World Cup Team of the Tournament: ವಿಶ್ವಕಪ್ 2023ರ ಲೀಗ್ ಪಂದ್ಯಗಳು ಮುಗಿದಿವೆ. ಇನ್ನೇನು ಮೊದಲ ಸೆಮಿಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದ್ದು, ಎರಡನೇ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. 2023ರ ವಿಶ್ವಕಪ್ ವಿಜೇತ ತಂಡ ನವೆಂಬರ್ 19 ರಂದು ತಿಳಿಯಲಿದೆ.


COMMERCIAL BREAK
SCROLL TO CONTINUE READING

ಕ್ರಿಕೆಟ್ ಆಸ್ಟ್ರೇಲಿಯಾ ಪಂದ್ಯಾವಳಿಯ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿದೆ. ಇದರಲ್ಲಿ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಿದ್ದರೆ, ರೋಹಿತ್ ಶರ್ಮಾ ಅವರನ್ನು ಹೊರಗಿಟ್ಟಿದೆ. ಇನ್ನು ನ್ಯೂಜಿಲೆಂಡ್‌’ನ ಯುವ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಕೂಡ ಸ್ಥಾನ ಪಡೆದಿದ್ದಾರೆ.


ಇದನ್ನೂ ಓದಿ: ಮನವೊಲಿಸಲು ಊಟದ ಡಬ್ಬ ಹಿಡ್ಕೊಂಡು ಬಿಗ್’ಬಾಸ್ ಮನೆಗೆ ಬಂದ್ರು ವರ್ತೂರ್ ಸಂತೋಷ್ ತಾಯಿ!


ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರ ಅಂದರೆ ನವೆಂಬರ್ 13ರಂದು ಪಂದ್ಯಾವಳಿಯ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿದ್ದು, ನಾಲ್ವರು ಭಾರತೀಯ ಆಟಗಾರರನ್ನು ಸೇರಿಸಿದೆ. ಇದರಲ್ಲಿ ವಿರಾಟ್ ಕೊಹ್ಲಿ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಈ ತಂಡದಲ್ಲಿ ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಸ್ಥಾನ ಪಡೆದಿದ್ದಾರೆ.


ಆದರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಯಾವುದೇ ಸ್ಥಾನ ಪಡೆದಿಲ್ಲ. ಅಚ್ಚರಿಯ ವಿಷಯವೆಂದರೆ ಈ ಟೂರ್ನಿಯಲ್ಲಿ ರೋಹಿತ್ ಶರ್ಮಾ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ರೋಹಿತ್ ಬದಲಿಗೆ ಡೇವಿಡ್ ವಾರ್ನರ್‌ಗೆ ಓಪನಿಂಗ್‌ ಆದ್ಯತೆ ನೀಡಲಾಗಿದೆ.


ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ತಲಾ 3 ಆಟಗಾರರು ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್, ಏಡೆನ್ ಮಾರ್ಕ್ರಾಮ್ ಮತ್ತು ಮಾರ್ಕೊ ಜಾನ್ಸನ್ ಆಯ್ಕೆಯಾಗಿದ್ದಾರೆ. ಪಂದ್ಯಾವಳಿಯಲ್ಲಿ ಡಿ ಕಾಕ್ ಮತ್ತು ಮಾರ್ಕ್ರಾಮ್ ಉತ್ತಮ ಫಾರ್ಮ್‌’ನಲ್ಲಿ ಕಾಣಿಸಿಕೊಂಡಿದ್ದಾರೆ. ಡಿ ಕಾಕ್ ಇದುವರೆಗೆ 4 ಶತಕಗಳನ್ನು ಸಿಡಿಸಿದ್ದರೆ, ಮಾರ್ಕೊ ಜಾನ್ಸೆನ್ 17 ವಿಕೆಟ್ ಕಬಳಿಸಿ, ತಂಡದ ಅಗ್ರ ವಿಕೆಟ್ ಟೇಕರ್ ಎಂದೆನಿಸಿಕೊಂಡಿದ್ದಾರೆ.


ಆಸ್ಟ್ರೇಲಿಯಾದ ಮೂವರು ಆಟಗಾರರರು ಸಹ ಇರದಲ್ಲಿ ಸ್ಥಾನ ಪಡೆದಿದ್ದು, ಡೇವಿಡ್ ವಾರ್ನರ್ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. ಈ ತಂಡದಲ್ಲಿ ಆಲ್‌’ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಸೇರ್ಪಡೆಗೊಂಡಿದ್ದಾರೆ. ಇನ್ನು ಆಡಮ್ ಝಂಪಾ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದು, ಇವರು ಇದುವರೆಗೆ ಟೂರ್ನಿಯಲ್ಲಿ ಅತಿ ಹೆಚ್ಚು 22 ವಿಕೆಟ್ ಪಡೆದ ಬೌಲರ್ ಕೂಡ ಹೌದು.


ಇದನ್ನೂ ಓದಿ: ಈ ವಿಷಯದಲ್ಲಿ ಶ್ರೇಷ್ಠ ರೆಕಾರ್ಡ್ ಬರೆದ ಜಡೇಜಾ: ನಂಬರ್ 1 ಪಟ್ಟಕ್ಕೇರಿದ ಜಡ್ಡು


23 ವರ್ಷದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಈ ಟೂರ್ನಿಯಲ್ಲಿ ಇಲ್ಲಿಯವರೆಗೆ ಮೂರು ಶತಕಗಳನ್ನು ಬಾರಿಸಿದ್ದಾರೆ. ಶ್ರೀಲಂಕಾದ ದಿಶಾನ್ ಮಧುಶಂಕ 12ನೇ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಶ್ರೀಲಂಕಾ ಟೂರ್ನಿಯಿಂದ ಹೊರಬಿದ್ದರೂ ಮಧುಶಂಕ 21 ಬ್ಯಾಟ್ಸ್ ಮನ್’ಗಳನ್ನು ಪೆವಿಲಿಯನ್ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ