಾರತಕ್ಕೆ ವಾಪಸ್ ಆಗಿ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಸದ್ಯ ಇದರ ಬೆನ್ನಲ್ಲೇ ಮನೆಯ ಬಳಿ ಆಸ್ಪತ್ರೆಗೆ ತೆರಳಿದ್ದ ಶ್ರೇಯಸ್ ಅಯ್ಯರ್ ಅವರು ಅಲ್ಟ್ರಾಸೋನೋಗ್ರಾಫಿ ಸ್ಕ್ಯಾನ್ಗೆ ಒಳಗಾಗಿದ್ದರು.ಮುಖ್ಯ ವೈದ್ಯರಾಗಿರುವ ದಿನ್ಶಾ ಪಾರ್ದಿವಾಲಾ, ಅಯ್ಯರ್ ಅವರ ಆರೋಗ್ಯವನ್ನು ಪರೀಕ್ಷಿಸಿದ್ದಾರೆ. ಸದ್ಯ ಹೊಟ್ಟೆಯ ಮೇಲೆ ಹೆಚ್ಚು ಒತ್ತಡವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.ವೈದ್ಯರು ಇನ್ನು ಎರಡು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಬೇಕು.ಬಳಿಕ ಇನ್ನೊಮ್ಮೆ ಸ್ಕ್ಯಾನ್ ಮಾಡಿ ಸ್ಪಷ್ಟವಾದ ಮಾಹಿತಿ ನೀಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.ಹೀಗಾಗಿ ಟೀಮ್ ಇಂಡಿಯಾಗೆ ಇದು ಹಿನ್ನಡೆ ಎಂದು ಹೇಳಬಹುದು.
ಎರಡು ತಿಂಗಳು ನಂತರ ನಡೆಸಲಾಗುವ ಸ್ಕ್ಯಾನ್ ಬಳಿಕವೇ ಶ್ರೇಯಸ್ ಅಯ್ಯರ್ ಅವರು ಬೆಂಗಳೂರಿನಲ್ಲಿ ಇರುವ ಬಿಸಿಸಿಐನ ಎಕ್ಸ್ಲೆನ್ಸ್ ಬರಲು ಅನುಮತಿ ನೀಡಲಾಗುತ್ತದೆ ಎಂದು ವರದಿಯೊಂದು ಹೇಳಿದೆ.ವೈದ್ಯಕೀಯ ತಂಡದ ಶಿಫಾರಸ್ಸು ಪ್ರಕಾರ ಶ್ರೇಯಸ್ ಅಯ್ಯರ್ ಅವರು ಇನ್ನು ಎರಡು, ಮೂರು ತಿಂಗಳು ಟೀಮ್ ಇಂಡಿಯಾದಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.ಇದರಿಂದ ದಕ್ಷಿಣಾ ಆಫ್ರಿಕಾ ಎದುರಿನ ಏಕದಿನ ಸರಣಿ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಗಳು ಸೇರಿದಂತೆ ಪ್ರಮುಖವಾದ ಅಂತರಾಷ್ಟ್ರೀಯ ಪಂದ್ಯಗಳಿಂದ ತಪ್ಪಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಟೀಮ್ ಇಂಡಿಯಾದ ಉಪನಾಯಕನ ಪಟ್ಟ ಅಲಂಕರಿಸಿದ್ದ ಶ್ರೇಯಸ್ ಅಯ್ಯರ್ ಅವರು ತಂಡದಲ್ಲಿ ಅದ್ಭುತ ಪ್ರದರ್ಶನಗಳನ್ನು ನೀಡುತ್ತಿದ್ದರು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ವಿರುದ್ಧದ ಏಕದಿನ ಸರಣಿಯ ಪಂದ್ಯದಲ್ಲಿ ಗಂಭೀರವಾದ ಗಾಯಕ್ಕೆ ಒಳಗಾಗಿದ್ದರು.ಇದರಿಂದ ಈಗಲೂ ಶ್ರೇಯಸ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇದು ಭಾರತ ತಂಡಕ್ಕೆ ದೊಡ್ಡ ಹಿನ್ನೆಡೆಯಾಗಿದೆ.