Chandrayan 1 Mission: ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಸಂಪೂರ್ಣವಾಗಿ ಸಿದ್ಧವಾಗಿದೆ. ಇದೆಲ್ಲದರ ನಡುವೆ, ಸುಮಾರು 15ವರ್ಷಗಳ ಹಿಂದೆಯೇ, ಚಂದ್ರನ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದ ಇಸ್ರೋದ ಚಂದ್ರಯಾನ-1 ಮಿಷನ್ ಬಗ್ಗೆ ಅರ್ಥಮಾಡಿಕೊಳ್ಳುವುದು ಕೂಡ ಅತ್ಯಗತ್ಯವಾಗಿದೆ.
ಇತ್ತೀಚೆಗೆ ನಡೆದ ಮಹತ್ವದ ಬೆಳವಣಿಗೆಯಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಸಿಇ-20 ಕ್ರಯೋಜೆನಿಕ್ ಇಂಜಿನ್ನಿನ ಫ್ಲೈಟ್ ಅಕ್ಸೆಪ್ಟೆನ್ಸ್ ಹಾಟ್ ಟೆಸ್ಟ್ ಅನ್ನು ಯಶಸ್ವಿಯಾಗಿ ನೆರವೇರಿಸಿತು. ಈ ಸಿಇ-20 ಇಂಜಿನ್ ಎಲ್ವಿಎಂ3 ಚಂದ್ರಯಾನ್-3 ಯೋಜನೆಯ ಉಡಾವಣಾ ವಾಹನದ ಕ್ರಯೋಜೆನಿಕ್ ಅಪ್ಪರ್ ಸ್ಟೇಜ್ಗೆ ಶಕ್ತಿ ನೀಡಲಿದೆ. ಈ ಕುರಿತು ಮಾಹಿತಿ ನೀಡಿದ ಇಸ್ರೋ, ಪರೀಕ್ಷೆಯು ಫೆಬ್ರವರಿ 24ರಂದು ತಮಿಳುನಾಡಿನ ಮಹೇಂದ್ರಗಿರಿಯ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ ನಲ್ಲಿ ಯಶಸ್ವಿಯಾಗಿ ನೆರವೇರಿತು ಎಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.