ಈ ಬಗ್ಗೆ ಟ್ವಿಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಹೆಚ್. ಡಿ. ಕುಮಾರಸ್ವಾಮಿ, ಸಣ್ಣ ಪ್ರಮಾಣದ ಜ್ವರ, ಮೈಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾನು ಇಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಫಲಿತಾಂಶ ಪಾಸಿಟಿವ್ ಎಂದು ಬಂದಿದೆ.
Covid-19 New Research: ಕೊರೊನಾ ಕಾಲದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಜನರು ಕರೋನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಿದರು. ಆದರೆ, ರೋಗಿಗಳ ಮಧ್ಯೆ ಇದ್ದೂ ಕೂಡ ಹಲವರು ಈ ಮಾರಕ ಸೋಂಕಿಗೆ ಒಳಗಾಗದೆ ಇರುವ ಹಲವು ಜನರಿದ್ದಾರೆ, ಅವರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.
NTAGI ಯ ಸ್ಥಾಯಿ ತಾಂತ್ರಿಕ ಉಪ-ಸಮಿತಿ (STSC) ಕಳೆದ ತಿಂಗಳು ಕೋವಿಡ್-19 ಲಸಿಕೆ ಎರಡನೇ ಮತ್ತು ಮುನ್ನೆಚ್ಚರಿಕೆಯ ಡೋಸ್ಗಳ ನಡುವಿನ ಅಂತರವನ್ನು ಆರು ತಿಂಗಳಿಗೆ ಕಡಿಮೆ ಮಾಡಿರುವ ಬಗ್ಗೆ ಆದೇಶ ಹೊರಡಿಸಿದೆ.
ಜಗತ್ತಿನೆಲ್ಲೆಡೆ ಕೊರೊನಾ ಪ್ರಕರಣಗಳು ಇನ್ನೇನು ಇಳಿಕೆಯಾಗುತ್ತಿರುವ ಸಂದರ್ಭದಲ್ಲಿಯೇ ಈ ಮಾಹಾಮಾರಿ ಇನ್ನೂ ಮುಗಿದಿಲ್ಲ ಅದು ರೂಪಾಂತರಗೊಳ್ಳುತ್ತಿದೆ ಸುಮಾರು 110 ದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಈ ಹೆಚ್ಚಳಕ್ಕೆ ಮುಖ್ಯವಾಗಿ ಓಮಿಕ್ರಾನ್ ನ ಎರಡು ಉಪ-ರೂಪಾಂತರಗಳು ಕಾರಣ ಎಂದು ಅದು ಹೇಳಿದೆ.
ಇನ್ನು ಪೀಣ್ಯ ಎರಡನೇ ಹಂತದ ನ್ಯೂ ಸ್ಟಾಂಡರ್ಡ್ ಇಂಗ್ಲಿಷ್ ಶಾಲೆಯ 21 ಮಕ್ಕಳಿಗೆ ಕೊರೊನಾ ನೆಗಟಿವ್ ಬಂದಿದೆ. ಎಂಇಎಸ್ ಶಾಲೆಯ 10 ವಿದ್ಯಾರ್ಥಿಗಳ ರಿಪೋರ್ಟ್ ಬರಬೇಕಿದೆ. ಪಾಸಿಟಿವ್ ಬಂದು ಏಳು ದಿನ ಕಳೆದ ಹಿನ್ನೆಲೆಯಲ್ಲಿ ಇಂದು ಮತ್ತೆ ಕೊರೊನಾ ಟೆಸ್ಟ್ ಮಾಡಿಸಲು ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಶನಿವಾರದಂದು 139 COVID-19 ಪ್ರಕರಣಗಳು ವರದಿಯಾಗುವ ಮೂಲಕ ಕಳೆದ 24 ಗಂಟೆಗಳಲ್ಲಿ ಹೊಸ ಸೋಂಕುಗಳಲ್ಲಿ ಶೇ 30 ರಷ್ಟು ಹೆಚ್ಚಳವಾಗಿದೆ ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 20,20,173 ಕ್ಕೆ ತಲುಪಿದೆ.
ಶುಕ್ರವಾರ ಮಹಾರಾಷ್ಟ್ರದಲ್ಲಿ 1,134 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, 3 ಸಾವುಗಳು ವರದಿಯಾಗಿವೆ. ಹೊಸ ಪ್ರಕರಣಗಳ ಪೈಕಿ 763 ಮುಂಬೈನಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೊರೊನಾ ಸೋಂಕು ತಗುಲಿದೆ. ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಗುರುವಾರ ಈ ಮಾಹಿತಿ ನೀಡಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಸ್ವಲ್ಪ ಜ್ವರವಿದ್ದು, ಕೊರೊನಾ ಲಕ್ಷಣಗಳಿವೆ ಎಂದು ಹೇಳಿದ್ದಾರೆ. ಅವರು ತಮ್ಮನ್ನು ತಾವೇ ಪ್ರತ್ಯೇಕವಾಗಿರಿಸಿಕೊಂಡಿದ್ದಾರೆ.
Omicron sub-variant BA.4 and BA.5: ಒಮಿಕ್ರಾನ್ನ ಉಪ-ವೇರಿಯಂಟ್ ಬಿಎ.4 ಮತ್ತು ಬಿಎ.5 ಗೆ ಸಂಬಂಧಿಸಿದಂತೆ, ಸೋಂಕನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಅದರ ಪ್ರಕರಣಗಳು ಹೆಚ್ಚಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
Explainer On Monkeypox - ಯುರೋಪಿನಲ್ಲಿ ಮಂಕಿಪಾಕ್ಸ್ ಅಂದರೆ ಮಂಗನ ಕಾಯಿಲೆಯ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಡ್ವೈಸರಿ ಕೂಡ ಜಾರಿಗೊಳಿಸಿದೆ. ಹಾಗಾದರೆ, ಏನಿದು ಮಂಕಿಪಾಕ್ಸ್ ಕಾಯಿಲೆ? ನಿಜಕ್ಕೂ ಇದು ಕೊವಿಡ್ -19 ಗಿಂತ ಅಪಾಯಕಾರಿಯಾಗಿದೆಯಾ? ಇದಕ್ಕೆ ಲಸಿಕೆ ಅಥವಾ ಚಿಕಿತ್ಸೆಯೇ ಇಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಈ Zee Kannada Explainer,
Covid Spring Booster Dose: ಬ್ರಿಟನ್ನಲ್ಲಿ ನಡೆಸಿದ ಅಧ್ಯಯನದಲ್ಲಿ, ಕರೋನಾ ಲಸಿಕೆಯ ನಾಲ್ಕನೇ ಡೋಸ್ ಮೂರನೇ ಡೋಸ್ಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಕೋವಿಡ್-19 ಲಸಿಕೆಯ ನಾಲ್ಕನೇ ಡೋಸ್ ಅನ್ನು 'ಸ್ಪ್ರಿಂಗ್ ಬೂಸ್ಟರ್' ಆಗಿ ನೀಡಲಾಗುತ್ತಿದೆ.
ಕೋವಿಡ್ ಕಾಯಿಲೆಯಿಂದ ಸತ್ತವರ ಸಂಖ್ಯೆಯನ್ನು ಬಚ್ಚಿಟ್ಟಿರುವ ಕೇಂದ್ರ ಬಿಜೆಪಿ ಸರ್ಕಾರದ ಸುಳ್ಳುಗಳ ಸರಮಾಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಯಲುಗೊಳಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.