W, W, W, W... ಒಂದೇ ಓವರ್‌ನಲ್ಲಿ 4 ವಿಕೆಟ್‌ ಕಬಳಿಸಿದ ಯುಜ್ವೇಂದ್ರ ಚಹಾಲ್! ವಿಶ್ವದ ಈ ಶ್ರೇಷ್ಠ ಬೌಲರ್‌ನನ್ನೇ ಹಿಂದಿಕ್ಕಿದ ಭಾರತದ ʼಕಿಲಾಡಿʼ

Yuzvendra Chahal: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಚೆಪಾಕ್‌ ಮೈದಾನದಲ್ಲಿ ನಡೆದ ಪಂದ್ಯದ 19 ನೇ ಓವರ್‌ನಲ್ಲಿ ಯುಜುವೇಂದ್ರ ಚಾಹಲ್‌ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿ ಇತಿಹಾಸ ಸೃಷ್ಟಿಸಿದ್ದಾರೆ  

Written by - Bhavishya Shetty | Last Updated : Apr 30, 2025, 10:11 PM IST
    • ಐಪಿಎಲ್ 2025ರಲ್ಲಿ ಯುಜ್ವೇಂದ್ರ ಚಾಹಲ್ ಮ್ಯಾಜಿಕ್‌ ಮಾಡಿದ್ದಾರೆ
    • ಒಂದೇ ಓವರ್‌ನಲ್ಲಿ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ದಾಖಲೆ
    • ಎರಡು ವರ್ಷಗಳಿಂದ ಐಪಿಎಲ್‌ನಲ್ಲಿ ಯಾವುದೇ ಬೌಲರ್ ಹ್ಯಾಟ್ರಿಕ್ ಪಡೆದಿಲ್ಲ
W, W, W, W... ಒಂದೇ ಓವರ್‌ನಲ್ಲಿ 4 ವಿಕೆಟ್‌ ಕಬಳಿಸಿದ ಯುಜ್ವೇಂದ್ರ ಚಹಾಲ್! ವಿಶ್ವದ ಈ ಶ್ರೇಷ್ಠ ಬೌಲರ್‌ನನ್ನೇ ಹಿಂದಿಕ್ಕಿದ ಭಾರತದ ʼಕಿಲಾಡಿʼ
Yuzvendra Chahal

CSK vs PBKS: ಐಪಿಎಲ್ 2025ರಲ್ಲಿ ಯುಜ್ವೇಂದ್ರ ಚಾಹಲ್ ಮ್ಯಾಜಿಕ್‌ ಮಾಡಿದ್ದಾರೆ. ಇಂದು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದ 19 ನೇ ಓವರ್‌ನಲ್ಲಿ ತಮ್ಮ ಸ್ಪಿನ್‌ ಮೋಡಿ ತೋರಿಸಿದ ಚಾಹಲ್‌ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಚಾಹಲ್ ಎರಡನೇ ಹ್ಯಾಟ್ರಿಕ್ ಪಡೆದಿದ್ದಾರೆ. ಚಹಾಲ್ ಒಂದೇ ಓವರ್‌ನಲ್ಲಿ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಚೆನ್ನೈ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಸಿಎಸ್‌ಕೆ ಮತ್ತೊಮ್ಮೆ ತನ್ನ ತವರು ನೆಲದಲ್ಲಿ ಆಲ್ ಔಟ್ ಆಗಿದೆ.

Add Zee News as a Preferred Source

ಇದನ್ನೂ ಓದಿ: ಪತಂಜಲಿಯ ನೈಸರ್ಗಿಕ ಉತ್ಪನ್ನಗಳು ಜನರ ಆರೋಗ್ಯ ಮತ್ತು ಜೀವನಶೈಲಿಯನ್ನು ಹೇಗೆ ಸುಧಾರಿಸಿವೆ?

ಕಳೆದ ಎರಡು ವರ್ಷಗಳಿಂದ ಐಪಿಎಲ್‌ನಲ್ಲಿ ಯಾವುದೇ ಬೌಲರ್ ಹ್ಯಾಟ್ರಿಕ್ ಪಡೆದಿಲ್ಲ. ಆದರೆ ಈಗ ಈ ಬರಗಾಲವನ್ನು ಯುಜುವೇಂದ್ರ ಚಾಹಲ್ ಕೊನೆಗೊಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ 3 ಎಸೆತಗಳಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಸತತ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಆದರೆ ಹ್ಯಾಟ್ರಿಕ್ ಪಡೆಯುವ ಸಂದರ್ಭದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ನನ್ನು ರನ್ ಔಟ್ ಮಾಡಿದ್ದರು. ಹೀಗಾಗಿ ಮೂರನೇ ವಿಕೆಟ್‌ ಇವರ ಖಾತೆಗೆ ಬೀಳಲಿಲ್ಲ. ಹೀಗಿರುವಾಗ ವಿಶ್ವದ ಶ್ರೇಷ್ಠ ಆಟಗಾರ ಸ್ಟಾರ್ಕ್‌ಗೂ ಮುನ್ನವೇ ಚಾಹಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳು:

ಯುಜ್ವೇಂದ್ರ ಚಾಹಲ್ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದಾರೆ. 19 ನೇ ಓವರ್‌ನಲ್ಲಿ 3 ಓವರ್‌ಗಳನ್ನು ಬೌಲ್ ಮಾಡಿ 4 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ. ಮೊದಲು ಎಂಎಸ್ ಧೋನಿ, ನಂತರ ದೀಪಕ್ ಹೂಡಾ ಮತ್ತು ಅನ್ಶುಲ್ ಕಾಂಬೋಜ್ ಕ್ಲೀನ್ ಬೌಲ್ಡ್ ಆದರು. ಬಖಿಕ ನೂರ್ ಅಹ್ಮದ್ ಅವರ ಕೊನೆಯ ವಿಕೆಟ್ ಪಡೆದು ಪೆವಿಲಿಯನ್‌ಗೆ ಕಳುಹಿಸಿದರು.

ಇದನ್ನೂ ಓದಿ: ನಾನು ಆತನನ್ನು ಲವ್‌ ಮಾಡಿದ್ದೆ, ಅಷ್ಟು ವರ್ಷದ ಪ್ರೀತಿ ಫೇಲ್‌ ಆಗಿದ್ದು ಈ ಪುಟ್ಟ ಕಾರಣಕ್ಕೆ: ನಟಿ ಸುಕೃತಾ ನಾಗ್‌

ಇತಿಹಾಸ ನಿರ್ಮಿಸಿದ ಚಾಹಲ್
ಐಪಿಎಲ್ ಇತಿಹಾಸದಲ್ಲಿ ಎರಡನೇ ಬಾರಿಗೆ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಮೊದಲ ಬೌಲರ್ ಚಾಹಲ್. ಇನ್ನೊಂದೆಡೆ ಸಿಎಸ್‌ಕೆ ವಿರುದ್ಧ ಹ್ಯಾಟ್ರಿಕ್ ಪಡೆದ ಏಕೈಕ ಬೌಲರ್ ಚಾಹಲ್‌ ಎನಿಸಿಕೊಂಡರು. ಅವರ ಅತ್ಯುತ್ತಮ ಬೌಲಿಂಗ್‌ನಿಂದಾಗಿ, CSK ತಂಡವನ್ನು ೧೯೦ ರನ್‌ಗಳಿಗೆ ಕಟ್ಟಿಹಾಕಿದ್ದಾರೆ. ಸಿಎಸ್‌ಕೆ ಪರ ಸ್ಯಾಮ್ ಕರನ್ 88 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News