)
Most runs in Mens T20 Asia Cup
: ಏಷ್ಯಾಕಪ್ ಟೂರ್ನಿಯ ರೋಮಾಂಚನ ಮತ್ತೊಮ್ಮೆ ಆರಂಭವಾಗಿದೆ. ಈ ಬಾರಿ ಅದು ಟಿ20 ಸ್ವರೂಪದಲ್ಲಿರುತ್ತದೆ. ಟಿ20 ಏಷ್ಯಾಕಪ್ ಇಲ್ಲಿಯವರೆಗೆ ಎರಡು ಬಾರಿ ನಡೆದಿದೆ, ಆದ್ದರಿಂದ ಈ ಅವಧಿಯಲ್ಲಿ ಯಾರು ಹೆಚ್ಚು ರನ್ ಗಳಿಸಿದ್ದಾರೆಂದು ತಿಳಿದುಕೊಳ್ಳುವುದು ಮುಖ್ಯ. ಟಿ20 ಏಷ್ಯಾಕಪ್ನಲ್ಲಿ ಅತಿಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ಮನ್ಗಳ ಮಾಹಿತಿ ಇಲ್ಲಿದೆ ನೋಡಿ....
ವಿರಾಟ್ ಕೊಹ್ಲಿ ಇದುವರೆಗೆ ಟಿ20 ಏಷ್ಯಾಕಪ್ನಲ್ಲಿ ಅತಿಹೆಚ್ಚು ರನ್ ಗಳಿಸಿದ್ದಾರೆ. ಕೊಹ್ಲಿ 2016 ಮತ್ತು 2022ರಲ್ಲಿ ಟಿ20 ಏಷ್ಯಾಕಪ್ ಆಡಿದ್ದಾರೆ. ಒಟ್ಟು 10 ಪಂದ್ಯಗಳಲ್ಲಿ 429 ರನ್ ಗಳಿಸಿದ್ದಾರೆ. ಅವರು ಒಂದು ಶತಕ ಮತ್ತು ಮೂರು ಅರ್ಧಶತಕ ಬಾರಿಸಿದ್ದಾರೆ. ಅವರ ಸರಾಸರಿ 85.80 ಆಗಿದ್ದು, 132ರ ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ್ದಾರೆ.
ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಎರಡನೇ ಸ್ಥಾನ ಪಡೆದಿದ್ದಾರೆ. ರಿಜ್ವಾನ್ 2022ರ ಟಿ20 ಏಷ್ಯಾ ಕಪ್ ಆಡಿದ್ದಾರೆ. ಈ ಸಮಯದಲ್ಲಿ ರಿಜ್ವಾನ್ 6 ಪಂದ್ಯಗಳನ್ನ ಆಡುವ ಮೂಲಕ 281 ರನ್ ಗಳಿಸಿದ್ದಾರೆ. ಅವರು ಮೂರು ಅರ್ಧಶತಕಗಳನ್ನ ಗಳಿಸಿದ್ದಾರೆ. ಅವರ ಸರಾಸರಿ 56.20 ಆಗಿದ್ದು, 117.57 ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ್ದಾರೆ. ಆದರೆ ಈ ಬಾರಿ ಮೊಹಮ್ಮದ್ ರಿಜ್ವಾನ್ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರು ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್ 2016 ಮತ್ತು 2022ರಲ್ಲಿ ಟಿ20 ಏಷ್ಯಾ ಕಪ್ ಆಡಿದ್ದಾರೆ. ಈ ಅವಧಿಯಲ್ಲಿ ರೋಹಿತ್ 9 ಪಂದ್ಯಗಳನ್ನ ಆಡುವ ಮೂಲಕ 271 ರನ್ ಗಳಿಸಿದ್ದಾರೆ. ಎರಡು ಅರ್ಧಶತಕ ಬಾರಿಸಿರುವ ರೋಹಿತ್, 30.11 ಸರಾಸರಿ ಮತ್ತು 141.14 ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ್ದಾರೆ. ಆದರೆ ಈಗ ರೋಹಿತ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾಗಿದ್ದಾರೆ.
ಹಾಂಗ್ ಕಾಂಗ್ ಪರ ಕ್ರಿಕೆಟ್ ಆಡುವ ಬಾಬರ್ ಹಯಾತ್ ಅವರ ಹೆಸರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬಾಬರ್ ಹಯಾತ್ 2016ರಲ್ಲಿ ಮತ್ತು 2022ರಲ್ಲಿ ಟಿ20 ಏಷ್ಯಾ ಕಪ್ ಆಡಿದ್ದಾರೆ. ಕೇವಲ 5 ಪಂದ್ಯಗಳಲ್ಲಿ 235 ರನ್ ಗಳಿಸಿದ್ದಾರೆ. ಬಾಬರ್ ಅವರ ಹೆಸರಿನಲ್ಲಿ ಒಂದು ಶತಕ ಮತ್ತು ಅರ್ಧಶತಕವಿದೆ. ಬಾಬರ್ ಅವರ ಸರಾಸರಿ 47.00 ಆಗಿದ್ದು, 146.87 ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ್ದಾರೆ. ಈ ಬಾರಿಯೂ ಅವರಿಗೆ ಹಾಂಗ್ ಕಾಂಗ್ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಈ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಇಬ್ರಾಹಿಂ ಜದ್ರಾನ್ ಐದನೇ ಸ್ಥಾನದಲ್ಲಿದ್ದಾರೆ. ಜದ್ರಾನ್ 2022ರ ಟಿ20 ಏಷ್ಯಾ ಕಪ್ನಲ್ಲಿ ಮಾತ್ರ ಆಡಿದ್ದಾರೆ. ಈ ಅವಧಿಯಲ್ಲಿ ಅವರು 5 ಪಂದ್ಯಗಳಲ್ಲಿ 196 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಇದೆ. ಇಬ್ರಾಹಿಂ ಜದ್ರಾನ್ ಅವರ ಸರಾಸರಿ 65.33 ಆಗಿದ್ದು, 104.24 ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ್ದಾರೆ. ಈ ಬಾರಿಯೂ ಅವರು ತಮ್ಮ ತಂಡದ ಪರ ಆಡಲಿದ್ದಾರೆ.