Yashasvi Jaiswal: ದ್ವಿಶತಕ ಮಾತ್ರವಲ್ಲ, ಸಿಕ್ಸರ್’ನಲ್ಲೂ ದಾಖಲೆ ಬರೆದ ಯಶಸ್ವಿ: ಇಬ್ಬರು ದಿಗ್ಗಜರ ರೆಕಾರ್ಡ್ ಬ್ರೇಕ್!
Yashasvi Jaiswal Record: 1994ರಲ್ಲಿ ಲಕ್ನೋದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಸಿಧು 8 ಸಿಕ್ಸರ್’ಗಳನ್ನು ಸಿಡಿಸಿದ್ದರು. ಇದರ ನಂತರ, 2019 ರಲ್ಲಿ ಇಂದೋರ್’ನಲ್ಲಿ ಬಾಂಗ್ಲಾದೇಶ ವಿರುದ್ಧ ಆಡಿದ ಟೆಸ್ಟ್’ನ ಇನ್ನಿಂಗ್ಸ್’ನಲ್ಲಿ ಬ್ಯಾಟಿಂಗ್ ಮಾಡುವಾಗ ಮಯಾಂಕ್ ಅಗರ್ವಾಲ್ 8 ಸಿಕ್ಸರ್‌ಗಳನ್ನು ಬಾರಿಸಿದರು.
Yashasvi Jaiswal Record: ಟೆಸ್ಟ್ ಕ್ರಿಕೆಟ್ ಇನ್ನಿಂಗ್ಸ್’ನಲ್ಲಿ ಅತಿ ಹೆಚ್ಚು ಸಿಕ್ಸರ್’ಗಳನ್ನು ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ಮಾಡಿದ್ದಾರೆ. ನವಜೋತ್ ಸಿಂಗ್ ಸಿಧು ಮತ್ತು ಮಯಾಂಕ್ ಅಗರ್ವಾಲ್ ಅವರನ್ನು ಹಿಂದಿಕ್ಕಿ, ಒಂದು ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್’ಗಳನ್ನು ಪೂರ್ಣಗೊಳಿಸಿ ದಾಖಲೆ ಬರೆದಿದ್ದಾರೆ. ಅಂದಹಾಗೆ ನವಜೋತ್ ಸಿಂಗ್ ಸಿಧು ಮತ್ತು ಮಯಾಂಕ್ ಅಗರ್ವಾಲ್ ತಲಾ 8 ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದಾರೆ.
ಇದನ್ನೂ ಓದಿ: Sarfaraz Khan Love Story: ಸರ್ಫರಾಜ್ ಖಾನ್ ಪತ್ನಿ ಯಾರು? ಈತ ಆ 'ಕಾಶ್ಮೀರಿ ಬ್ಯೂಟಿ'ಗೆ ಮನಸೋತಿದ್ದು ಹೇಗೆ?!
1994ರಲ್ಲಿ ಲಕ್ನೋದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಸಿಧು 8 ಸಿಕ್ಸರ್’ಗಳನ್ನು ಸಿಡಿಸಿದ್ದರು. ಇದರ ನಂತರ, 2019 ರಲ್ಲಿ ಇಂದೋರ್’ನಲ್ಲಿ ಬಾಂಗ್ಲಾದೇಶ ವಿರುದ್ಧ ಆಡಿದ ಟೆಸ್ಟ್’ನ ಇನ್ನಿಂಗ್ಸ್’ನಲ್ಲಿ ಬ್ಯಾಟಿಂಗ್ ಮಾಡುವಾಗ ಮಯಾಂಕ್ ಅಗರ್ವಾಲ್ 8 ಸಿಕ್ಸರ್‌ಗಳನ್ನು ಬಾರಿಸಿದರು.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ ಅಬ್ಬರಿಸುತ್ತಿದ್ದಾರೆ. ಜೈಸ್ವಾಲ್ ಸರಣಿಯಲ್ಲಿ 20 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ, ಇದರೊಂದಿಗೆ ಅವರು ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಜೈಸ್ವಾಲ್ 209 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.
ಇದುವರೆಗಿನ ಟೆಸ್ಟ್ ವೃತ್ತಿಜೀವನ:
ರಾಜ್‌ಕೋಟ್’ನಲ್ಲಿ ಇಂಗ್ಲೆಂಡ್ ವಿರುದ್ಧ ಆಡುತ್ತಿರುವ ಮೂರನೇ ಟೆಸ್ಟ್ ಅನ್ನು ಹೊರತುಪಡಿಸಿ, ಜೈಸ್ವಾಲ್ ಇದುವರೆಗೆ 6 ಟೆಸ್ಟ್‌ಗಳನ್ನು ಆಡಿದ್ದಾರೆ. ಇದರಲ್ಲಿ 11 ಇನ್ನಿಂಗ್ಸ್’ಗಳಲ್ಲಿ 57.90 ಸರಾಸರಿಯಲ್ಲಿ 637 ರನ್ ಗಳಿಸಿದ್ದು, ಈ ಅವಧಿಯಲ್ಲಿ, 2 ಶತಕ ಮತ್ತು 2 ಅರ್ಧ ಶತಕಗಳು ಸೇರಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್