Sachin Tendulkar Tweet : ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಇಡೀ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಔಟಾಗದೆ 201 ರನ್‌ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಮ್ಯಾಕ್ಸ್‌ವೆಲ್ ಬಗ್ಗೆ ಕ್ರಿಕೆಟ್ ದೇವರು ಎನಿಸಿಕೊಂಡಿರುವ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಮ್ಯಾಕ್ಸ್‌ವೆಲ್ ಆಟವನ್ನು ಹಾಡಿ ಹೊಗಳಿದ್ದಾರೆ.
ಮ್ಯಾಕ್ಸ್‌ವೆಲ್ ಅವರ ಬಿರುಸಿನ ದ್ವಿಶತಕ :
ಅಫ್ಘಾನಿಸ್ತಾನ ನೀಡಿದ 292 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 91 ರನ್‌ಗಳಿಗೆ ತನ್ನ 7 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಈ ಪಂದ್ಯವನ್ನು ಆಸ್ಟ್ರೇಲಿಯಾ ಕೈ ಚೆಲ್ಲಿಯಾಯಿತು ಎನ್ನುವ ಭಾವನೆಯೇ ಪ್ರತಿಯೊಬ್ಬರಲ್ಲೂ ಮೂಡಿತ್ತು. ಆದರೆ, ಮ್ಯಾಕ್ಸ್‌ವೆಲ್ ಮೈದಾನದಲ್ಲಿ ಇತಿಹಾಸ ನಿರ್ಮಿಸಿ ಬಿಟ್ಟರು. ಒನ್ ಮ್ಯಾನ್ ಆರ್ಮಿಯಂತೆ ಬ್ಯಾಟಿಂಗ್ ಮಾಡಿದ ಅವರು ಯಾರೂ ಊಹಿಸದ ರೀತಿಯಲ್ಲಿ ಪಂದ್ಯವನ್ನು ಗೆದ್ದು ಕೊಟ್ಟರು. ಈ ಮೂಲಕ 2023 ರ ವಿಶ್ವಕಪ್ ಸೆಮಿಫೈನಲ್‌ಗೆ ತನ್ನ ತಂಡ ಲಗ್ಗೆ ಇಡುವಂತೆ ಮಾಡಿದರು.
ಇದನ್ನೂ ಓದಿ : ಭಾರತ-ಪಾಕಿಸ್ತಾನ ಸೆಮಿಫೈನಲ್? ವಿಶ್ವಕಪ್‌ನಲ್ಲಿ ಹೊಸ ಟ್ವಿಸ್ಟ್!
ಸಚಿನ್ ಟ್ವೀಟ್ ನಲ್ಲಿ ಏನಿತ್ತು ? :
'ಇಬ್ರಾಹಿಂ ಜದ್ರಾನ್ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರಿಂದ ಅಫ್ಘಾನಿಸ್ತಾನ ಉತ್ತಮ ಸ್ಕೋರ್ ಗಳಿಸಿತು. ತಂಡವು ಉತ್ತಮ ಆರಂಭವನ್ನೇ ನೀಡಿತ್ತು. ಆದರೆ ಪಂದ್ಯದ ಗತಿ ಬದಲಿಸಲು ಮುಂದಿನ 25 ಓವರ್‌ಗಳು ಸಾಕಾಯಿತು ಎಂದು ಸಚಿನ್ ತೆಂಡೂಲ್ಕರ್ ಬರೆದಿದ್ದಾರೆ. 'ಗರಿಷ್ಠ ಒತ್ತಡದಿಂದ ಗರಿಷ್ಠ ಪ್ರದರ್ಶನ ..! ಇದು ನನ್ನ ಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ಇನ್ನಿಂಗ್ಸ್ ಎಂದು ಸಚಿನ್ ಕೊಂಡಾಡಿದ್ದಾರೆ.
A wonderful knock by @IZadran18 to put Afghanistan in a good position. They started well in the 2nd half and played good cricket for 70 overs but the last 25 overs from @Gmaxi_32 was more than enough to change their fortune.
From Max pressure to Max performance! This has been… pic.twitter.com/M1CBulAgKw
— Sachin Tendulkar (@sachin_rt) November 7, 2023
ನಾಲ್ಕನೇ ಸ್ಥಾನಕ್ಕಾಗಿ ಈ ತಂಡಗಳ ನಡುವೆ ಪೈಪೋಟಿ :
ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟಾಪ್ 4ಕ್ಕೆ ಅರ್ಹತೆ ಪಡೆದುಕೊಂಡಿವೆ. ನಾಲ್ಕನೇ ಸ್ಥಾನಕ್ಕಾಗಿ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವೆ ಪೈಪೋಟಿ ನಡೆಯುತ್ತಿದೆ. ಎಲ್ಲಾ ಮೂರು ತಂಡಗಳು 8-8 ಅಂಕಗಳನ್ನು ಹೊಂದಿದ್ದು, ಇನ್ನು 1-1 ಪಂದ್ಯಗಳು ಬಾಕಿ ಉಳಿದಿವೆ.
ಇದನ್ನೂ ಓದಿ : AUS ಗೆಲುವಿನ ನಂತರ ಪಾಯಿಂಟ್ಸ್ ಟೇಬಲ್‌ನಲ್ಲಿ ಟ್ವಿಸ್ಟ್ ! ಸೆಮಿ ಫೈನಲ್ ತಲುಪುವ ತಂಡಗಳು ಇವು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.