Sachin Tendulkar Viral Reaction: '365 ದಿನಗಳ ಬಳಿಕ...!' ವಿರಾಟ್ ವರ್ಲ್ಡ್ ರೆಕಾರ್ಡ್ ಕುರಿತು ಸಚಿನ್ ನೀಡಿದ ಹೇಳಿಕೆ ವೈರಲ್!
ವಿರಾಟ್ ಕೊಹ್ಲಿ ತನ್ನ ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ 49ನೇ ಶತಕ ದಾಖಲಿಸಿದ್ದಾರೆ.
ವಿರಾಟ್ ಸೌತ್ ಆಫ್ರಿಕಾ ವಿರುದ್ಧದ ವರ್ಲ್ಡ್ ಕಪ್ ಪಂದ್ಯದಲ್ಲಿ 101 ರನ್ ಗಳ ನಾಟ್ ಔಟ್ ಪಂದ್ಯ ಆಡಿದ್ದಾರೆ.
ಇದರೊಂದಿಗೆ ಅವರು ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬರೆದ 49 ಶತಕಗಳ ವಿಶ್ವ ದಾಖಲೆ ಸರಿಗಟ್ಟಿದ್ದಾರೆ.
ಇದೀಗ 49 ಶತಕಗಳ ದಾಖಲೆ ಸಚಿನ್ ಹಾಗೂ ವಿರಾಟ್ ಕೊಹ್ಲಿ ಹೆಸರಿಗೆ ಬರೆಯಲಾಗಿದೆ.
ಈ ಕುರಿತು ಬರೆದುಕೊಂಡಿರುವ ಸಚಿನ್ ವೆಲ್ ಪ್ಲೇಡ್ ವಿರಾಟ್, ನನಗೆ 49 ರಿಂದ 50ನೇ ವಯಸ್ಸಿಗೆ ತಲುಪಲು 365 ದಿನಗಳು ಬೇಕಾದವು,
ಮುಂದುವರೆದು ಬರೆದುಕೊಂಡಿರುವ ಕ್ರಿಕೆಟ್ ದೇವರು, ನೀವು ಕೆಲವೇ ದಿನಗಳಲ್ಲಿ 49 ರಿಂದ 50ಕ್ಕೆ ತಲುಪುವ ಭರವಸೆ ನನಗಿದೆ ಮತ್ತು ನನ್ನ ದಾಖಲೆಯನ್ನು ಮುರಿಯುವಿರಿ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಸಚಿನ್ 452 ಏಕದಿನ ಪಂದ್ಯಗಳಲ್ಲಿ 49 ಶತಕಗಳ ದಾಖಲೆ ಇದ್ದು, ಸಚಿನ್ ಒಟ್ಟು 18,426 ರನ್ ಗಳಿಸಿದ್ದಾರೆ.
ವಿರಾಟ್ ಕೇವಲ 277 ಪಂದ್ಯಗಳಲ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 49 ಶತಕಗಳನ್ನು ಬಾರಿಸಿದ್ದಾರೆ.
ಭಾರತ ಇಂದಿನ ಪಂದ್ಯದಲ್ಲಿ 326 ರನ್ ಗಳ ದೊಡ್ಡ ಟಾರ್ಗೆಟ್ ನೀಡಿತ್ತು ಮತ್ತು 203 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.