ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ತ್ರಿಶತಕ ಬಾರಿಸಿದ ದೇಶ ಯಾವುದು ಗೊತ್ತಾ? ಈ ಪಟ್ಟಿಯಲ್ಲಿ ಪಾಕ್‌ಗಿಂತ ಹಿಂದಿದೆ ಭಾರತ... ಹಾಗಾದ್ರೆ ಎಷ್ಟನೇ ಸ್ಥಾನ?

most triple centuries in cricket history: ಎಂಟು ದೇಶಗಳ ಬ್ಯಾಟ್ಸ್‌ಮನ್‌ಗಳು ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಸಾಧನೆ ಮಾಡಲು ಸಾಧ್ಯವಾಗಿದೆ. ಇದರಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ, ಭಾರತ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿವೆ. ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಕೊನೆಯ ಸ್ಥಾನದಲ್ಲಿವೆ.

Written by - Bhavishya Shetty | Last Updated : Dec 11, 2024, 07:42 PM IST
    • ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ತ್ರಿಶತಕ ಬಾರಿಸಿದ ದೇಶ ಯಾವುದು?
    • 32 ಬ್ಯಾಟ್ಸ್‌ಮನ್‌ಗಳು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ್ದಾರೆ.
    • ಈ ವಿಚಾರದಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ ಎಂಬುದನ್ನು ತಿಳಿಯೋಣ.
ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ತ್ರಿಶತಕ ಬಾರಿಸಿದ ದೇಶ ಯಾವುದು ಗೊತ್ತಾ? ಈ ಪಟ್ಟಿಯಲ್ಲಿ ಪಾಕ್‌ಗಿಂತ ಹಿಂದಿದೆ ಭಾರತ... ಹಾಗಾದ್ರೆ ಎಷ್ಟನೇ ಸ್ಥಾನ? title=
Most triple centuries

most triple centuries in cricket history: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಸಾಧನೆ ಮಾಡಲು ಕೆಲವೇ ಕೆಲವು ಬ್ಯಾಟ್ಸ್‌ಮನ್‌ಗಳು ಸಮರ್ಥರಾಗಿದ್ದಾರೆ. ಇದು ಏಕದಿನ ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳ ಬಗ್ಗೆ ಅಲ್ಲ, ಬದಲಾಗಿ ಟೆಸ್ಟ್ ಕ್ರಿಕೆಟ್‌ ವಿಚಾರವಾಗಿದೆ. ಡಾನ್ ಬ್ರಾಡ್ಮನ್, ಬ್ರಿಯಾನ್ ಲಾರಾ, ವೀರೇಂದ್ರ ಸೆಹ್ವಾಗ್ ಮತ್ತು ಕ್ರಿಸ್ ಗೇಲ್ (ತಲಾ ಎರಡು ತ್ರಿಶತಕ) ಸೇರಿದಂತೆ ಒಟ್ಟು 32 ಬ್ಯಾಟ್ಸ್‌ಮನ್‌ಗಳು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ್ದಾರೆ. ಹೀಗಿರುವಾಗ ಈ ವಿಚಾರದಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ ಎಂಬುದನ್ನು ಮುಂದೆ ತಿಳಿಯೋಣ.

ಇದನ್ನು ಓದಿ: ಊಟಕ್ಕೂ ಮುನ್ನ ಈ ಪಾನೀಯ ಕುಡಿದರೆ ಕಿಡ್ನಿ ಸ್ಟೋನ್‌ ಒಡೆದು ದೇಹದಿಂದ ಹೊರ ಬರುವುದು! ಮೂತ್ರಕೋಶದ ಕಾಯಿಲೆ ಹತ್ತಿರವೂ ಸುಳಿಯಲ್ಲ

ಎಂಟು ದೇಶಗಳ ಬ್ಯಾಟ್ಸ್‌ಮನ್‌ಗಳು ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಸಾಧನೆ ಮಾಡಲು ಸಾಧ್ಯವಾಗಿದೆ. ಇದರಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ, ಭಾರತ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿವೆ. ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಕೊನೆಯ ಸ್ಥಾನದಲ್ಲಿವೆ.

ಆಸ್ಟ್ರೇಲಿಯಾ ಅತಿ ಹೆಚ್ಚು ತ್ರಿಶತಕಗಳ ದಾಖಲೆ ಹೊಂದಿದೆ. ಈ ದೇಶದ ಬ್ಯಾಟ್ಸ್‌ಮನ್‌ಗಳು ಎಂಟು ಬಾರಿ ತ್ರಿಶತಕ ಬಾರಿಸಿದ್ದು, ಡಾನ್ ಬ್ರಾಡ್ಮನ್ (2), ಬಾಬ್ ಸಿಂಪ್ಸನ್ (1), ಬಾಬ್ ಕೌಪರ್ (1), ಮಾರ್ಕ್ ಟೇಲರ್ (1), ಮ್ಯಾಥ್ಯೂ ಹೇಡನ್ (1), ಮೈಕೆಲ್ ಕ್ಲಾರ್ಕ್ (1) ಮತ್ತು ಡೇವಿಡ್ ವಾರ್ನರ್ (1) ಹೆಸರು ಈ ಪಟ್ಟಿಯಲ್ಲಿದೆ.

ಅತಿ ಹೆಚ್ಚು ತ್ರಿಶತಕ ಬಾರಿಸಿದ ತಂಡಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಸಮಬಲ ಸಾಧಿಸಿವೆ. ಉಭಯ ತಂಡಗಳ ಆಟಗಾರರು ತಲಾ 6 ​​ಬಾರಿ ತ್ರಿಶತಕ ಬಾರಿಸಿದ್ದಾರೆ. ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ (2), ಕ್ರಿಸ್ ಗೇಲ್ (2), ಗ್ಯಾರಿ ಸೋಬರ್ಸ್ (1) ಮತ್ತು ಲಾರೆನ್ಸ್ ರೋವ್ (1) ಈ ಸಾಧನೆ ಮಾಡಿದ್ದರೆ, ಇಂಗ್ಲೆಂಡ್ ಪರ ಆಂಡಿ ಸ್ಯಾಂಡಮ್ (1), ವಾಲಿ ಹ್ಯಾಮಂಡ್ (1), ಲಿಯೋನಲ್ ಹಟ್ಟನ್ (1) 1) ), ಜಾನ್ ಎರಿಚ್ (1), ಗ್ರಹಾಂ ಗೂಚ್ (1) ಮತ್ತು ಹ್ಯಾರಿ ಬ್ರೂಕ್ (1) ಹೆಸರು ಇದರಲ್ಲಿ ಸೇರಿವೆ.

ಇನ್ನೊಂದೆಡೆ ಅತಿ ಹೆಚ್ಚು ತ್ರಿಶತಕಗಳನ್ನು ಗಳಿಸಿದ ದೇಶಗಳ ವಿಷಯದಲ್ಲಿ ಪಾಕಿಸ್ತಾನವು ಭಾರತಕ್ಕಿಂತ ಮುಂದಿದೆ.  ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ನಾಲ್ಕು ಬಾರಿ ತ್ರಿಶತಕಗಳನ್ನು ಗಳಿಸಿದ್ದರೆ, ಭಾರತ ಮೂರು ಬಾರಿಯಷ್ಟೇ ತ್ರಿಶತಕ ಬಾರಿಸಿದೆ. ಪಾಕ್‌ ಪರ ಹನೀಫ್ ಮೊಹಮ್ಮದ್ (1) ಇಂಜಮಾಮ್ ಉಲ್ ಹಕ್ (1), ಯೂನಿಸ್ ಖಾನ್ (1) ಮತ್ತು ಅಜರ್ ಅಲಿ (1) ತ್ರಿಶತಕ ಸಿಡಿಸಿದ್ದರೆ. ವೀರೇಂದ್ರ ಸೆಹ್ವಾಗ್ (2) ಮತ್ತು ಕರುಣ್ ನಾಯರ್ (1) ಮಾತ್ರ ಭಾರತಕ್ಕೆ ಈ ಕೊಡುಗೆ ಕೊಡಲು ಸಾಧ್ಯವಾಗಿದೆ.

ಇದನ್ನು ಓದಿ: ಬಿಗ್‌ ಬಾಸ್‌ನಲ್ಲಿ ಮಧ್ಯರಾತ್ರಿ ಎಲಿಮಿನೇಷನ್‌!? ದೊಡ್ಮನೆ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದು ಹೊರನಡೆದ ಟಾಪ್‌ ಕಂಟೆಸ್ಟೆಂಟ್‌.. ನಡೆದೇಬಿಡ್ತು ಯಾರೂ ಊಹಿಸಿರದ ಘಟನೆ

ಶ್ರೀಲಂಕಾದ ಪರ ಸನತ್ ಜಯಸೂರ್ಯ (1), ಮಹೇಲಾ ಜಯವರ್ಧನೆ (1) ಮತ್ತು ಕುಮಾರ ಸಂಗಕ್ಕಾರ (1) ಕೂಡ ತ್ರಿಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ನ್ಯೂಜಿಲೆಂಡ್ ಪರ ಬ್ರೆಂಡನ್ ಮೆಕಲಮ್ (1) ಮತ್ತು ದಕ್ಷಿಣ ಆಫ್ರಿಕಾ ಪರ ಹಾಸಿಮ್ ಆಮ್ಲ (1) ಬಾರಿ ತ್ರಿಶತಕ ಸಿಡಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News