IPL 2022: ಇಂದು ಆರ್‌ಸಿಬಿ-ಲಕ್ನೋ ಪ್ಲೇ ಆಫ್ ಜಿದ್ದಾಜಿದ್ದಿ: ಮಳೆ ಅಡ್ಡಿಯಾದರೆ ಮುಂದೇನು ಗತಿ!
ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಫಾಪ್ ಡು ಪ್ಲೆಸಿಸ್ ಮುಂದಾಳತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಹಣಾಹಣಿ ನಡೆಯಲಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿರುವ ಉಭಯ ತಂಡಗಳು ಇಂದು ನಡೆಯುವ ಪಂದ್ಯದಲ್ಲಿ ಯಾವರೀತಿ ಆಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಕ್ವಾಲಿಫೈಯರ್ ಹಂತದ 2ನೇ ಸುತ್ತು ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಸಂಜೆ 7.30ಕ್ಕೆ ಇಂದು ನಡೆಯಲಿದೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಆಟದಲ್ಲಿ ಗೆಲುವಿಗಾಗಿ ಸೆಣಸಾಡಲಿದೆ. ಇನ್ನು ಕೆಲವೇ ದಿನಗಳಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಈಗಾಗಲೇ ಗುಜರಾತ್ ಟೈಟಾನ್ಸ್ ಅಂತಿಮ ಸುತ್ತಿಗೆ ಲಗ್ಗೆಯಿಟ್ಟಿದೆ. ಇಂದು ನಡೆಯುವ ಪಂದ್ಯದಲ್ಲಿ ಯಾವ ತಂಡ ಕ್ವಾಲಿಫೈಯರ್ ಮೂರನೇ ಸುತ್ತಿಗೆ ಪಾದಾರ್ಪಣೆ ಮಾಡಿ, ರಾಜಸ್ಥಾನ ವಿರುದ್ಧ ಹೋರಾಡಲಿದೆ ಎಂದು ಕಾದುನೋಡಬೇಕಿದೆ.
ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಫಾಪ್ ಡು ಪ್ಲೆಸಿಸ್ ಮುಂದಾಳತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಹಣಾಹಣಿ ನಡೆಯಲಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿರುವ ಉಭಯ ತಂಡಗಳು ಇಂದು ನಡೆಯುವ ಪಂದ್ಯದಲ್ಲಿ ಯಾವರೀತಿ ಆಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಇದನ್ನು ಓದಿ: ಐಪಿಎಲ್ 2022: ಕ್ರಿಕೆಟ್ ನಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಾರೆಯೇ ಕೊಹ್ಲಿ?
ಮಳೆ ಅಡ್ಡಿಯಾದ್ರೆ ಮುಂದೇನು:
ಕೊಲ್ಕತ್ತಾದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಈಡನ್ ಗಾರ್ಡನ್‌ನ ಗ್ಯಾಲರಿಗೆ ಸಿಡಿಲು ಬಡಿದಿದೆ. ಪರಿಣಾಮ ಗ್ಲಾಸ್‌ಗಳೆಲ್ಲ ಒಡೆದು ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಇನ್ನು ಮಳೆ ಮುಂದುವರೆಯುವ ಸಾಧ್ಯತೆಯಿದೆ. ಒಂದು ವೇಳೆ ಇಂದು ಮಳೆಯಿಂದ ಪಂದ್ಯ ರದ್ದಾದರೆ, ಆರ್‌ಸಿಬಿ ಮನೆ ದಾರಿ ಹಿಡಿಯೋದು ಪಕ್ಕಾ. ಏಕೆಂದರೆ ಆರ್‌ಸಿಬಿಯ ರನ್‌ರೇಟ್, ಲಕ್ನೋ ತಂಡಕ್ಕಿಂತ ಕಡಿಮೆಯಿದ್ದು, ಲೆಕ್ಕಾಚಾರದ ಪ್ರಕಾರ ಮೂರನೇ ಸ್ಥಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವಿದೆ.
ಆರ್‌ಸಿಬಿ ಕಪ್ ಗೆಲ್ಲಬೇಕಾದ್ರೆ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಿದೆ. ಹದಿನೈದು ಟೂರ್ನಿಯಲ್ಲಿ ಎಂಟು ಬಾರಿ ಪ್ಲೇ ಆಫ್ ಪ್ರವೇಶ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಕಪ್ ಎತ್ತಿಕೊಳ್ಳುವಲ್ಲಿ ವಿಫಲವಾಗಿದೆ. ಈ ಬಾರಿಯಾದ್ರೂ ಕಪ್ ತನ್ನ ಮಡಿಲಿಗೆ ಹಾಕಿಕೊಳ್ಳುತ್ತಾ ಎಂಬ ಕುತೂಹಲ ಮನೆ ಮಾಡಿದೆ. ಆದರೆ ಮಳೆ ಅಡ್ಡಿಪಡಿಸಿದರೆ ಆರ್‌ಸಿಬಿ ಕನಸಿಗೆ ನೀರೆರಚಿದಂತಾಗೋದು ಪಕ್ಕಾ.
ಸಂಭಾವ್ಯ ಆಟಗಾರರ ಪಟ್ಟಿ:
ಲಕ್ನೋ ಸೂಪರ್ ಜೈಂಟ್ಸ್:
ಕ್ವಿಂಟನ್ ಡಿ ಕಾಕ್ (ವಿ.ಕೀ), ಕೆಎಲ್ ರಾಹುಲ್ (ಕ್ಯಾ), ಎವಿನ್ ಲೆವಿಸ್, ದೀಪಕ್ ಹೂಡಾ, ಆಯುಷ್ ಬಡೋನಿ / ಮನನ್ ವೋಹ್ರಾ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್ / ಕೃನಾಲ್ ಪಾಂಡ್ಯ, ಮೊಹ್ಸಿನ್ ಖಾನ್, ಅವೇಶ್ ಖಾನ್, ರವಿ ಬಿಷ್ಣೋಯ್
ಇದನ್ನು ಓದಿ: IPL 2022: ಇಲ್ಲಿದೆ ಐಪಿಎಲ್‌ನ Orange Cap-Purple Cap ಬಗ್ಗೆ ನಿಮಗರಿದ ಸತ್ಯಾಂಶ!
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಕ್ಯಾ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿ.ಕೀ), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಸಿದ್ದಾರ್ಥ್ ಕೌಲ್ / ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.