)
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನ್ನು ಅನುಭವಿಸಿರುವುದು ಭಾರತ ತಂಡದ ಮುಖ್ಯ ಕೋಚ್ ಗಂಭೀರ್ ಅವರಿಗೆ ಬಾರಿ ದುಬಾರಿಯಾಗಿ ಪರಿಣಮಿಸಲಿದೆ ಎನ್ನಲಾಗಿದೆ.ಒಂದು ವೇಳೆ ಇನ್ನೊಂದು ಟೆಸ್ಟ್ ಪಂದ್ಯವನ್ನು ಸೋತಿದ್ದೆ ಆದಲ್ಲಿ ಅವರಿಗೆ ಕೋಚ್ ಹುದ್ದೆಯಿಂದ ಕೊಕ್ ನೀಡಲಾಗುತ್ತಿದೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.
ಹೌದು, ಈಗ ಭಾರತ ಇಲ್ಲಿಯವರೆಗೆ ತವರಿನಲ್ಲಿ 53 ಟೆಸ್ಟ್ಗಳನ್ನು ಆಡಿದೆ, ಅದರಲ್ಲಿ ಎಂಟು ಸೋಲುಗಳನ್ನು ಕಂಡಿದೆ. ಇದರಲ್ಲಿ ನಾಲ್ಕು ಸೋಲುಗಳು ಗೌತಮ್ ಗಂಭೀರ್ ಅವರು ಭಾರತದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಬಂದಿವೆ. ಒಟ್ಟಾರೆಯಾಗಿ, ಗಂಭೀರ್ ಇದುವರೆಗಿನ 18 ಟೆಸ್ಟ್ ಪಂದ್ಯಗಳಲ್ಲಿ 7 ಗೆಲುವು, 9 ಸೋಲು ಮತ್ತು ಎರಡು ಡ್ರಾ ಪಂದ್ಯಗಳನ್ನು ಕಂಡಿದ್ದಾರೆ.ಈಗ ಸ್ವದೇಶದಲ್ಲಿ ಗಂಭೀರ್ ಅವರ ಕೋಚ್ ಅವಧಿಯಲ್ಲಿ ಟೀಮ್ ಇಂಡಿಯಾದ ಕಳಪೆ ದಾಖಲೆಯು ಹಲವು ಪ್ರಶ್ನೆಗಳಿಗೆ ನಾಂದಿ ಹಾಡಿದೆ.
ಇದೆ ವೇಳೆ ಈಗ ಗಂಭೀರ್ ಬೆಂಬಲಕ್ಕೆ ಧಾವಿಸಿರುವ ಸೌರವ್ ಗಂಗೂಲಿ ಮುಖ್ಯ ಕೋಚ್ ನ್ನು ಬದಲಾಯಿಸುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.ಈ ಕುರಿತಾಗಿ ಸ್ಪೋರ್ಟ್ಸ್ ಟ್ಯಾಕ್ ಜೊತೆ ಮಾತನಾಡಿರುವ ಸೌರವ್ ಗಂಗೂಲಿ "ಈ ಹಂತದಲ್ಲಿ ಗೌತಮ್ ಗಂಭೀರ್ ಅವರನ್ನು ವಜಾಗೊಳಿಸುವ ಪ್ರಶ್ನೆಯೇ ಇಲ್ಲ, ಆದರೆ ಅವರು ಒಗ್ಗಟ್ಟಾಗಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಶ್ರಮಿಸಬೇಕು, ಏಕೆಂದರೆ ಫ್ಲಾಟ್ ಪಿಚ್ಗಳಲ್ಲಿ ಗೆಲ್ಲುವುದು ತುಂಬಾ ಕಷ್ಟಕರವಾಗಿರುತ್ತದೆ" ಎಂದು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಅದೇ ತಂಡವು ಪ್ಲಾಟ್ ಪಿಚ್ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು, ಆದರೆ ಇತ್ತೀಚೆಗೆ ತವರಿನಲ್ಲಿ ಆಡುವಾಗ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಗಂಗೂಲಿ ಹೇಳಿದ್ದಾರೆ.
ಭಾರತದಲ್ಲಿ, 4ನೇ ಮತ್ತು 5ನೇ ದಿನದ ಬೇಗನೆ ಬದಲಾಗುತ್ತದೆ, ಆದ್ದರಿಂದ ಅವರು ಅದರ ಬಗ್ಗೆ ತಾಳ್ಮೆಯಿಂದಿರಬೇಕು. ಕೊನೆಯ ದಿನದಂದು ಓವಲ್ನಲ್ಲಿ ಮತ್ತು ಎಡ್ಜ್ಬಾಸ್ಟನ್ನಲ್ಲಿ ನೀವು ನೋಡಿದಂತೆ ಬೌಲರ್ ಗಳು 20 ವಿಕೆಟ್ಗಳನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ಗಂಗೂಲಿ ಹೇಳಿದರು.
ಗಂಭೀರ್ ಕೋಚ್ ಆಗಿ ಮತ್ತು ಶುಭ್ಮನ್ ನಾಯಕನಾಗಿ ಇಂಗ್ಲೆಂಡ್ನ ಫ್ಲಾಟ್ ಪಿಚ್ಗಳಲ್ಲಿ ಅಸಾಧಾರಣವಾಗಿ ಪ್ರದರ್ಶನ ನೀಡಿದರು, ಮತ್ತು ಅವರು ಸ್ವದೇಶದಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸಬಹುದೆಂದು ನಾನು ದೃಢವಾಗಿ ನಂಬುತ್ತೇನೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದೆ ವೇಳೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮುಖ ನಂ. 3 ಸ್ಥಾನಕ್ಕೆ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಬಡ್ತಿ ನೀಡುವ ನಿರ್ಧಾರವನ್ನು ಸೌರವ್ ಬೆಂಬಲಿಸಲಿಲ್ಲ.ಈ ಕುರಿತಾಗಿ ಮಾತನಾಡಿದ ಗಂಗೂಲಿ' ಅವರು ಬ್ಯಾಟಿಂಗ್ ಕ್ರಮಾಂಕವನ್ನು ನೋಡಬೇಕು.ವಾಷಿಂಗ್ಟನ್ ಸುಂದರ್ಗೆ ಸಾಕಷ್ಟು ಸಮಯವಿದೆ, ಅವರು ಅದ್ಭುತ ಕ್ರಿಕೆಟಿಗ ಎಂದು ನಾನು ಭಾವಿಸುತ್ತೇನೆ, ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ 3 ನೇ ಸ್ಥಾನ ಅವರಿಗೆ ಸೂಕ್ತ ಎನ್ನುವುದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಅವರು ಹೇಳಿದರು.