ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ HDFC ಯಲ್ಲಿ ನೀವು ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ಈ ಸುದ್ದಿ ನಿಮಗೆ ಮುಖ್ಯವಾಗಿದೆ. ಬ್ಯಾಂಕಿನ UPI ಸೇವೆ ಕೆಲವು ಗಂಟೆಗಳ ಕಾಲ ಮುಚ್ಚಲಿದೆ. HDFC ಬ್ಯಾಂಕಿನ ಏಕೀಕೃತ ಪಾವತಿ ಇಂಟರ್ಫೇಸ್ (UPI) ಸುಮಾರು 90 ನಿಮಿಷಗಳ ಕಾಲ ಸ್ಥಗಿತಗೊಳ್ಳಲಿದೆ. ಬ್ಯಾಂಕ್ ಖಾತೆದಾರರಿಗೆ ಇಮೇಲ್, ಸಂದೇಶ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಈ ಬಗ್ಗೆ ತಿಳಿಸಿದೆ.