ಈ 6 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ರೆ ನೀವು ಪಕ್ಕಾ ಕ್ರಿಕೆಟ್ ಫ್ಯಾನ್ ಎಂದರ್ಥ

Nov 07,2023

ಐಸಿಸಿ ವಿಶ್ವಕಪ್ ಯಾವಾಗ ಆರಂಭವಾಯಿತು?

ಉತ್ತರ- 1975 ರಲ್ಲಿ ಇಂಗ್ಲೆಂಡ್ ಆತಿಥ್ಯ ವಹಿಸುವುದರೊಂದಿಗೆ ವಿಶ್ವಕಪ್ ಆರಂಭವಾಯಿತು.

ಐಸಿಸಿ ವಿಶ್ವಕಪ್ ಅನ್ನು ಎಷ್ಟು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ?

ಉತ್ತರ: ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವಿಶ್ವಕಪ್ ಆಯೋಜಿಸಲಾಗುತ್ತದೆ. 2019 ರಲ್ಲಿ ಕೊನೆಯ ಬಾರಿಗೆ ಕ್ರಿಕೆಟ್ ವಿಶ್ವಕಪ್ ಅನ್ನು ಆಯೋಜಿಸಲಾಗಿತ್ತು, ಇದರಲ್ಲಿ ಇಂಗ್ಲೆಂಡ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಯಾವ ದೇಶವು ಮೊದಲ ICC ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು?

ಉತ್ತರ- ವೆಸ್ಟ್ ಇಂಡೀಸ್ 1975 ರಲ್ಲಿ ಆಸ್ಟ್ರೇಲಿಯಾವನ್ನು 17 ರನ್’ಗಳಿಂದ ಸೋಲಿಸುವ ಮೂಲಕ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಯಾವ ದೇಶವು ಕೊನೆಯ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು?

ಉತ್ತರ- ಇಂಗ್ಲೆಂಡ್ ಕೊನೆಯ ಬಾರಿಗೆ 2019 ರಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸುವ ಮೂಲಕ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಭಾರತ ಎಷ್ಟು ಬಾರಿ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ?

ಉತ್ತರ- ಭಾರತ ತಂಡವು ಎರಡು ಬಾರಿ ಐಸಿಸಿ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ. ಈ ಪ್ರಶಸ್ತಿಗಳನ್ನು 1983 ಮತ್ತು 2011 ವರ್ಷಗಳಲ್ಲಿ ಗೆದ್ದಿದ್ದಾರೆ.

ಐಸಿಸಿ ವಿಶ್ವಕಪ್ ಟ್ರೋಫಿಯನ್ನು ಅತಿ ಹೆಚ್ಚು ಬಾರಿ ಗೆದ್ದ ತಂಡ ಯಾವುದು?

ಉತ್ತರ- ಆಸ್ಟ್ರೇಲಿಯಾ ತಂಡ 5 ಬಾರಿ ಐಸಿಸಿ ವಿಶ್ವಕಪ್ ಪ್ರಶಸ್ತಿ ಗೆದ್ದಿದೆ.

VIEW ALL

Read Next Story