'ರಾಜಕೀಯದಲ್ಲಿ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದೇ ತಿಳಿಯುತ್ತಿಲ್ಲ. ನಂಬಿಕೆ ಎಂಬ ಪದಕ್ಕೆ ಅರ್ಥವೇ ಇಲ್ಲ ಎನ್ನವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ನನ್ನಿಂದ ಎಲ್ಲಾ ರೀತಿಯ ಸಹಕಾರ ಪಡೆದುಕೊಂಡವರೇ ಈಗ ದೋಖಾ ಮಾಡಿದ್ದಾರೆ. ನೆರವು ಪಡೆದುಕೊಂಡವರೇ ಬೆನ್ನಿಗೆ ಚೂರಿ ಹಾಕಿದ್ದಾರೆ'- ಮಾಜಿ ಸಿಎಂ ಸಿದ್ದರಾಮಯ್ಯ
ಸದನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾನ್ಯ ಸಭಾಧ್ಯಕ್ಷರೇ ಸರ್ವೋಚ್ಚರು. ಚರ್ಚೆ ಮತ್ತು ಅಭಿಪ್ರಾಯ ಮಂಡನೆ ಸೇರಿದಂತೆ ಇತರೆ ವಿಚಾರಗಳಲ್ಲಿ ಸಭಾಧ್ಯಕ್ಷರಿಗೆ ಸೂಚನೆ ನೀಡುವ ಅಧಿಕಾರ ರಾಜ್ಯಪಾಲರಿಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಎಚ್. ವಿಶ್ವನಾಥ್ ಅವರು ಎಷ್ಟಕ್ಕೆ ಮಾರಾಟವಾಗಿದ್ದಾರೆ ಎಂಬುಡು ಸದನಕ್ಕೆ ತಿಳಿಯ ಬೇಕಿದೆ ಎಂದು ವಿಶ್ವನಾಥ್ ವಿರುದ್ಧ ವಾಗ್ಧಾಳಿ ನಡೆಸಿದ್ದ ಸಚಿವ ಸಾ.ರಾ. ಮಹೇಶ್ ಗೆ ಹಳ್ಳಿ ಹಕ್ಕಿ ತಿರುಗೇಟು.
ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಕೆಲಸಕ್ಕೆ ಮುಂದಾಗಬೇಡಿ. ಇಂತಹ ಸಾವಿರ ಆರೋಪ ಬಂದರೂ ಅದನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ನನಗೆ ಜನ್ಮತಃ ಬಂದಿದೆ- ಟೀಕಾಕಾರರಿಗೆ ಸದನದಲ್ಲಿ ಸ್ಪೀಕರ್ ಉತ್ತರ
ಇಂದು ಬೆಳಿಗ್ಗೆ ಸದನಕ್ಕೆ ಆಗಮಿಸಿದ ಡಿಸಿಎಂ ಜಿ.ಪರಮೇಶ್ವರ್ ಅವರು ಬಿಜೆಪಿ ಶಾಸಕರ ಕುಶಲೋಪರಿ ವಿಚಾರಿಸಿದರು. ಸರ್ಕಾರದ ವಿರುದ್ಧ ಹೋರಾಟ ನಡೆಸಿದರೂ ಸಹ ಬೆಳಗಿನ ಉಪಹಾರವನ್ನು ವಿಪಕ್ಷ ಸದಸ್ಯರೊಂದಿಗೇ ಪರಮೇಶ್ವರ್ ಸೇವಿಸಿದರು.
ವೈಯಕ್ತಿಕ ಕೆಲಸದ ಮೇಲೆ ಚೆನ್ನೈಗೆ ಹೋಗಿದ್ದೆ. ಅಲ್ಲಿ ಎದೆ ನೋವು ಕಾಣಿಸಿಕೊಂಡಿತು. ಯಾವ ಆಸ್ಪತ್ರೆಗೆ ದಾಖಲಾಗುವುದು ಎಂದು ತಿಳಿಯದೆ ವಿಮಾನ ಟಿಕೆಟ್ ಬುಕ್ ಮಾಡಿಕೊಂಡು ಮುಂಬೈ ಬಂದೆ ಎಂದು ಶ್ರೀಮಂತ ಪಾಟೀಲ ಅವರು ವೀಡಿಯೋದಲ್ಲಿ ತಿಳಿಸಿದ್ದಾರೆ.
ಆರ್ಟಿಕಲ್ 175(2)ರ ಅಡಿಯಲ್ಲಿ ಸ್ಪೀಕರ್ ಅವರಿಗೆ ಸಂದೇಶ ರವಾನಿಸಿದ್ದೇನೆ. ಇಂದು ಸದನ ಮುಂದೂಡಲ್ಪಟ್ಟ ಕಾರಣ ಜುಲೈ 19ರಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸಿ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ.
ನಾನು ಶಾಸಕಾಂಗ ಪಕ್ಷದ ನಾಯಕನಾಗಿದ್ದು, ನನ್ನ ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡುವ ಅಧಿಕಾರ ನನಗಿದೆ, ಹೀಗಿರುವಾಗ ಸುಪ್ರೀಂ ಕೋರ್ಟ್ ವಿಫ್ ಜಾರಿ ಬಗ್ಗೆ ನೀಡಿರುವ ಆದೇಶ ನಿಜಕ್ಕೂ ಗೊಂದಲ ಮೂಡಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ಕಳೆದ 14 ತಿಂಗಳುಗಳಿಂದ ಅಚ್ಚುಕಟ್ಟಾಗಿ ಕೆಲಸಗಳನ್ನು ನಿರ್ವಹಿಸಿದೆ. ಆದಾಗ್ಯೂ ವಿರೋಧ ಪಕ್ಷದವರು ಐಎಂಎ ಹಗರಣ, ಜಿಂದಾಲ್ ಪ್ರಕರಣಗಳ ಬಗ್ಗೆ ಶಾಸಕರು ರಾಜೀನಾಮೆ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ. ವಿಪಕ್ಷದವರು 'ಅಯೋಗ್ಯ ಸರ್ಕಾರ' ಎಂದಿದ್ದಾರೆ. ಇಲ್ಲಿ ಯಾರಿಗೆ ಮಾನ ಮರ್ಯಾದೆ ಇದೆಯೋ ತಿಳಿದಿಲ್ಲ. ನಮಗಂತೂ ಇದೆ. ಇವೆಲ್ಲದಕ್ಕೂ ನಾವು ಸ್ಪಷ್ಟನೆ ನೀಡಬೇಕಿದೆ. ಹಾಗಾಗಿ ಮೊದಲು ಚರ್ಚೆ ನಡೆಸಿ ಬಳಿಕ ವಿಶ್ವಾಸಮತಯಾಚನೆಗೆ ಹೋಗುವುದು ಸೂಕ್ತ ಎಂದು ಸಿಎಂ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.