India vs Australia, World Cup 2023: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ.


COMMERCIAL BREAK
SCROLL TO CONTINUE READING

ಭಾರತ ತಂಡ ODI ವಿಶ್ವಕಪ್’ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿತ್ತು. ರೋಹಿತ್ ಶರ್ಮಾ ನಾಯಕತ್ವದ ತಂಡ ಚೆನ್ನೈನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲು ಆಗಮಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು.


ಇದನ್ನೂ ಓದಿ: ವಿಶ್ವಕಪ್ ಮಧ್ಯೆ ಈ ತಂಡಕ್ಕೆ ಬಿತ್ತು ಭಾರೀ ಮೊತ್ತದ ದಂಡ! ICCಯಿಂದ ಕಠಿಣ ಕ್ರಮ


ಇನ್ನು ಬ್ಯಾಟಿಂಗ್’ನಲ್ಲಿ ವೈಫಲ್ಯ ಕಂಡರೂ ಬೌಲಿಂಗ್ ಮತ್ತು ಫೀಲ್ಡಿಂಗ್’ನಲ್ಲಿ ಸುಧಾರಿಸಿದ್ದ ಆಸ್ಟ್ರೇಲಿಯಾ ಟೀಂ ಇಂಡಿಯಾಗೆ ಆರಂಭಿಕ ಆಘಾತ ನೀಡಿತ್ತು. ಸದ್ಯ ಅಂತಿಮವಾಗಿ ರೋಚಕ ಗೆಲುವು ಸಾಧಿಸುವ ಮೂಲಕ ಭಾರತ ತಂಡ ವಿಶ್ವಕಪ್’ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ.


ಜಡೇಜಾ ಅದ್ಭುತ ಬೌಲಿಂಗ್:


ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಇನಿಂಗ್ಸ್’ನ 28ನೇ ಓವರ್’ಗೆ ಬಾಲ್’ನ್ನು ಸ್ಪಿನ್ನರ್ ರವೀಂದ್ರ ಜಡೇಜಾಗೆ ನೀಡಿದರು. ಮೊದಲ ಎಸೆತದಲ್ಲಿ ಸ್ಟೀವ್ ಸ್ಮಿತ್ ಅವರನ್ನು ಬೌಲ್ಡ್ ಮಾಡಿದರು. 71 ಎಸೆತಗಳನ್ನು ಎದುರಿಸಿದ ಸ್ಮಿತ್ 5 ಬೌಂಡರಿಗಳ ನೆರವಿನಿಂದ 46 ರನ್ ಸೇರಿಸಿದ್ದರು.


ಇದನ್ನೂ ಓದಿ: 10 ಎಸೆತಕ್ಕೆ 3 ವಿಕೆಟ್ ಢಮಾರ್…! ಜಡೇಜಾ ಸ್ಪಿನ್ನಿಂಗ್ ಅರ್ಥವಾಗದೆ ಕಂಗಾಲಾದ ಕಾಂಗಾರೂ ಪಡೆ


ಒಂದು ಓವರ್‌’ನಲ್ಲಿ 2 ವಿಕೆಟ್:


ಇದಾದ ಬಳಿಕ ಜಡೇಜಾ ತಮ್ಮ ಮುಂದಿನ (30ನೇ) ಓವರ್‌’ನಲ್ಲಿ 2 ವಿಕೆಟ್ ಪಡೆದರು. ಎರಡನೇ ಎಸೆತದಲ್ಲಿ ಕೆಎಲ್ ರಾಹುಲ್‌’ಗೆ ಕ್ಯಾಚ್ ನೀಡಿ ಮಾರ್ನಸ್ ಲ್ಯಾಬುಸ್ಚಾಗ್ನೆ (27) ವಿಕೆಟ್ ಒಪ್ಪಿಸಿದರು. ಲಬುಸ್ಚಾಗ್ನೆ 41 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ 27 ರನ್ ಸೇರಿಸಿದರು. ಡಿಆರ್‌ಎಸ್‌ ಕೂಡ ತೆಗೆದುಕೊಂಡರೂ ನಿರ್ಧಾರ ಬೌಲರ್‌ ಪರವಾಗಿತ್ತು. ನಂತರ ಅಲೆಕ್ಸ್ ಕ್ಯಾರಿ (0) ಅವರನ್ನು ನಾಲ್ಕನೇ ಎಸೆತದಲ್ಲಿ ಜಡೇಜಾ ಎಲ್ಬಿಡಬ್ಲ್ಯುಗೆ ಔಟ್ ಮಾಡಿದರು. ಈ ಮೂಲಕ 30 ಓವರ್‌’ಗಳ ನಂತರ ಆಸ್ಟ್ರೇಲಿಯಾ ಸ್ಕೋರ್ 5 ವಿಕೆಟ್‌’ಗೆ 119 ರನ್ ಆಗಿತ್ತು.


ಸಚಿನ್ ದಾಖಲೆ ಮುರಿದ ಕೊಹ್ಲಿ:


ಇನ್ನೊಂದೆಡೆ ವಿರಾಟ್ ಕೊಹ್ಲಿ 85 ರನ್​​’ಗಳ ಅದ್ಬುತ ಇನ್ನಿಂಗ್ಸ್​ ಮೂಲಕ ಸಚಿನ್​ ತೆಂಡೂಲ್ಕರ್ ದೀರ್ಘಕಾಲದ​​ ದಾಖಲೆಯನ್ನು ಮುರಿದಿದ್ದಾರೆ. ಕ್ರಿಕೆಟ್ ಇತಿಹಾಸದ ಈ ಪ್ರಮುಖ ದಾಖಲೆಯನ್ನು ಅಳಿಸಿ ಹಾಕಿ ನೂತನ ಮೈಲುಗಲ್ಲು ನೆಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್​ ಹೆಸರಿನಲ್ಲಿದ್ದ ಸೀಮಿತ ಓವರ್’​​ಗಳ ಐಸಿಸಿ ಟೂರ್ನಿಗಳಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಕೊಹ್ಲಿ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.