Indian Premier League 2025: ಬಹುನಿರೀಕ್ಷಿತ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಗೆ ಅದ್ದೂರಿ ಚಾಲನೆ ಸಿಕ್ಕಿದೆ. 18ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಫೀಲ್ಡಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತ್ತಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ನಾಯಕ ಅಜಿಂಕ್ಯಾ ರಹಾನೆ (56), ಸುನಿಲ್ ನರೈನ್ (44) ಮತ್ತು ಅಂಗ್‌ಕ್ರಿಶ್ ರಘುವಂಶಿ (30) ರನ್ ಗಳಿಸಿದ್ದರು. 175 ರನ್‌ಗಳ ಬೃಹತ್ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಆರ್‌ಸಿಬಿ 16.2 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು. ಆರ್‌ಸಿಬಿ ಪರ ವಿರಾಟ್ ಕೊಹ್ಲಿ (ಅಜೇಯ 59) ಮತ್ತು ಫಿಲ್ ಸಾಲ್ಟ್ (56) ಆಕರ್ಷಕ ಅರ್ಧಶತಕ ಗಳಿಸಿದರು. ಇನ್ನುಳಿದಂತೆ ನಾಯಕ ರಜತ್ ಪಾಟೀದಾರ್ (34) ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ (ಅಜೇಯ 15) ರನ್ ಗಳಿಸಿದರು.
ಇದನ್ನೂ ಓದಿ: ಇಡೀ ಜೀವಮಾನದಲ್ಲಿ ಒಮ್ಮೆಯೂ ಸಹ ಮದ್ಯಪಾನ ಮತ್ತು ಧೂಮಪಾನ ಮಾಡದ ಟೀಂ ಇಂಡಿಯಾದ ನಾಲ್ವರು ದಿಗ್ಗಜ ಕ್ರಿಕೆಟಿಗರು ಇವರೇ!
ಅಂಪೈರ್ ಏಕೆ ಔಟ್ ನೀಡಲಿಲ್ಲ?
ಮೊದಲು ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತಾಗೆ ಆರಂಭಿಕ ಆಘಾತ ಎದುರಾಯಿತು. ಆರಂಭದಲ್ಲೇ ಕ್ವಿಂಟನ್ ಡಿ ಕಾಕ್ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಬಳಿಕ ನಾಯಕ ಅಜಿಂಕ್ಯ ರಹಾನೆ ಹಾಗೂ ಸುನಿಲ್ ನರೈನ್ ಅದ್ಭುತ 95 ರನ್‌ಗಳ ಜತೆಯಾಟವಾಡಿ ತಂಡಕ್ಕೆ ನೆರವಾದರು. ಈ ಜತೆಯಾಟದ ವೇಳೆ ಸುನಿಲ್ ನರೈನ್ ಅವರ ಬ್ಯಾಟ್ ವಿಕೆಟ್‌ಗೆ ಅಪ್ಪಳಿಸಿ ಸ್ಟಂಪ್ ಉರುಳಿತ್ತು. ಆದರೂ ಸಹ ಅಂಪೈರ್ ಔಟ್ ನೀಡಲಿಲ್ಲ. ಏಕೆ ಅಂಪೈರ್ ಔಟ್ ನೀಡಲಿಲ್ಲ? ರೂಲ್ಸ್ ಏನು ಹೇಳುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ..
What just happened there? 👀#RCB fans, was that OUT or NOT? 🤔
Watch LIVE action: https://t.co/iB1oqMusYv #IPLonJioStar 👉 KKR🆚RCB, LIVE NOW on Star Sports Network & JioHotstar! pic.twitter.com/FUK5q0hDGR
— Star Sports (@StarSportsIndia) March 22, 2025
ಯುವ ವೇಗಿ ರಸಿಕ್ ಸಲಾಮ್ ಎಸೆದ ಇನ್ನಿಂಗ್ಸ್‌ನ 8ನೇ ಓವರ್‌ನ 4ನೇ ಎಸೆತದಲ್ಲಿ ಚೆಂಡು ನರೈನ್ ತಲೆಯ ಮೇಲೆ ಹಾದು ಹೋಗಿತ್ತು. ಹೀಗಾಗಿ ನರೈನ್ ಚೆಂಡನ್ನು ಟಚ್ ಮಾಡುವ ಸಾಹಸ ಮಾಡಲಿಲ್ಲ. ಆದರೆ ಅವರ ಬ್ಯಾಟ್ ಅರಿವಿಲ್ಲದಂತೆಯೇ ವಿಕೆಟ್‌ಗೆ ಬಡಿದಿತ್ತು. ಆಗ ಬೇಲ್ಸ್ ಸಹ ಉರುಳಿ ಬಿತ್ತು. ಈ ವೇಳೆ ರಜತ್ ಪಾಟೀದಾರ್ ಹಾಗೂ ವಿರಾಟ್ ಕೊಹ್ಲಿ ಔಟ್‌ಗಾಗಿ ಮನವಿ ಕೂಡ ಮಾಡಿದರು. ಆದರೆ ಲೆಗ್‌ಅಂಪೈರ್ ಆ ಚೆಂಡನ್ನು ಔಟ್ ಬಾಲ್ ಎಂದು ತೀರ್ಪು ನೀಡಿದರು. ಹೀಗಾಗಿ ಆ ಚೆಂಡು ಡೆಡ್ ಬಾಲ್ ಎನಿಸಿಕೊಂಡಿತು.
ಇಂತಹ ಸಂದರ್ಭದಲ್ಲಿ ಅಂಪೈರ್ ತೀರ್ಪು ಮಹತ್ವದ ಪಾತ್ರ ವಹಿಸಲಿದೆ. ರೂಲ್ಸ್ ಸಹ ಅದನ್ನೇ ಹೇಳುತ್ತದೆ. ರೂಲ್ಸ್ ಪ್ರಕಾರ, ಒಂದು ವೇಳೆ ಚೆಂಡು ಡೆಡ್ ಬಾಲ್ ಎಂದು ಘೋಷಿಸಿದ ಬಳಿಕ ದೇಹದ ಯಾವುದೇ ಅಂಗ ಅಥವಾ ಬ್ಯಾಟ್ ವಿಕೆಟ್‌ಗೆ ತಗುಲಿದರೆ ಆಗ ಅದನ್ನು ಹಿಟ್ ವಿಕೆಟ್ ಅಂತಾ ಪರಿಗಣಿಸುವುದಿಲ್ಲ. ಒಂದು ವೇಳೆ ಚೆಂಡು ವೈಡ್ ಎಂದು ಘೋಷಿಸದಿದ್ದರೆ ಬಹುಶಃ ಸುನಿಲ್ ನರೈನ್ ಹಿಟ್ ವಿಕೆಟ್‌ಗೆ ಬಲಿಯಾಗುತ್ತಿದ್ದರು.
WELL PLAYED, SUNIL NARINE. 👌
- 44 (24) while opening. Narine has been unstoppable at opening, what an innings. pic.twitter.com/xIv6iNnOqG
— Mufaddal Vohra (@mufaddal_vohra) March 22, 2025
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.