Vinod Kambli : ಕ್ರಿಕೆಟಿಗ ವಿನೋದ್ ಕಾಂಬ್ಳಿ ಆಗಾಗ ತಮ್ಮ ಆರೋಗ್ಯ ಸಮಸ್ಯೆಗಳಿಂದ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ರಸ್ತೆಯಲ್ಲಿ ಪಾನಮತ್ತರಾಗಿ ತೂರಾಡುತ್ತಿದ್ದ ಕಾಂಬ್ಳಿ ಎಂದು ಹೇಳಲಾದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಕ್ರಿಕೆಟಿಗನ ಈ ಸ್ಥಿತಿ ಕುರಿತು ಸ್ಟಾರ್ ಕ್ರಿಕೆಟಿಗರೊಬ್ಬರು ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ.

Vinod Kambli health : ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಸ್ನೇಹಿತ ವಿನೋದ್ ಕಾಂಬ್ಳಿಯವರು ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಒಂದು ಕಾಲದಲ್ಲಿ ಸ್ಟಾರ್ ಕ್ರಿಕೆಟರ್ ಆಗಿ ಸದಾ ಸುದ್ದಿಯಲ್ಲಿರುತ್ತಿದ್ದ ಕಾಂಬ್ಳಿ ಇದೀಗ ರೋಡ್ ಸೈಡ್ನಲ್ಲಿ ಬಿದ್ದು ಸುದ್ದಿಯಾಗುತ್ತಿದ್ದಾರೆ.
ಸದ್ಯ ವಿನೋದ್ ಕಾಂಬ್ಳಿ ಅವರ ಆರೋಗ್ಯ ಸ್ಥಿತಿಯನ್ನು ನೆನೆದು ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ.. ಭಾರತೀಯ ತಂಡದ ಮಾಜೀ ವೇಗಿ ಯೋಗರಾಜ್ ಸಿಂಗ್ ಅವರು ಕೆಲವು ಅಚ್ಚರಿ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ, ಆರೋಗ್ಯ ಹಾಳು ಮಾಡಿಕೊಳ್ಳಬೇಡ ಅಂತ ಕಾಂಬ್ಳಿಗೆ ಬುದ್ದಿವಾದ ಹೇಳಿದ್ದಾಗಿ ತಿಳಿಸಿದ್ದಾರೆ.
ಕಾಂಬ್ಳಿ ಒಂದು ಕಾಲದಲ್ಲಿ ಸ್ಟಾರ್ ಕ್ರಿಕೆಟಿಗರನಾಗಿ ಕ್ರೀಡಾಲೋಕದಲ್ಲಿ ಮಿಂಚುತ್ತಿದ್ದರು. ಅವರ ವೃತ್ತಿಜೀವನದ ಹೈ-ಲೆವೆಲ್ ಇದ್ದಾಗ ಮುಂದಿನ ಜೀವನದ ಬಗ್ಗೆ ಯೋಚಿಸದೆ ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದರು. ಇದರಿಂದ ಕೈಯ್ಯಲ್ಲಿ ಒಂದು ಬಿಡಿಗಾಸು ಸಹ ಉಳಿಯಲಿಲ್ಲ.. ಐಶಾರಾಮಿ ಜೀವನ ನಡೆಸುವ ಸಲುವಾಗಿ ಎಲ್ಲವನ್ನೂ ಅಂದೇ ಖರ್ಚು ಮಾಡಿಬಿಟ್ಟರು.
ಈ ಕುರಿತು 'ಇನ್ ಸೈಡ್ ಸ್ಪೋರ್ಟ್ಸ್'ಗೆ ನೀಡಿದ್ದ ಸಂದರ್ಶನದಲ್ಲಿ ಯೋಗರಾಜ್ ಸಿಂಗ್ ಅವರು, ಕಾಂಬ್ಳಿ ನನಗೆ ಚನ್ನಾಗಿ ಪರಿಚಯವಿದ್ದ ಹುಡುಗ.. ನಾನು ಆತನಿಗಿಂತ ದೊಡ್ಡವನಾಗಿದ್ದರಿಂದ ಬುದ್ದಿವಾದ ಹೇಳುತ್ತಿದ್ದೆ. ಹಾಗೇ ಒಂದು ದಿನ ಅವರನ್ನು ಕೂರಿಸಿಕೊಂಡು.. ನೋಡು ವಿನೋದ್.. ಐಷಾರಾಮಿ ಜೀವನ, ಎಂಜಾಯ್ ಮೆಂಟ್ ಅಂತ ಸಿಗರೇಟು ಸೇದಬೇಡ, ಹುಡುಗಿಯರ ಸಹವಾಸ ಮಾಡಬೇಡ, ಆರೋಗ್ಯ ಹಾಳು ಮಾಡಿಕೊಳ್ಳಬೇಡ ಅಂತ ಅಂತ ಬುದ್ದಿ ಹೇಳಿದೆ..
ಇತ್ತೀಚಿಗೆ ಕಾಂಬ್ಳೆ ಬಗ್ಗೆ ತಿಳಿದುಕೊಂಡೆ, ಕಾರ್ಯಕ್ರಮಕ್ಕೆ ಅವನು ಬಂದಾಗ ಅವರ ಸ್ಥಿತಿ ನೋಡಿ ಶಾಕ್ ಆದೆ.. ಅವರ ಆರೋಗ್ಯ ಸ್ಥಿತಿ ಕಂಡು ಮರುಗಿದೆ. ವಯಸ್ಸಾದವರಂತೆ ಕಾಣಿಸುತ್ತಾ, ಕುಂಟುತ್ತಾ ಬಂದ ಕಾಂಬ್ಳಿಯನ್ನು ನೋಡಿ ಅಂದು ಎಲ್ಲರೂ ಶಾಕ್ ಆಗಿದ್ದರು ಅಂತ ಸಿಂಗ್ ಹೇಳಿದರು.
ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ವಿನೋದ್ ಕಾಂಬ್ಳಿ ಅವರಿಗೆ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದು, ತಮ್ಮ ಚಾಂಪ್ಸ್ (CHAMPS) ಫೌಂಡೇಶನ್ ವತಿಯಿಂದ ಪ್ರತಿ ತಿಂಗಳು 30,000 ರೂ. ಸಹಾಯಧನ ನೀಡಲು ನಿರ್ಧರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ