World Cup 2023, Team India playing XI: 2023ರ ಏಕದಿನ ವಿಶ್ವಕಪ್‌’ನ ಐದನೇ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದೊಂದಿಗೆ ಎರಡೂ ತಂಡಗಳು ವಿಶ್ವಕಪ್ ಅಭಿಯಾನ ಆರಂಭಿಸಲಿವೆ. ಆದರೆ, ಈ ಪಂದ್ಯಕ್ಕೂ ಮುನ್ನವೇ ಉಭಯ ತಂಡಗಳು ಭಾರಿ ಹಿನ್ನಡೆ ಅನುಭವಿಸಿದ್ದು, ಭಾರತ ಮತ್ತು ಆಸ್ಟ್ರೇಲಿಯಾದ ಕೆಲ ಆಟಗಾರರು ಆಡುವ ಬಗ್ಗೆ ಅನುಮಾನವಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಮರದ ಕಾಯಿಯನ್ನು ಕುಟ್ಟಿಪುಡಿ ಮಾಡಿ ತಲೆಗೆ ಹಚ್ಚಿದರೆ ಬಿಳಿಕೂದಲು ಕಪ್ಪಾಗುತ್ತೆ!


ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಈ ಪಂದ್ಯಕ್ಕೂ ಮುನ್ನವೇ ತಮ್ಮ ತಮ್ಮ ತಂತ್ರಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಬೇಕಾವ ಪರಿಸ್ಥಿತಿ ಮುಂದಾಗಿದೆ. ಇನ್ನು ಈ ಪಂದ್ಯ ಮಧ್ಯಾಹ್ನ 2 ಗಂಟೆಯಿಂದ ನಡೆಯಲಿದ್ದು, ಟಾಸ್ ಅದಕ್ಕಿಂತ ಅರ್ಧ ಗಂಟೆ ಮೊದಲು ಅಂದರೆ ಮಧ್ಯಾಹ್ನ 1.30ಕ್ಕೆ ನಡೆಯಲಿದೆ.


ಇನ್ನು ಈ ವರದಿಯಲ್ಲಿ ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್-11 ಹೇಗಿದೆ ಎಂದು ತಿಳಿದುಕೊಳ್ಳೋಣ


ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ದೊಡ್ಡ ಸಮಸ್ಯೆ ಎದುರಿಸುತ್ತಿದೆ. ತಂಡದ ಅತ್ಯಂತ ಸ್ಫೋಟಕ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಭಾರತದ ವಿರುದ್ಧ ಆಡುವುದು ಅವರಿಗೆ ಕಷ್ಟಕರವಾಗಿದೆ. ಹೀಗಾಗಿ, ಕಮ್ಮಿನ್ಸ್ ಸ್ಟೊಯಿನಿಸ್ ಬದಲಿಗೆ ಕ್ಯಾಮರೂನ್ ಗ್ರೀನ್ ಅವರನ್ನು ಪ್ಲೇಯಿಂಗ್-11 ರಲ್ಲಿ ಸೇರಿಸಿಕೊಳ್ಳಬಹುದು ಎಂದು ಊಹಿಸಲಾಗಿದೆ.


ಇನ್ನೊಂದೆಡೆ ಅಲೆಕ್ಸ್ ಕ್ಯಾರಿಯವರನ್ನು ವಿಕೆಟ್ ಕೀಪರ್ ಆಗಿ ಸೇರಿಸಿಕೊಳ್ಳಬಹುದು. ಅನುಭವಿ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಮಾತ್ರ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.


ಗ್ಲೆನ್ ಮ್ಯಾಕ್ಸ್‌ವೆಲ್ ಭಾರತೀಯ ಪಿಚ್‌’ಗಳಲ್ಲಿ ಅಬ್ಬರಿಸುತ್ತಾರೆ. ಅವರ ಆಫ್ ಸ್ಪಿನ್ ಇಲ್ಲಿಯವರೆಗೆ ಪರಿಣಾಮಕಾರಿಯಾಗಿದೆ. ಚೆನ್ನೈನ ಟರ್ನಿಂಗ್ ಟ್ರ್ಯಾಕ್‌’ನಲ್ಲಿ ಮ್ಯಾಕ್ಸ್‌ವೆಲ್ ಅವರ ಉಪಸ್ಥಿತಿಯು ಮುಖ್ಯವಾಗಿದೆ. ಅವರು ಆಡಮ್ ಝಂಪಾ ಜೊತೆಗೆ ಆಡಲಿದ್ದಾರೆ. ನಾಯಕ ಕಮಿನ್ಸ್ ಹೊರತಾಗಿ, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಜಲ್‌ವುಡ್ ವೇಗದ ಬೌಲಿಂಗ್‌’ನ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.


ಆಸ್ಟ್ರೇಲಿಯಾದ ಸಂಭಾವ್ಯ ಪ್ಲೇಯಿಂಗ್ 11


ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ.


ಇನ್ಮುಂದೆ ಭಾರತ ತಂಡದ ಪ್ಲೇಯಿಂಗ್ 11 ಬಗ್ಗೆ ತಿಳಿಯೋಣ. ಆಸ್ಟ್ರೇಲಿಯಾದಂತೆಯೇ ಭಾರತದ ಒಬ್ಬ ಆಟಗಾರ ಕೂಡ ಆಡುವ ಬಗ್ಗೆ ಅನುಮಾನವಿದೆ. ಸ್ಟಾರ್ ಓಪನರ್ ಶುಬ್ಮನ್ ಗಿಲ್ ಡೆಂಗ್ಯೂನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಆಡುವುದೇ ಅನುಮಾನ. ಆದರೆ, ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಇಬ್ಬರೂ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಶುಭಮನ್ ಆಡುವ ಬಗ್ಗೆ ಟಾಸ್‌’ಗೆ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು, ಆದರೆ ಮಾಹಿತಿಯ ಪ್ರಕಾರ, ಶುಭ್ಮನ್ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ.


ಶುಭ್ಮನ್ ಆಡದೇ ಇದ್ದರೆ ರೋಹಿತ್ ಜೊತೆಗೆ ಇಶಾನ್ ಕಿಶನ್‌’ಗೆ ಓಪನಿಂಗ್ ಜವಾಬ್ದಾರಿ ನೀಡಬಹುದು. ಅದೇ ವೇಳೆ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು. ಶ್ರೇಯಸ್ ಸ್ಪಿನ್ ಚೆನ್ನಾಗಿ ಆಡುತ್ತಾರೆ, ಆದ್ದರಿಂದ ಅವರಿಗೆ ಸೂರ್ಯನಿಗಿಂತ ಆದ್ಯತೆ ನೀಡಬಹುದು.


ಅಶ್ವಿನ್-ಶಾರ್ದೂಲ್‌’ನಲ್ಲಿ ಯಾರಿಗೆ ಅವಕಾಶ?


ರವಿಚಂದ್ರನ್ ಅಶ್ವಿನ್ ಮತ್ತು ಶಾರ್ದೂಲ್ ಠಾಕೂರ್ ನಡುವೆ ಒಬ್ಬರನ್ನು ಆಯ್ಕೆ ಮಾಡಲು ಚರ್ಚೆ ನಡೆಯುತ್ತಿದೆ. ಚೆಪಾಕ್‌’ನ ಇತ್ತೀಚಿನ ದಾಖಲೆ ಮತ್ತು ಈ ಪಂದ್ಯಕ್ಕೆ ಸಿದ್ಧಪಡಿಸಿದ ಪಿಚ್ ಅನ್ನು ಪರಿಗಣಿಸಿ, ತಂಡದ ಆಡಳಿತವು ಅಶ್ವಿನ್ ರೂಪದಲ್ಲಿ ಮೂರನೇ ಸ್ಪಿನ್ನರ್‌’ಗೆ ಮಣೆ ಹಾಕುವ ಹೆಚ್ಚಿನ ಸಾಧ್ಯತೆಗಳಿವೆ.


ಭಾರತದ ಸಂಭಾವ್ಯ ಪ್ಲೇಯಿಂಗ್ 11


ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್/ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್/ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.


ಪಿಚ್ ವರದಿ: 


ಚೆಪಾಕ್’ನ ಈ ಮೈದಾನ ಬ್ಯಾಟಿಂಗ್ ಮತ್ತು ಬೌಲಿಂಗ್’ಗೆ ಉತ್ತಮವಾಗಿದೆ. ಇಲ್ಲಿ ಕಳೆದ ಎಂಟು ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು 227 ರಿಂದ 299 ರನ್ ಗಳಿಸಿವೆ. ಕಳೆದ ಎಂಟು ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಆರು ಬಾರಿ ಗೆದ್ದಿದೆ.


ಚೆಪಾಕ್ ಸ್ಟೇಡಿಯಂನ ODI ಪಂದ್ಯದ ದಾಖಲೆ


  • ಒಟ್ಟು ಪಂದ್ಯಗಳು: 23

  • ಮೊದಲು ಬ್ಯಾಟ್ ಮಾಡಿದ ತಂಡಕ್ಕೆ ಗೆಲುವು: 14 ಬಾರಿ

  • ರನ್ ಬೆನ್ನಟ್ಟಿದ ತಂಡಕ್ಕೆ ಗೆಲುವು: 8 ಬಾರಿ

  • ಮೊದಲ ಇನಿಂಗ್ಸ್‌’ನ ಸರಾಸರಿ ಸ್ಕೋರ್: 233

  • ತಂಡದಿಂದ ಅತ್ಯಧಿಕ ಸ್ಕೋರ್: 337

  • ತಂಡದಿಂದ ಕನಿಷ್ಠ ಸ್ಕೋರ್: 69

  • ಟಾಸ್ ಗೆದ್ದ ತಂಡ ಎಷ್ಟು ಬಾರಿ ಗೆದ್ದಿದೆ: 16 ಬಾರಿ

  • ಟಾಸ್ ಸೋತ ತಂಡ ಎಷ್ಟು ಬಾರಿ ಗೆದ್ದಿದೆ: 6 ಬಾರಿ

  • ಫಲಿತಾಂಶವಿಲ್ಲದ ಪಂದ್ಯ: 1


ಇದನ್ನೂ ಓದಿ: ಆಸೀಸ್ ವಿರುದ್ಧದ ಪಂದ್ಯದಿಂದ ಈ ಸ್ಟಾರ್ ಆಟಗಾರನನ್ನೇ ಹೊರಗಿಟ್ಟ ರೋಹಿತ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ