)
WPL Mega Auction 2026; ಐಪಿಎಲ್ನಂತೆ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲುಪಿಎಲ್) ಕೂಡ ದೇಶದಲ್ಲಿ ಸಖತ್ ಟ್ರೆಂಡ್ ಪಡೆದುಕೊಂಡಿದೆ. ಮೆಗಾ ಆಕ್ಷನ್ಗೂ ಇನ್ನೇನು ಕೌಂಟ್ಡೌನ್ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಈಗ ಡಬ್ಲುಪಿಎಲ್ನ ಐದು ಫ್ರಾಂಚೈಸಿಗಳು ಬಲಿಷ್ಠ ಟೀಮ್ ಕಟ್ಟಲು ಬಿಗ್ ಪ್ಲಾನ್ ಮಾಡುತ್ತಿವೆ.ಈ ಹಿನ್ನೆಲೆಯಲ್ಲಿ ಆಕ್ಷನ್ಲ್ಲೂ ಅತ್ಯುತ್ತಮ ಆಟಗಾರ್ತಿಯರನ್ನ ಖರೀದಿ ಮಾಡಲು ಯೋಜನೆ ಹಾಕಿಕೊಂಡಿವೆ.
2026ರ ಡಬ್ಲುಪಿಎಲ್ನ ಮೆಗಾ ಹರಾಜು ಈ ಬಾರಿ ದೆಹಲಿಯಲ್ಲಿ ನವೆಂಬರ್ 27 ರಂದು ನಡೆಯಲಿದೆ.ಈ ಆಕ್ಷನ್ನಲ್ಲಿ ಟೀಮ್ ಇಂಡಿಯಾದ ಆಟಗಾರ್ತಿಯರಿಗೆ ಹೆಚ್ಚಿನ ಬೇಡಿಕೆ ಇರುವ ನಿರೀಕ್ಷೆ ಇದೆ.ಏಕೆಂದರೆ ಈ ಬಾರಿ ಮಹಿಳಾ ವಿಶ್ವಕಪ್ ಗೆದ್ದಿರುವ ಭಾರತ ತಂಡದ ಆಟಗಾರ್ತಿರ ಪೈಕಿ ರೇಣುಕಾ ಸಿಂಗ್, ದೀಪ್ತಿ ಶರ್ಮಾರಂತವರು ಒಳ್ಳೆಯ ಹಣ ಪಡೆದುಕೊಳ್ಳಲಿದ್ದಾರೆ. ಜೊತೆಗೆ ಅಲಿಸಾ ಹೀಲಿಯಂತಹ ವಿದೇಶಿ ಆಟಗಾರ್ತಿಯರಿಗೂ ಭಾರೀ ಬೇಡಿಕೆ ಇದೆ ಎಂದು ಹೇಳಲಾಗುತ್ತಿದೆ.
ಮೆಗಾ ಹರಾಜಿನಲ್ಲಿ ಒಟ್ಟು 277 ಪ್ಲೇಯರ್ಸ್ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 23 ವಿದೇಶಿ ಆಟಗಾರರ್ತಿಯರ ಸ್ಲಾಟ್ಗೆ 83 ಫಾರಿನ್ ಆಟಗಾರ್ತಿಯರು ಸ್ಪರ್ಧೆ ಮಾಡುತ್ತಿದ್ದಾರೆ.ಇನ್ನು ಈ ಸಲದ ಡಬ್ಲುಪಿಎಲ್ನ ಸ್ಲಾಟ್ಗೆ ಬೇಕಾಗಿರುವುದು ಕೇವಲ 73 ಆಟಗಾರ್ತಿಯರು ಮಾತ್ರ.ಹೀಗಾಗಿ ಹರಾಜಿನಲ್ಲಿ ಐದು ಫ್ರಾಂಚೈಸಿಗಳು ತಮ್ಮಲಿರುವ ಹಣದಲ್ಲಿ ಎಲ್ಲವನ್ನೂ ಅಳೆದು ತೂಗಿ ಪ್ಲೇಯರ್ಸ್ ಅನ್ನು ಖರೀದಿ ಮಾಡಲಿವೆ.
ಇನ್ನು ಈ ಎಂಟು ಆಟಗಾರ್ತಿಯರ ಮೇಲೆ ಫ್ರಾಂಚೈಸಿಗಳು ಹಣದ ಹೊಳೆಯೇ ಹರಿಯಲಿದೆ ಎಂದು ಹೇಳಲಾಗುತ್ತಿದೆ.ಈ ಪಟ್ಟಿಯಲ್ಲಿ ಭಾರತದ ದೀಪ್ತಿ ಶರ್ಮಾ, ರೇಣುಕಾ ಸಿಂಗ್, ನ್ಯೂಜಿಲೆಂಡ್ನ ಸೋಫಿಯಾ ಡಿವೈನ್, ಅಮೇಲಿ ಕೆರ್, ಇಂಗ್ಲೆಂಡ್ನ ಸೋಫಿಯಾ ಎಕ್ಲೆಸ್ಟೊನ್, ಆಸ್ಟ್ರೇಲಿಯಾದ ಅಲಿಸಾ ಹೀಲಿ, ಮೆಗ್ ಲ್ಯಾನಿಂಗ್ ಮತ್ತು ಸೌತ್ ಆಫ್ರಿಕಾದ ಲೌರಾ ವೊಲ್ವಾರ್ದತ್ ಇದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯಾರು ಯಾರು ಇದ್ದಾರೆ?
ಸ್ಮೃತಿ ಮಂದಾನ (3.5 ಕೋಟಿ ರೂ.), ವಿಕೆಟ್ ಕೀಪರ್ ರಿಚಾ ಘೋಷ್ (2.75 ಕೋಟಿ ರೂ), ಎಲ್ಲಿಸ್ ಪೆರ್ರಿ (2 ಕೋಟಿ ರೂ), ಶ್ರೇಯಾಂಕಾ ಪಾಟೀಲ್ (60 ಲಕ್ಷ ರೂ).
ಯಾರ ಬಳಿ ಎಷ್ಟು ಹಣ ಇದೆ?
ಯುಪಿ ವಾರಿಯರ್ಸ್- 14.50 ಕೋಟಿ ರೂ
ಗುಜರಾತ್ ಜೈಂಟ್ಸ್- 9 ಕೋಟಿ ರೂ
ರಾಯಲ್ ಚಾಲೆಂಜರ್ಸ್ ಬೆಂಗಳೂರು- 6.15 ಕೋಟಿ ರೂ
ಮುಂಬೈ ಇಂಡಿಯನ್ಸ್- 5. 75
ಡೆಲ್ಲಿ ಕ್ಯಾಪಿಟಲ್ಸ್- 5. 70 ಕೋಟಿ ರೂ