PBKS vs MI: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಸದ್ಯ ಸುದ್ದಿಯಲ್ಲಿದ್ದಾರೆ. 2025 ರ ಐಪಿಎಲ್‌ನಲ್ಲಿ ತಮ್ಮ ನಾಯಕತ್ವದಿಂದ ಎಲ್ಲರ ಗಮನ ಸೆಳೆದಿರುವುದು ಮಾತ್ರವಲ್ಲದೆ, ತಮ್ಮ ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಕ್ವಾಲಿಫೈಯರ್ 2ರಲ್ಲಿ, ಅಯ್ಯರ್ ತಮ್ಮ ಇನ್ನಿಂಗ್ಸ್ ಆಧಾರದ ಮೇಲೆ ಮುಂಬೈ ಇಂಡಿಯನ್ಸ್‌ಗೆ ಹೊರಬರುವ ಮಾರ್ಗವನ್ನು ತೋರಿಸಿದರು ಎಂದೆನ್ನಬಹುದು. ಆದರೆ ಅಂತಹ ಮಹತ್ತರ ಪಂದ್ಯದಲ್ಲಿ ಗೆದ್ದರೂ ಯಾವುದೇ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿರಲಿಲ್ಲ. ಹೀಗಾಗಿ ಈ ವಿಚಾರ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.
ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ಸರಿಯಾದ ಮಾರ್ಗ ಯಾವುದು? ಏನು ತಿನ್ನಬೇಕು, ಏನು ತಿನ್ನಬಾರದು, ಎಷ್ಟು ಗಂಟೆ ವ್ಯಾಯಾಮ ಮಾಡಬೇಕು?
ಶ್ರೇಯಸ್ ಅಯ್ಯರ್ ಅವರನ್ನು ಇತ್ತೀಚೆಗೆ ಟೀಮ್ ಇಂಡಿಯಾದ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಆ ನಂತರವೇ ಇಷ್ಟೊಂದು ಮಂಕಾಗಿ ಕಾಣುತ್ತಿದ್ದಾರೆ ಅಯ್ಯರ್. ಸದ್ಯ ಚರ್ಚೆಯಲ್ಲಿರುವ ವಿಚಾರದ ಬಗ್ಗೆ ಪಂಜಾಬ್ ಕೋಚ್ ರಿಕಿ ಪಾಂಟಿಂಗ್ ಹೇಳಿಕೆ ನೀಡಿದ್ದಾರೆ.
"ಅಯ್ಯರ್ ಅವರನ್ನು ಕೈಬಿಡಲಾಗಿರುವುದನ್ನು ನೋಡಿ ನನಗೆ ನಿಜವಾಗಿಯೂ ದುಃಖವಾಯಿತು. ಅವರಂತೆ ಪ್ರದರ್ಶನ ನೀಡುವ ಅನೇಕ ಆಟಗಾರರಿಗೆ ಅವಕಾಶ ಸಿಕ್ಕಿದೆ. ಆದರೆ ಅವರು ಅದನ್ನು ಚೆನ್ನಾಗಿ ಸ್ವೀಕರಿಸಿ ಮುಂದುವರೆದಿದ್ದಾರೆ. ಅದ್ಭುತ ಪ್ರದರ್ಶನ ನೀಡುವ ಹಸಿವು ಪ್ರತಿ ಬಾರಿಯೂ ಅವರ ಕಣ್ಣುಗಳಲ್ಲಿ ಗೋಚರಿಸುತ್ತದೆ. ಟೆಸ್ಟ್ ತಂಡದಲ್ಲಿ ಆಯ್ಕೆಯಾದ ಆಟಗಾರರಿಗೆ ಪ್ರಥಮ ದರ್ಜೆ ಕ್ರಿಕೆಟ್ ಜೊತೆಗೆ ಐಪಿಎಲ್‌ನಲ್ಲಿ ಅವರ ಉತ್ತಮ ಪ್ರದರ್ಶನದ ಆಧಾರದ ಮೇಲೆ ಸ್ಥಾನ ನೀಡಲಾಗಿದೆ. ಶ್ರೇಯಸ್ ಕೂಡ ಆ ಆಟಗಾರರಂತೆಯೇ ಎಲ್ಲವನ್ನೂ ಮಾಡಿದ್ದಾರೆ" ಎಂದಿದ್ದಾರೆ.
ಕ್ವಾಲಿಫೈಯರ್-2 ರಲ್ಲಿ, ಮುಂಬೈ ಮೊದಲು ಪಂಜಾಬ್ ಕಿಂಗ್ಸ್ ವಿರುದ್ಧ ಬ್ಯಾಟಿಂಗ್ ಮಾಡಿ ಸ್ಕೋರ್‌ಬೋರ್ಡ್‌ನಲ್ಲಿ 203 ರನ್‌ಗಳನ್ನು ಗಳಿಸಿತು. ಇದಕ್ಕೆ ಪ್ರತಿಯಾಗಿ ಕಣಕ್ಕಿಳಿದ ಪಂಜಾಬ್ ತಂಡವು, ಮೊದಮೊದಲು ಎಡವುತ್ತಿರುವಂತೆ ತೋರುತ್ತಿತ್ತು. ತಂಡವು ತನ್ನ ಎರಡೂ ಆರಂಭಿಕರನ್ನು ಬೇಗನೆ ಕಳೆದುಕೊಂಡಿತು. ಶ್ರೇಯಸ್ ಅಯ್ಯರ್ ಮತ್ತು ನೆಹಾಲ್ ವಧೇರಾ ಬ್ಯಾಟಿಂಗ್ ಮಾಡುವಾಗ ಅದ್ಭುತ ಇನ್ನಿಂಗ್ಸ್ ಆಡಿದರು. ಅಯ್ಯರ್ ತಮ್ಮ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳ ಸಹಾಯದಿಂದ 87 ರನ್‌ಗಳ ಪಂದ್ಯ ಗೆಲ್ಲುವ ಇನ್ನಿಂಗ್ಸ್ ಆಡಿದರು. ಈ ಮೂಲಕ ತಂಡವನ್ನು ಫೈನಲ್‌ಗೆ ಕರೆದೊಯ್ದರು.
ಚಾಂಪಿಯನ್ ಆಗುತ್ತಾರೆಯೇ?
ಜೂನ್ 3 ರಂದು ಐಪಿಎಲ್ ಹೊಸ ಚಾಂಪಿಯನ್ ಆಗುವ ದಿನಾಂಕ. ಪಂಜಾಬ್ ಮತ್ತು ಆರ್‌ಸಿಬಿ ತಂಡಗಳ ಹೆಸರಿನಲ್ಲಿ ಒಂದೇ ಒಂದು ಪ್ರಶಸ್ತಿಯೂ ಇಲ್ಲ. ಕಳೆದ ವರ್ಷ ಶ್ರೇಯಸ್ ಅಯ್ಯರ್ ತಮ್ಮ ನಾಯಕತ್ವದಲ್ಲಿ ಕೆಕೆಆರ್ ತಂಡವನ್ನು ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದರು. ಈ ಬಾರಿ ಎರಡೂ ತಂಡಗಳಲ್ಲಿ ಒಬ್ಬರು ಗೆದ್ದರೂ ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದಂತಾಗುತ್ತದೆ. ಅಯ್ಯರ್ ಮತ್ತು ಅವರ ತಂಡವು ಕ್ವಾಲಿಫೈಯರ್ -1 ರಲ್ಲಿ ಆರ್‌ಸಿಬಿ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಆದರೆ ಫೈನಲ್‌ನಲ್ಲಿ ಯಾವ ತಂಡ ಗೆಲ್ಲುತ್ತದೆ ಎಂಬುದನ್ನು ಮುಂದೆ ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









