Bangalore Crime News : ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಸಾಕು ನಾಯಿಯೊಂದು ಕಳ್ಳತನವಾಗಿದ್ದು ಹುಡುಕಿ ಕೊಡುವಂತೆ ಮಾಲೀಕರು ಬೆಂಗಳೂರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಸ್ಕಿ ಬ್ರೀಡ್ ನ ಶ್ವಾನವನ್ನು ಜಿಯಾನ್ ಸೈಯದ್ ಎಂಬುವರು ವಾಕ್ ಗೆ ಬಿಟ್ಟಿದ್ರು. ನಾಯಿಯನ್ನ ಕಾಳಜಿ ಮಾಡುವ ರೀತಿ ಬಂದ ಮೂವರು ಆಸಾಮಿಗಳು ನಾಯಿಯನ್ನು ಕದ್ದೊಯ್ದಿದ್ದಾರೆ.
ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿದ್ದ ಉದ್ಯಮಿಯೊಬ್ಬನಿಗೆ ಹಣ ನೀಡಲಿಲ್ಲ ಅಂದ್ರೆ, ಬೆತ್ತಲೆಗೊಳಿಸಿ ರಸ್ತೆಯಲ್ಲಿ ಓಡಾಡಿಸುತ್ತೇವೆ. ಮಸೀದಿಗೆ ಕರೆದೊಯ್ದು ಮುಂಜಿ ಮಾಡಿಸುತ್ತೇವೆ ಎಂದು ಗ್ಯಾಂಗ್ ಒಂದು ಹೆದರಿಕೆ ಒಡ್ಡಿದೆ. ಅಲ್ಲದೆ, ಉದ್ಯಮಿಯ ಮೊಬೈಲ್ ನಿಂದ 21,500/- ರೂಪಾಯಿ ಫೋನ್ ಪೇ ಮಾಡಿಸಿಕೊಂಡಿದ್ದಾರೆ.
ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ರಾತ್ರಿ ಸಂಭವಿಸಿರೋ ಭಾರಿ ಅಗ್ನಿ ಅವಘಡದಿಂದ ಕಚೇರಿ, ತಯಾರಿಕ ಘಟಕದಲ್ಲಿದ್ದ ಕಂಪ್ಯೂಟರ್ಸ್, ಯಂತ್ರೋಪಕರಣಗಳು, ಕೆಮಿಕಲ್ಸ್, ಕಚ್ಚಾ ವಸ್ತುಗಳು ಸೇರಿದಂತೆ ಕೋಟ್ಯಾಂತರ ರೂಪಾಯಿ ಮೌಲ್ಯದ ಬೆಂಕಿಯಲ್ಲಿ ಬೆಂದು ಬೂದಿಯಾಗಿವೆ. ಘಟನೆಯೂ ಮೇಲ್ನೊಟಕ್ಕೆ ಶಾರ್ಟ್ ಸೆರ್ಕ್ಯೂಟ್ ನಿಂದ ಸಂಭವಿಸಿದೆ ಎಂದು ತಿಳಿದು ಬಂದಿದೆ.
ತಾನು ಪ್ರೀತಿಸಿದ ಯುವತಿಗೆ ಬೇರೆಯವನ ಜೊತೆ ಮದುವೆ ಫಿಕ್ಸ್ ಆಗಿದೆ ಎಂದು ಪ್ರಿಯತಮನೊಬ್ಬ ಆಕೆಯ ಮನೆಗೆ ನುಗ್ಗಿ ಅತ್ಯಾಚಾರವೆಸಗಿ ಕೊಲೆಗೈದಿರುವ ಘಟನೆ ವಿಲ್ಸನ್ ಗಾರ್ಡನ್‌ನಲ್ಲಿ ನಡೆದಿದೆ. ಮನೋಜ್ ಎಂಬಾತ ತನ್ನ ಪ್ರೇಯಸಿ ಶಾಲಿನಿಯನ್ನು ರೇಪ್ ಮಾಡಿ ಕೊಲೆಗೈದು ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮನೆ ಕೆಲಸಕ್ಕೆ ಬೇಕು ಅಂತ ನಾವು ಸಿಕ್ಕ ಸಿಕ್ಕವರನ್ನೆಲ್ಲಾ ಸೇರುಸಿಕೊಂಡರೆ ಕೊನೆಗೆ ಆಗೋದೆ ಬೇರೆ. ಉಂಡು ಹೋದ ಕೊಂಡು ಹೋದ ಅನ್ನುವ ರೀತಿಯಲ್ಲಿ ನಿಮ್ಮ ಮನೆಯಲ್ಲಿ ಇರೋ ಬರೋದನ್ನೆಲ್ಲಾ ದೋಚ್ಕೊಂಡು ಹೋಗ್ತಾರೆ ಹುಷಾರ್..!
air hostess Archana Dhiman Death: ಅರ್ಚನಾ ಧೀಮಾನ್ ಮೂಲತಃ ಹಿಮಾಚಲ ಪ್ರದೇಶದವಳಾಗಿದ್ದು, ಕೇರಳ ಮೂಲದ ಆದೇಶ್ ಎಂಬ ಟೆಕ್ಕಿಯನ್ನ ಪ್ರೀತಿಸುತ್ತಿದ್ದಳು. ಆದೇಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದ. ಡೇಟಿಂಗ್ ಆ್ಯಪ್ ಮೂಲಕ ಗಗನಸಖಿ ಅರ್ಚನಾ ಹಾಗೂ ಆದೇಶ್ ಪರಿಚಯವಾಗಿ ಇಬ್ಬರಿಗೂ ಲವ್ ಆಗಿದೆ. ಪ್ರಿಯಕರ ಆದೇಶ್ ನೋಡಲು ಅರ್ಚನಾ ಬೆಂಗಳೂರಿನ ಕೋರಮಂಗಲಕ್ಕೆ ಬಂದಿದ್ದಳು.
ಅದೊಂದು ವ್ಯವಸ್ಥಿತ ಗ್ಯಾಂಗ್.. ಸಿಲಿಕಾನ್ ಸಿಟಿಯ ರಾತ್ರಿ ಲೋಕಕ್ಕೆ ಮತ್ತೇರಿಸುವ ಜಾಲವದು.. ಹೊರ ರಾಜ್ಯದಿಂದ ಸದ್ದಿಲ್ಲದ ನಶೆ ಏರಿಸಲು ಬಂದಿದ್ದ ಗಾಂಜಾ ವಾಸನೆ ಖಾಕಿ ಮೂಗಿಗೆ ಬಡಿದಿತ್ತು.. ಸಿಕ್ಕ ವಾಸನೆಯ ಜಾಡು ಹಿಡಿದ ಪೊಲೀಸರು ಭರ್ಜರಿ ಭೇಟೆಯಾಡಿದ್ದು, ಬರೋಬ್ಬರಿ 2 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುವನ್ನ.
ಪ್ರೀತಿ ಮಾಯೆ ಹುಷಾರು ಎಂಬ ಮಾತಿದೆ. ಇಷ್ಟಾದ್ರೂ ಪ್ರೀತಿಸಿವರಿಗಾಗಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಾರೆ. ಇನ್ನೂ ಕೆಲವರು ಪ್ರೀತಿಸಿದವರ ಪ್ರಾಣವನ್ನು ತೆಗೆದುಬಿಡ್ತಾರೆ. ಹೀಗೆ ಪ್ರೀತ್ಸೆ ಪ್ರೀತ್ಸೆ ಅಂತಾ ಪ್ರೀತಿಸದವಳಿಗೆ ಎಳ್ಳು ನೀರು ಬಿಟ್ಟ ಪಾಗಲ್ ಪ್ರೇಮಿಯ ಭಯಾನಕ ಕಹಾನಿ ಇಲ್ಲಿದೆ ನೋಡಿ.
ಸಿಲಿಕಾನ್ ಸಿಟಿಯಲ್ಲಿ ಬರುಬರುತ್ತಾ ಪುಡಿರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬತೆ ಇವತ್ತು ಬೇಕರಿ ಮಾಲೀಕನ ಮೇಲೆ ಪುಡಿ ರೌಡಿಯೊಬ್ಬ ಹಲ್ಲೆ ನಡೆಸಿ ಕೊಲೆ ಜೀವ ಬೆದರಿಕೆ ಹಾಕಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಳಾಗಾಳದಲ್ಲಿ ಘಟನೆ ನಡೆದಿದ್ದು, ಬೇಕರಿ ಮಾಲೀಕ ರಘುನಾಥ್ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ.
Bangalore Crime News : ಇಸ್ಲಾಂಗೆ ಮತಾಂತರವಾಗಿ ಮದುವೆಯಾಗಿದ್ದ ಹಿಂದೂ ಮಹಿಳೆಯನ್ನು ಹೆರಿಗೆಗೆ ಎಂದು ತವರು ಮನೆಗೆ ಕಳುಹಿಸಿ ಅಬ್ದುಲ್ ರಹೀಂ ಎಂಬಾತ ಎರಡನೇ ಮದುವೆಯಾಗಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಸಂತ್ರಸ್ತೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ನೀವು ಯಾರಾದ್ರೂ ಲೇಡಿಯನ್ನು ಪರಿಚಯ ಮಾಡ್ಕೊಂಡು ಆಕೆಯ ಜೊತೆ ಸಲುಗೆಯಿಂದ ಇದ್ದೀರಾ.. ಹಾಗಾದ್ರೆ ಸ್ವಲ್ಪ ಎಚ್ಚರದಿಂದ ಇರಿ. ಹನಿಟ್ರಾಪ್ ಮಾಡಿ ಹಣ ಕಿತ್ತು ಎಸ್ಕೇಪ್ ಆಗುವ ಚಾನ್ಸ್ ಇರುತ್ತೆ. ಹೀಗೆ ಜನರನ್ನು ಯಾಮಾರಿಸುತ್ತಿದ್ದ ಶಾರ್ಟ್ ಮೂವಿ ಮಾಡುತ್ತಿದ್ದ ಗ್ಯಾಗೊಂದು ಅಂದರ್ ಆಗಿದೆ. ಹಾಗಾದ್ರೆ ಏನಿದು ಸ್ಟೋರಿ ಅಂತೀರಾ.. ನೀವೇ ನೋಡಿ.
ಕೈ ಹಿಡಿದ ಹೆಂಡತಿಗೆ ಮೋಸ ಮಾಡಿ ಪ್ರಿಯತಮೆ ಜೊತೆ ಓಡಿಹೋಗಿದ್ದವನು ಶವವಾಗಿ ಪತ್ತೆಯಗಿದ್ದಾನೆ. ನಾಗೇಶ್ ಮೃತಪಟ್ಟವನು. ಮೃತ ನಾಗೇಶ್ 6 ವರ್ಷದ ಹಿಂದೆ ಮಧುಶ್ರಿ ಎಂಬಾಕೆಯನ್ನ ಮದುವೆಯಾಗಿದ್ದ. ಕೊಮ್ಮಘಟ್ಟದ ವೀರಭದ್ರ ನಗರದಲ್ಲಿ ವಾಸವಾಗಿದ್ದ ನಾಗೇಶ್ ಗೆ ಸಹನಾ ಎಂಬಾಕೆಯ ಪರಿಚಯವಾಗಿತ್ತು.
Karnataka Election 2023 : ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದೆ. ಸದ್ಯ ಕೆಲ ರೌಡಿಶೀಟರ್ ಗಳು ಫುಲ್ ಆಕ್ಟಿವ್ ಆಗಿದ್ದಾರೆ. ಯಾವುದಾದರೂ ಪಕ್ಷದಿಂದ ಬಿ ಫಾರಂ ಪಡೆದು ಚುನಾವಣೆಯಲ್ಲಿ ಒಂದು ಕೈ ನೋಡೋಣ ಎಂದು ತೊಡೆತಟ್ಟಿದ್ದಾರೆ. ಕೆಲ ರೌಡಿ ಶೀಟರ್ಸ್ ಗಳು ಎಲೆಕ್ಷನ್ ಮೇಲೆ ಕಣ್ಣಿಟ್ಟು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವರ್ಕೌಟ್ ಶುರು ಮಾಡಿದ್ದಾರೆ.
ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂಟಿ ಮಹಿಳೆ ಕೊಂದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸಲಾಗಿದೆ. ಮಂಡ್ಯ ಮೂಲದ ಕೌಸರ್ ಮುಬೀನಾಳನ್ನು ಹತ್ಯೆಗೈದ ಆರೋಪದಡಿ ಆಕೆಯ ಜೊತೆ ಲಿವಿಂಗ್ ರಿಲೇಷನ್ಶಿಪನಲ್ಲಿದ್ದ ನದೀಮ್ ಪಾಷ ಎಂಬಾತನನ್ನು ಬಂಧಿಸಲಾಗಿದೆ.
ಕಳ್ಳತನವಾದ ಬೈಕ್ ಪತ್ತೆಹಚ್ಚುವಂತೆ ಬೈಕ್ ಮಾಲೀಕ ದೂರು ನೀಡಿದರೂ ಸಹ ಎಫ್ಐಆರ್ ದಾಖಲಿಸದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಟ್ವಿಟರ್ ನಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಕಳುವಾದ ಬೈಕ್ ಬಗ್ಗೆ
ಕ್ಷುಲ್ಲಕ ಕಾರಣಕ್ಕೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಇಕೋಸ್ಪೇಸ್ ಸಿಗ್ನಲ್ ಬಳಿ ಕಾರು ಚಾಲಕ ಹಾಗೂ ಆಟೋ ಡ್ರೈವರ್ ನಡುವೆ ರಸ್ತೆಯಲ್ಲೇ ಮಾರಾಮಾರಿ ನಡೆದಿದೆ. ಇಕೋಸ್ಪೇಸ್ ಸಿಗ್ನಲ್ ಬಳಿ ತೆರಳುತ್ತಿದ್ದಾಗ ಆಟೋ ರಿಕ್ಷಾಗೆ ಕಾರು ಟಚ್ ಆಗಿದೆ ಎನ್ನಲಾಗಿದೆ. ಇಷ್ಟಕ್ಕೇ ರೊಚ್ಚಿಗೆದ್ದ ಆಟೋ ಚಾಲಕ ಪಕ್ಕದಲ್ಲಿ ತೆರಳುತ್ತಿದ್ದ ಕಾರು ಚಾಲಕನ ಮೇಲೆ ರಸ್ತೆಯಲ್ಲೇ ಹಲ್ಲೆ ನಡೆಸಿದ್ದಾನೆ.
ಯುವತಿಗೆ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಯುವಕನನ್ನು ಅಪಹರಿಸಿ ಕೊಲೆ ಮಾಡಿದ್ದ ಘಟನೆ ಮಾಸುವ ಮುನ್ನವೇ ನಗರದಲ್ಲಿ ಅಂಥಹದ್ದೇ ಮತ್ತೊಂದು ಘಟನೆ ನಡೆದಿದೆ. ನಕಲಿ ಖಾತೆ ಸೃಷ್ಟಿಸಿ ಯುವತಿಗೆ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆಯ ಸಹೋದರ ಯುವಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಗೋವಿಂದರಾಜನಗರದಲ್ಲಿ ನಡೆದಿದೆ. ಸಿದ್ಧಾರ್ಥ್ ಚಾಕು ಇರಿತಕ್ಕೊಳಗಾದ ಯುವಕ.
ಒಂದು ಬಾರಿ ಅನುಮಾನ ಶುರುವಾದರೆ ಅದು ಹೋಗೊದೆ ಇಲ್ಲಾ ಎಂಬುದಕ್ಕೆ ಇಲ್ಲಿ ನಡೆದ ಕೊಲೆ ಸಾಕ್ಷಿಯಾಗಿದೆ. ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಗಂಡನೇ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಡನೆ ರಾಜಧಾನಿಯಲ್ಲಿ ನಡೆದಿದೆ.
Biker dragged an old man: ಇಂದು ಬೆಳಗ್ಗೆ ಮಾಗಡಿ ರೋಡ್ ಟೋಲ್ ಗೇಟ್ ಬಳಿ ಒನ್ ವೇ ಮಾರ್ಗದಲ್ಲಿ ವೇಗವಾಗಿ ಬಂದ ಸಾಹೀಲ್ ಎಂಬಾತ ಟಾಟಾ ಸುಮೋ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ ಚಾಲಕ ಮುತ್ತಪ್ಪನೊಂದಿಗೆ ಮಾತಿನ ಚಕಮಕಿ ನಡೆಸಿ ಬೈಕ್ ಹತ್ತಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.