InspectIR: ಇನ್ಮುಂದೆ ಕೇವಲ ಮೂರೇ ನಿಮಿಷಗಳಲ್ಲಿ ಉಸಿರಾಟದ ಮೂಲಕ ಕೋವಿಡ್ -19 ಅನ್ನು ಪತ್ತೆಹಚ್ಚಬಹುದು. ಇದಕ್ಕಾಗಿ, ಎಫ್ಡಿಎ ಸಾಧನವೊಂದರ ತುರ್ತು ಬಳಕೆಗೆ ಅನುಮತಿ ನೀಡಿದೆ, ತನ್ಮೂಲಕ ಕರೋನವೈರಸ್ ಅನ್ನು ಉಸಿರಾಟದ ಮೂಲಕ ಪರೀಕ್ಷಿಸಬಹುದು.
ಹೋಮ್ ಕಿಟ್ (Rapid Antigen Kit) ಮೂಲಕ ನೀವು ಕೊರೊನಾ ಪಾಸಿಟಿವ್ ಅಥವಾ ನೆಗೆಟಿವ್ ಎಂದು ತಿಳಿಯುತ್ತದೆ. ನೀವು ಕೊರೊನಾ ರೋಗಲಕ್ಷಣಗಳನ್ನು ಹೊಂದಿದ್ದರೆ Rapid Antigen ಪರೀಕ್ಷೆ ಮಾಡಿಕೊಳ್ಳಬಹುದು. ಆದರೆ RT-PCR ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಏಕೆಂದರೆ Rapid Antigen ಪರೀಕ್ಷೆಯು ಕೆಲವು ಸಂದರ್ಭಗಳಲ್ಲಿ ತಪ್ಪು ವರದಿಯನ್ನು ನೀಡುತ್ತದೆ.
ಜೂನ್ 6 ರಂದು 175 ವಿದ್ಯಾರ್ಥಿಗಳ ಎರಡನೇ ಬ್ಯಾಚ್ ಆಗಮಿಸಿದ್ದು, ಅವರಲ್ಲಿ ಮೊದಲ ದಿನ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದಾಗ, ಅಧಿಕಾರಿಗಳು ಜುಲೈ 17 ರಂದು ಆ ಬ್ಯಾಚ್ನ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಗಳನ್ನು ನಡೆಸಿದರು. ಅವರಲ್ಲಿ 20 ಮಂದಿಗೆ ಪಾಸಿಟಿವ್ ಬಂದಿದೆ. ಹಾಗಾಗಿ ಅವರನ್ನ ಮನೆಗೆ ಕಳುಹಿಸಲಾಗಿದೆ.
New Corona Test Kit: COVID-19 ಪ್ರಕೋಪದ ನಡುವೆ ರೋಗದ ಪರೀಕ್ಷೆ ಪ್ರಮುಖ ಸಮಸ್ಯೆಯಾಗಿ ಮಾರ್ಪಟ್ಟಿದೆ. RT PCR Corona Test Result ಬರಲು ಇನ್ನೂ ಹಲವು ಕಡೆಗಳಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲಾವಕಾಶ ತಗಲುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ಟೆಸ್ಟ್ ಕಿಟ್ ಕೊರೊನಾ ವಿರುದ್ಧದ ಹೋರಾಟದಲ್ಲಿ ಒಂದು ಭಾರಿ ಬದಲಾವಣೆ ತರುವ ಸಾಧ್ಯತೆ ಇದೆ.
ಇಲಿನಾಯ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎಲೆಕ್ಟ್ರೋಕೆಮಿಕಲ್ ಸಂವೇದಕಗಳ ಆಧಾರದ ಮೇಲೆ ಪರೀಕ್ಷಾ ಕಿಟ್ ತಯಾರಿಸಿದ್ದಾರೆ. ಈ ಸಂವೇದಕದ ಸಹಾಯದಿಂದ ಕೋವಿಡ್ -19 ಪರೀಕ್ಷೆಯ ಫಲಿತಾಂಶವನ್ನು 5 ನಿಮಿಷಗಳಲ್ಲಿ ಪಡೆಯಲಾಗುತ್ತದೆ. ಇದನ್ನು ತಯಾರಿಸಿದ ವಿಜ್ಞಾನಿಗಳು ಈ ಸಂವೇದಕವನ್ನು ಸ್ಮಾರ್ಟ್ಫೋನ್ಗೆ ಸಂಪರ್ಕಿಸಿದರೆ ಕರೋನಾ ಪರೀಕ್ಷೆಯನ್ನು ಮನೆಯಿಂದಲೇ ಮಾಡಬಹುದು ಎಂದು ಹೇಳಿದ್ದಾರೆ.
ಮಂಗಳವಾರ ದೆಹಲಿ ಹೈ ಕೋರ್ಟ್ ತೀರ್ಪೊಂದನ್ನು ಪ್ರಕಟಿಸಿದ್ದು, ಇದರಲ್ಲಿ ರಾಜಧಾನಿ ದೆಹಲಿಯಲ್ಲಿ ಕೊವಿಡ್ -19ನ RT/PCR ಪರೀಕ್ಷೆಗೆ ಒಳಗಾಗಲು ವೈದ್ಯರ ಚೀಟಿ ಅಥವಾ ಪ್ರಿಸ್ಕ್ರಿಪ್ಶನ್ ಕಡ್ಡಾಯವಲ್ಲ ಎಂದು ಹೇಳಿದೆ.
ಸಿಂಗಾಪುರ್ ವಿಜ್ಞಾನಿಗಳು ಆವಿಷ್ಕರಿಸಿದ ಈ ಹೊಸ ತಂತ್ರಜ್ಞಾನದ ಮೂಲಕ ಕರೋನಾದ ವರದಿ ಕೇವಲ 36 ನಿಮಿಷಗಳಲ್ಲಿ ಲಭ್ಯವಾಗಲಿದೆ. ಪ್ರಸ್ತುತ, ಕರೋನಾ ಟೆಸ್ಟ್ ವರದಿ ಬರಲು ಒಂದರಿಂದ ಎರಡು ದಿನಗಳು ಕಾಲಾವಕಾಶ ಬೇಕಾಗುತ್ತದೆ.
ಕರೋನಾವೈರಸ್ ಟೆಸ್ಟ್ ಮಾಡಿಸಲು ವೈದ್ಯರ ಅನುಮತಿ ಕಡ್ಡಾಯ ಎಂದು ಹೇಳಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಒತ್ತಡವಿದೆ ಎಂದು ರಾಜ್ಯಗಳಿಗೆ ತಿಳಿಸಲಾಗಿದೆ. ಈ ನಿಯಮದಿಂದಾಗಿ ಸಾಮಾನ್ಯ ಜನರಿಗೆ ಕರೋನಾ ಪರೀಕ್ಷೆಯನ್ನು ಪಡೆಯಲು ಬಹಳ ವಿಳಂಬವಾಗುತ್ತಿದೆ ಎಂದು ದೂರಲಾಗಿದೆ.
ವೈರಸ್ ಹೊಂದಿರುವ ಗಂಟಲಿನ ಸ್ನಾಯುಗಳಲ್ಲಿ 3 ತಿಂಗಳವರೆಗೆ ಕೊರೊನಾ ವೈರಸ್ ಜೀವಿತಾವಧಿ ಹೊಂದಿರುತ್ತದೆ. ಅಂದರೆ. ವೈರಸ್ ಸಾವಿನ ಬಳಿಕ ಕೂಡ ಈ ಸ್ನಾಯುಗಳಲ್ಲಿ ಬಿದ್ದಿರುವ ಕಾರಣ ಟೆಸ್ಟ್ ನೆಗೆಟಿವ್ ಬರದೆ ಇರುವ ಒಂದು ಕಾರಣ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.