Camphor benefits:ಕೂದಲು ಉದುರುವುದು, ತಲೆಹೊಟ್ಟು ಮತ್ತು ನೆತ್ತಿಯ ಸೋಂಕಿನಿಂದ ಉಂಟಾಗಬಹುದು, ಮತ್ತು ಈ ವಿಷಯದಲ್ಲಿ ಕರ್ಪೂರವು ಸಹಾಯಕವಾಗಿದೆ.
ತೆಂಗಿನೆಣ್ಣೆಯೊಂದಿಗೆ ಕರ್ಪೂರವನ್ನು ಬೆರೆಸಿ ಹಚ್ಚುವುದರಿಂದ ಕೂದಲು ಬಿಳಿಯಾಗುವುದು, ತುದಿ ಸೀಳುವುದು ಮತ್ತು ಕೂದಲು ಒಡೆಯುವ ಸಮಸ್ಯೆಯನ್ನೂ ಕಡಿಮೆ ಮಾಡಬಹುದು.
Camphor for Hair: ಸಾಮಾನ್ಯವಾಗಿ ಕರ್ಪೂರವನ್ನು ಪೂಜೆಗಳಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಮನೆಯಲ್ಲಿರುವ ವಾಸ್ತು ದೋಷಗಳನ್ನು ತೆಗೆದುಹಾಕಲು ಕೂಡ ಕರ್ಪೂರವನ್ನು ಸಹ ಬಳಸಬಹುದು. ಇನ್ನುಳಿದಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹ ಇದನ್ನು ಬಳಸಲಾಗುತ್ತದೆ. ಆದರೆ ಕರ್ಪೂರವು ಆರೋಗ್ಯ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದರಲ್ಲೂ ಕೂದಲಿಗೆ ಇದು ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ?
Camphor for Hair: ಆರೋಗ್ಯಕರ ಮತ್ತು ದಷ್ಟಪುಷ್ಟವಾದ ಕಪ್ಪು ಕೂದಲು ಪಡೆಯಬೇಕೆಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಹೀಗೊಂದು ವೇಳೆ ಇಚ್ಛೆಯಿದ್ದು, ಅನೇಕ ಪ್ರಯತ್ನಗಳನ್ನು ಮಾಡಿಯೂ ಫಲ ಸಿಕ್ಕಿಲ್ಲ ಎಂದಾದರೆ ಈ ಪರಿಹಾರವನ್ನು ಅನುಸರಿಸಬಹುದು.