ಟೀಂ ಇಂಡಿಯಾದ ಈ ಆಟಗಾರನೇ ಜಗತ್ತಿನ ಅತ್ಯುತ್ತಮ ಬೌಲರ್: ಕೀವೀಸ್ ನಾಯಕ ಕೇನ್ ವಿಲಿಯಮ್ಸನ್ ಶ್ಲಾಘಿಸಿದ್ದು ಯಾರನ್ನು?
Kane Williamson statement about the best bowler in the world: ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 70 ರನ್’ಗಳಿಂದ ಸೋಲಿಸಿ ವಿಶ್ವಕಪ್ ಫೈನಲ್’ಗೆ ಲಗ್ಗೆ ಇಟ್ಟಿತು. 398 ರನ್’ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ 48.5 ಓವರ್’ಗಳಲ್ಲಿ 327 ರನ್ ಗಳಿಸಿ ಆಲೌಟ್ ಆಯಿತು.
Kane Williamson: ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು ಮೊಹಮ್ಮದ್ ಶಮಿ ಅವರನ್ನು ವಿಶ್ವದ ಅತ್ಯುತ್ತಮ ಬೌಲರ್’ಗಳಲ್ಲಿ ಒಬ್ಬರು ಎಂದು ಕರೆದಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 70 ರನ್’ಗಳಿಂದ ಸೋಲಿಸಿ ವಿಶ್ವಕಪ್ ಫೈನಲ್’ಗೆ ಲಗ್ಗೆ ಇಟ್ಟಿತು. 398 ರನ್’ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ 48.5 ಓವರ್’ಗಳಲ್ಲಿ 327 ರನ್ ಗಳಿಸಿ ಆಲೌಟ್ ಆಯಿತು. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ 57 ರನ್ ನೀಡಿ 7 ವಿಕೆಟ್ ಪಡೆದರು. ಪ್ರಸಕ್ತ ವಿಶ್ವಕಪ್’ನಲ್ಲಿ ಪಂದ್ಯವೊಂದರಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದು ಇದು ಮೂರನೇ ಬಾರಿ. ಮೊಹಮ್ಮದ್ ಶಮಿ ಈ ವಿಶ್ವಕಪ್’ನಲ್ಲಿ ಇದುವರೆಗೆ 23 ವಿಕೆಟ್’ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಆಟಗಾರನ ಪತ್ನಿ ದೇಶದ ಪ್ರಖ್ಯಾತ ಪಕ್ಷದ ಶಾಸಕಿ! ಕೋಟಿ ಆಸ್ತಿಯ ಒಡತಿ ಈಕೆ ಯಾರೆಂದು ಗುರುತಿಸಬಲ್ಲಿರೇ?
ಕೇನ್ ವಿಲಿಯಮ್ಸನ್ ಹೇಳುವಂತೆ, “ಮೊಹಮ್ಮದ್ ಶಮಿ ಅವರ ಪ್ರದರ್ಶನ ಅದ್ಭುತವಾಗಿದೆ. ಅವರು ಕೇವಲ ಅರ್ಧ ಪಂದ್ಯಗಳನ್ನು ಆಡಿರಬಹುದು, ಆದರೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್’ಗಳ ಪಟ್ಟಿಯಲ್ಲಿ ಸೇರಿದ್ದಾರೆ. ವಿಶ್ವದ ಅತ್ಯುತ್ತಮ ಬೌಲರ್’ಗಳಲ್ಲಿ ಅವರು ಒಬ್ಬರು ಎಂಬುದರಲ್ಲಿ ಸಂದೇಹವಿಲ್ಲ. ಅವರು ಚೆಂಡನ್ನು ಚಲಿಸುವ ಮತ್ತು ಸ್ಟಂಪ್’ಗಳನ್ನು ಆಟದ ಭಾಗವಾಗಿಸುವ ರೀತಿ ನಿಜವಾಗಿಯೂ ಅದ್ಭುತವಾಗಿದೆ. ಇಷ್ಟು ಕಡಿಮೆ ಪಂದ್ಯಗಳಲ್ಲಿ ಅವರು ಪಡೆದ ವಿಕೆಟ್‌ಗಳ ಸಂಖ್ಯೆ ಅದ್ಭುತವಾಗಿದೆ” ಎಂದಿದ್ದಾರೆ.
“ಈ ಭಾರತೀಯ ತಂಡವು ಆಟದ ಪ್ರತಿಯೊಂದು ವಿಭಾಗದಲ್ಲೂ ನಿಸ್ಸಂದೇಹವಾಗಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಅದರ ಸಂಪೂರ್ಣ ಗಮನವು ಮುಂದಿನ ಪಂದ್ಯದ ಮೇಲೆ ಇರುತ್ತದೆ ಎಂದು ನನಗೆ ಖಾತ್ರಿಯಿದೆ' ಎಂದು ನ್ಯೂಜಿಲೆಂಡ್ ನಾಯಕ ಭಾರತ ತಂಡವನ್ನು ವಿಶ್ವದ ಅತ್ಯುತ್ತಮ ತಂಡ ಎಂದು ಬಣ್ಣಿಸಿದರು.
“ಎದುರಾಳಿ ತಂಡ (ಭಾರತ)ವನ್ನು ಎದುರಿಸುವುದು ಕಷ್ಟಕರವಾಗಿತ್ತು. ಏಕೆಂದರೆ ಆ ತಂಡದ ಎಲ್ಲಾ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಸಮಯದಲ್ಲಿ ಇದೇ ತಂಡ ವಿಶ್ವದ ಅತ್ಯುತ್ತಮ ತಂಡವಾಗಿದೆ. ಅವರ ಎಲ್ಲಾ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಅವರನ್ನು ಎದುರಿಸುವುದು ಕಷ್ಟ” ಎಂದಿದ್ದಾರೆ.
ಇದನ್ನೂ ಓದಿ: “ಈತನ ಬ್ಯಾಟಿಂಗ್ ತಂತ್ರದಲ್ಲಿದೆ ಭಾರತದ ಸತತ ಯಶಸ್ಸಿನ ರಹಸ್ಯ”- ಟೀಂ ಇಂಡಿಯಾದ ಕೋಚ್ ಹೇಳಿಕೆ
ವಿರಾಟ್ ಕೊಹ್ಲಿ ಹೊಗಳಲು ಪದಗಳಿಲ್ಲ…
ವಿರಾಟ್ ಕೊಹ್ಲಿ ಏಕದಿನದಲ್ಲಿ ತಮ್ಮ 50ನೇ ಶತಕವನ್ನು ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸಮಕಾಲೀನ ಕ್ರಿಕೆಟ್’ನ ಈ ಶ್ರೇಷ್ಠ ಆಟಗಾರನನ್ನು ಹೊಗಳಲು ಪದಗಳು ಕಡಿಮೆಯಾಗುತ್ತವೆ ಎಂದು ವಿಲಿಯಮ್ಸನ್ ಹೇಳಿದ್ದಾರೆ. “ನಾನು ನಿಜವಾಗಿಯೂ ಅವರನ್ನು ಹೊಗಳಲು ಪದಗಳನ್ನು ಹುಡುಕುತ್ತಿದ್ದೇನೆ. ಅವರು ಅತ್ಯುತ್ತಮ ಮತ್ತು ಎಲ್ಲಾ ಸಮಯದಲ್ಲೂ ಉತ್ತಮವಾಗುತ್ತಿರುವಂತೆ ತೋರುತ್ತಿದೆ. ಇದು ಪ್ರಪಂಚದಾದ್ಯಂತದ ಎದುರಾಳಿ ತಂಡಗಳಿಗೆ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಸೂಚಿಸುತ್ತದೆ” ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ