Yuzvendra Chahal With RJ Mahvash: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯವನ್ನು ವೀಕ್ಷಿಸಲು ಯುಜ್ವೇಂದ್ರ ಚಹಾಲ್ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ ಒಬ್ಬಂಟಿಯಾಗಿ ಅಲ್ಲ. ಧನಶ್ರೀ ವರ್ಮಾ ಜೊತೆಗಿನ ಡಿವೋರ್ಸ್ ವದಂತಿಗಳ ನಡುವೆಯೇ ಸುಂದರ ಹುಡುಗಿಯೊಬ್ಬಳ ಜೊತೆ ಚಹಾಲ್ ಕಾಣಿಸಿಕೊಂಡಿದ್ದಾರೆ.
ಪಂದ್ಯದ ಸಮಯದಲ್ಲಿ ಕ್ಯಾಮೆರಾ ಹಲವಾರು ಬಾರಿ ಯುಜ್ವೇಂದ್ರ ಚಹಾಲ್ ಮತ್ತು ಅವರ ಹೊಸ ಸ್ನೇಹಿತೆಯ ಕಡೆ ತಿರುಗಿವೆ. ಯುಜ್ವೇಂದ್ರ ಚಹಾಲ್ ಜೊತೆ ಕಾಣಿಸಿಕೊಂಡ ಈ ಮಿಸ್ಟ್ರಿ ಗರ್ಲ್ ಎಲ್ಲರ ಗಮನ ಸೆಳೆದಿದ್ದಾರೆ. ಎಲ್ಲರೂ ಈ ಸುಂದರಿ ಯಾರು ಎಂದು ತಿಳಿಯಲು ಬಯಸುತ್ತಿದ್ದಾರೆ?
ಯುಜ್ವೇಂದ್ರ ಚಹಾಲ್ ಜೊತೆ ಕಾಣಿಸಿಕೊಂಡ ಈ ಹುಡುಗಿಯ ಹೆಸರು ಆರ್‌ಜೆ ಮಹ್ವಾಶ್ ಎಂದು ಹೇಳಲಾಗುತ್ತಿದೆ. ಮಹ್ವಾಶ್ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿದ್ದು, ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಭಾರತ - ನ್ಯೂಜಿಲೆಂಡ್ ಪಂದ್ಯದವನ್ನು ನೋಡುತ್ತಿರುವ ಬಗ್ಗೆ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: IND vs NZ Final: 25 ವರ್ಷಗಳ ಬಳಿಕ ಕಿವೀಸ್ ವಿರುದ್ಧ ಸೇಡು ತೀರಿಸಿಕೊಂಡು ಚಾಂಪಿಯನ್ ಆದ ಟೀಂ ಇಂಡಿಯಾ!
ವೈರಲ್ ಆಗುತ್ತಿರುವ ಫೋಟೋಗಳಲ್ಲಿ ಮಹ್ವಾಶ್ ಬಿಳಿ ಟಿ-ಶರ್ಟ್ ಮತ್ತು ಕಪ್ಪು ಸನ್ ಗ್ಲಾಸ್ ಧರಿಸಿರುವುದು ಕಂಡುಬಂದಿದೆ. ಯುಜ್ವೇಂದ್ರ ಚಹಾಲ್ ಕಪ್ಪು ಟಿ-ಶರ್ಟ್ ಮತ್ತು ಕಪ್ಪು ಜಾಕೆಟ್ ಧರಿಸಿ ಕಾಣಿಸಿಕೊಂಡರು.
ಚಹಾಲ್ ಜೊತೆ ಮಹ್ವಾಶ್ ಭಾರತ vs ನ್ಯೂಜಿಲೆಂಡ್ ಫೈನಲ್ ವೇಳೆ ಕಾಣಿಸಿಕೊಂಡಿದ್ದಾರೆ. ಚಹಾಲ್ ಕೂಡ ಮಹ್ವಾಶ್ ಕಿವಿಯಲ್ಲಿ ಏನೋ ಪಿಸುಗುಟ್ಟುತ್ತಿರುವುದು ಕಂಡುಬಂದಿತು. 2025 ರ ಜನವರಿಯಲ್ಲಿ ಧನಶ್ರೀ ಮತ್ತು ಚಹಾಲ್ ವಿಚ್ಛೇದನದ ಸುದ್ದಿ ಹೊರಬಿದ್ದ ಕೂಡಲೇ, ಕ್ರಿಕೆಟಿಗ ಆರ್ ಜೆ ಮಹ್ವಾಶ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡಲು ಪ್ರಾರಂಭಿಸಿದವು.
ಮಹ್ವಾಶ್ ಒಬ್ಬ ಪ್ರಸಿದ್ಧ ಆರ್‌ಜೆ ಆಗಿದ್ದಾರೆ. ಅವರು ಫ್ಯಾಷನ್, ಪ್ರಯಾಣ ಮತ್ತು ಫಿಟ್ನೆಸ್ ಕುರಿತು ವೀಡಿಯೊಗಳನ್ನು ಮಾಡುವುದಕ್ಕೂ ಹೆಸರುವಾಸಿಯಾಗಿದ್ದಾರೆ. ಅವರ ರೀಲ್‌ಗಳು ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಮಹ್ವಾಶ್ ತನ್ನ ಆಕರ್ಷಕ ಧ್ವನಿಗೆ ಹೆಸರುವಾಸಿಯಾಗಿದ್ದಾರೆ. ಅವರು Instagram ನಲ್ಲಿ 1.4 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಅವರ ಅಧಿಕೃತ YouTube ಚಾನೆಲ್‌ನಲ್ಲಿ 787K ಕ್ಕೂ ಹೆಚ್ಚು ಸಬ್‌ಸ್ಕ್ರೈಬರ್ ಹೊಂದಿದ್ದಾರೆ.
ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಮತ್ತು ಯುಜ್ವೇಂದ್ರ ಚಹಾಲ್ ಇನ್ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಿಂದ ಪರಸ್ಪರರ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಧನಶ್ರೀ ವರ್ಮಾ ಮತ್ತು ಯುಜ್ವೇಂದ್ರ ಚಹಾಲ್ ಡಿಸೆಂಬರ್ 2020 ರಲ್ಲಿ ವಿವಾಹವಾದರು. ಧನಶ್ರೀ ವರ್ಮಾ ಮತ್ತು ಯುಜ್ವೇಂದ್ರ ಚಹಾಲ್ ಶೀಘ್ರದಲ್ಲೇ ವಿಚ್ಛೇದನವನ್ನು ಘೋಷಿಸಬಹುದು ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: IND vs NZ live updates : ʼಟಾಸ್ ಸೋತುʼ ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ..! ಹೇಗೆ ಗೊತ್ತೆ..?
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









