WTC Final ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಈ ಆಟಗಾರನಿಗೆ ಸ್ಥಾನ ಕೊಡದೆ ವಂಚಿಸಿದ್ರಾ ರೋಹಿತ್ ಶರ್ಮಾ?
WTC Final 2023: ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ನಂತರ ಹಲವು ಪಂದ್ಯಶ್ರೇಷ್ಠ ಪ್ರದರ್ಶನ ನೀಡಿರುವ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಈ ಪಂದ್ಯದಲ್ಲಿ ಅವಕಾಶ ಸಿಗುವುದು ಕಷ್ಟವಾಗಿದೆ. ರವೀಂದ್ರ ಜಡೇಜಾ ಗಾಯಗೊಂಡ ನಂತರ ಅಕ್ಷರ್ ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡಲಾಗಿತ್ತು. ಆ ಅವಕಾಶವನ್ನು ಅವರು ಚೆನ್ನಾಗಿ ಬಳಸಿಕೊಂಡರು.
WTC Final 2023: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023 ರ ಅಂತಿಮ ಪಂದ್ಯವು ಜೂನ್ 7 ರಿಂದ ಜೂನ್ 11 ರವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಈ ಪಂದ್ಯ ಇಂಗ್ಲೆಂಡ್ ನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ, ನಾಯಕ ರೋಹಿತ್ ರೋಹಿತ್ ಶರ್ಮಾ ಕೆಲ ಆಟಗಾರರಿಗೆ ಪ್ಲೇಯಿಂಗ್-11 ರಲ್ಲಿ ಸ್ಥಾನ ನೀಡದಿರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಇದಕ್ಕೆ ಕಾರಣವೂ ಇದೆ.
ಇದನ್ನೂ ಓದಿ: ಈತ ಆಸೀಸ್’ಗೆ ಬಲ, Team Indiaಗೆ ಹಾಲಾಹಲ! ಈತನ ನಾಯಕತ್ವದಿಂದಲೇ ನಿವೃತ್ತಿ ಘೋಷಿಸಿದ್ರು ಧೋನಿ…
ಈ ಆಟಗಾರನಿಗೆ ಅವಕಾಶ ಸಿಗುವುದು ಡೌಟ್!
ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ನಂತರ ಹಲವು ಪಂದ್ಯಶ್ರೇಷ್ಠ ಪ್ರದರ್ಶನ ನೀಡಿರುವ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಈ ಪಂದ್ಯದಲ್ಲಿ ಅವಕಾಶ ಸಿಗುವುದು ಕಷ್ಟವಾಗಿದೆ. ರವೀಂದ್ರ ಜಡೇಜಾ ಗಾಯಗೊಂಡ ನಂತರ ಅಕ್ಷರ್ ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡಲಾಗಿತ್ತು. ಆ ಅವಕಾಶವನ್ನು ಅವರು ಚೆನ್ನಾಗಿ ಬಳಸಿಕೊಂಡರು. ಜೊತೆಗೆ ಭಾರತೀಯ ಪರಿಸ್ಥಿತಿಗಳಲ್ಲಿ ಯಶಸ್ವಿ ಬೌಲರ್ ಆಗಿದ್ದರು. ಆದರೆ ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ಉತ್ತಮವಾಗಿ ಆಡಲಿಲ್ಲ. ಇದರಿಂದಾಗಿ ಅವರಿಗೆ ಪ್ಲೇಯಿಂಗ್-11ರಲ್ಲಿ ಅವಕಾಶ ಸಿಗುವುದು ಕಷ್ಟವಾಗಬಹುದು.
ಈ ಪಂದ್ಯದಲ್ಲಿ ಭಾರತ ತಂಡ ಸ್ಪಿನ್ ಬೌಲರ್ ಗೆ ಮಣೆ ಹಾಕಿದರೆ ರವೀಂದ್ರ ಜಡೇಜಾ ಆಡುವ ಸಾಧ್ಯತೆ ಹೆಚ್ಚು. ಡಬ್ಲ್ಯುಟಿಸಿ 2021 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಇಬ್ಬರು ಸ್ಪಿನ್ ಬೌಲರ್‌ಗಳನ್ನು ಕಣಕ್ಕಿಳಿಸಿದ್ದರಿಂದ ಈ ಬಾರಿ ಕೂಡ ಅದೇ ತಂತ್ರ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಆದರೆ ಅಂದು ತಂಡವು ಸೋಲನ್ನು ಎದುರಿಸಬೇಕಾಯಿತು. ಇನ್ನು ರವಿಚಂದ್ರನ್ ಅಶ್ವಿನ್ ಗೆ ಅವಕಾಶ ಸಿಗುವುದು ಖಚಿತವಾಗಿದೆ. ಹೀಗಿರುವಾಗ ಅಕ್ಷರ್ ಪಟೇಲ್ ಪ್ಲೇಯಿಂಗ್-11ರಲ್ಲಿ ಸ್ಥಾನ ಪಡೆಯುವುದು ಕಷ್ಟ.
ಟೆಸ್ಟ್ ಕ್ರಿಕೆಟ್ ನಲ್ಲಿ ಅಕ್ಷರ್ ಪಟೇಲ್ ಅಂಕಿಅಂಶಗಳು:
ಅಕ್ಷರ್ ಇದುವರೆಗೆ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 50 ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಭಾರತದ ನೆಲದಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದಾರೆ. ಇನ್ನು ಬ್ಯಾಟಿಂಗ್ ನಲ್ಲಿ 513 ರನ್ ಗಳಿಸಿದ್ದಾರೆ. ಈ ವರ್ಷ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಗಳಿಸಿದ 84 ರನ್ ಗಳು, ಅವರ ಗರಿಷ್ಠ ಸ್ಕೋರ್ ಆಗಿದೆ.
WTC ಫೈನಲ್ ಗೆ ಭಾರತೀಯ ತಂಡದ ತಂಡ:
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಇಶಾನ್ ಕಿಶನ್ ಉನದ್ಕತ್ (ವಿಕೆಟ್ ಕೀಪರ್).
ಇದನ್ನೂ ಓದಿ: Team India ಪರ 212 ವಿಕೆಟ್ ಕಬಳಿಸಿರುವ ಈ ಆಟಗಾರನಿಗೆ ಇನ್ನೂ ಸಿಕ್ಕಿಲ್ಲ ಟೆಸ್ಟ್ ಆಡುವ ಅವಕಾಶ! ಹೆಸರು ಕೇಳಿದ್ರೆ ಶಾಕ್ ಆಗ್ತೀರ
ಸ್ಟ್ಯಾಂಡ್ ಬೈ: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.