Covid-19 Vaccine: ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ, ರಾಜ್ಯಗಳು ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಐಪಿಸಿಯ ನಿಬಂಧನೆಗಳ ಪ್ರಕಾರ, ಕರೋನಾ ವ್ಯಾಕ್ಸಿನೇಷನ್ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿರುವ ಜನರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಲಾಗಿದೆ.
Serum Institute of India news: ಕೋವಿಶೀಲ್ಡ್ ಲಸಿಕೆ ತಯಾರಿಸುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಹೊಸ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಎಷ್ಟು ಭೀಕರವಾಗಿದೆಯೆಂದರೆ, ಕಟ್ಟಡದ ಮೇಲೆ ಕಪ್ಪು ಹೊಗೆಯನ್ನು ಸ್ಪಷ್ಟವಾಗಿ ಕಾಣಬಹುದು. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಸ್ತುತ ಅಗ್ನಿಶಾಮಕ ಇಲಾಖೆಯ 4 ವಾಹನಗಳು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿವೆ.
ಜಗತ್ತಿನಾದ್ಯಂತ ಜನರಿಗೆ ಆತ್ಮವಿಶ್ವಾಸ ತುಂಬಲು ಜನ ನಾಯಕರಾದವರು ಕೊರೋನಾ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ಪಲಾಯನ ಗೈದಿದ್ದರು. ಇದರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮೋದಿ ಎರಡನೇ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಹಳೆಯ ವಿಷಯವನ್ನು ಕೆದಕುತ್ತ ದೇಶದ ಏಕತೆಗೆ ಧಕ್ಕೆ ತರುವಂಥ ಕೆಲಸವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಇದು ಅನಪೇಕ್ಷಿತ-ಅನಗತ್ಯ. ಕರ್ನಾಟಕ ಇಂಥ ಹೇಳಿಕೆಗಳಿಗೆ, ಬೆದರಿಕೆಗಳಿಗೆ ಬಗ್ಗುವ-ಹೆದರುವ ರಾಜ್ಯವಲ್ಲ. ನಮ್ಮ ಸಹಿಷ್ಣುತೆ, ಶಾಂತಿಪ್ರಿಯತೆಯನ್ನೇ ದೌರ್ಬಲ್ಯ ಎಂದು ಎಣಿಸಬಾರದು- ಅಶ್ವಥ್ ನಾರಾಯಣ
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಜಾಧವ್ ಅವರ ಪ್ರಕಾರ ಕೋವಿಶೀಲ್ಡ್ ಹೊರತುಪಡಿಸಿ ಕರೋನವೈರಸ್ ವಿರುದ್ಧ ಇನ್ನೂ ನಾಲ್ಕು ಲಸಿಕೆಗಳ ಕೆಲಸವು ಪ್ರಗತಿಯಲ್ಲಿದೆ.
ರಷ್ಯಾ ದೇಶ ಲಸಿಕೆ ಪಡೆದವರು ಆಲ್ಕೋಹಾಲ್ ಸೇವನೆ ಮಾಡಬಾರದು ಎಂದು ಕಟ್ಟಪ್ಪಣೆ ವಿಧಿಸಿದೆ. ಅಮೆರಿಕಾದಲ್ಲಿ ಇಂಥ ಯಾವುದೇ ನಿರ್ಬಂಧ ಇಲ್ಲ. ಆಲ್ಕೋಹಾಲ್ ಸೇವನೆಯಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ- ಡಾ. ಸುದರ್ಶನ್ ಬಲ್ಲಾಳ್
ಭಾರತದ ಜನಸಂಖ್ಯೆ 136 ಕೋಟಿ ಮೀರಿದೆ. ದೇಶದಲ್ಲೇ ಲಸಿಕೆಯ ಅಭಾವ ಇದೆ. ಆದರೂ ವಿದೇಶಗಳಿಗೆ ಕೋವಿಡ್ ಲಸಿಕೆಗಳನ್ನು ನೀಡುವ ಜರೂರತ್ತು ಏನಿದೆ ಎಂಬ ಪ್ರಶ್ನೆಯ ನಡುವೆಯೂ ಗುಡವಿಲ್ ಗೆಸ್ಚರ್ ದೃಷ್ಟಿಯಿಂದ ವಿದೇಶಗಳಿಗೆ ವ್ಯಾಕ್ಸಿನ್ ನೀಡಲು ನಿರ್ಧರಿಸಿದೆ ಎಂದು ಗೊತ್ತಾಗಿದೆ.
ಜನವರಿ 16 ಶನಿವಾರದಿಂದ ಕರೋನಾ ಸೋಂಕಿನ ಅಪಾಯದಿಂದ ಜನರನ್ನು ರಕ್ಷಿಸಲು, ದೇಶಾದ್ಯಂತ ವ್ಯಾಕ್ಸಿನೇಷನ್ ಅಭಿಯಾನವನ್ನು (Coronavirus Vaccination Programme) ಪ್ರಾರಂಭಿಸಲಾಗಿದೆ. ನೈರ್ಮಲ್ಯ ಕಾರ್ಮಿಕರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮೊದಲ ದಿನ ಲಸಿಕೆ ಪ್ರಮಾಣವನ್ನು ನೀಡಲಾಯಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ 10.30ಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ದೇಶವ್ಯಾಪಿ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ದೇಶಾದ್ಯಂತ ಒಟ್ಟು 3,006 ಲಸಿಕಾ ವಿತರಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಕೇಂದ್ರಗಳ ಜೊತೆ ಆನ್‌ಲೈನ್ ಮೂಲಕ ಸಂಪರ್ಕಿಸುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ.
ಪುಣೆಯ ಮಂಜರಿಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆವರಣದಿಂದ 15 ಕಿ.ಮೀ ದೂರದಲ್ಲಿರುವ ಪುಣೆ ವಿಮಾನ ನಿಲ್ದಾಣ ತಲುಪಿ, ಅಲ್ಲಿಂದ ದೆಹಲಿ, ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು, ಕರ್ನಾಲ್, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಕ್ನೋ, ಚಂಡೀಗಢ ಮತ್ತು ಭುವನೇಶ್ವರಕ್ಕೆ ಹೊರಟಿವೆ. ಒಟ್ಟು 8 ವಾಣಿಜ್ಯ ವಿಮಾನಗಳಲ್ಲಿ ಲಸಿಕೆಗಳನ್ನು ಪುಣೆಯಿಂದ ಸಾಗಿಸಲಾಗಿದೆ.
ಲೋಕಲ್ ಸರ್ಕಲ್ಸ್ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನೀಡುವ ಬಗ್ಗೆ ಭಾರತದಲ್ಲಿ ಕೋವಿಡ್ -19 ಪ್ರಯೋಗಗಳನ್ನು ನಡೆಸಲು ಕೇಂದ್ರ ಸರ್ಕಾರವು ಫಿಜರ್ ಮತ್ತು ಮಾಡ್ರೆನಾ ಕಂಪನಿಗಳಿಗೂ ಅವಕಾಶ ನೀಡುವ ಬಗ್ಗೆಯೂ ಸಮೀಕ್ಷೆಯಲ್ಲಿ ನಡೆಸಿದೆ. ಈ ಸಮೀಕ್ಷೆಗಳಲ್ಲೂ ಆಶ್ಚರ್ಯಕರವಾದ ಅಭಿಪ್ರಾಯಗಳೇ ಲಭ್ಯವಾಗಿವೆ.
ಕೊರೋನಾ ಲಸಿಕೆಗಳಲ್ಲಿ ಹಂದಿ ಮಾಂಸದ ಅಂಶವಿದೆ. ಹಂದಿ ಮಾಂಸ ಸೇವನೆ ಧರ್ಮ ನಿಷಿದ್ಧವಾಗಿರುವ ಕಾರಣ ಮುಸ್ಲಿಮರು ಲಸಿಕೆ ಪಡೆಯಬಾರದು ಎಂಬ ವದಂತಿ ಎದ್ದಿದೆ. ಈ ಹಿನ್ನಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಜಮಾತ್-ಎ-ಇಸ್ಲಾಂ-ಹಿಂದ್, 'ಇದು ಆಧಾರರಹಿತ ಸುದ್ದಿ' ಎಂದು ಹೇಳಿದೆ.
ಕೊರೋನಾ ವ್ಯಾಕ್ಸಿನೇಷನ್ ಪ್ರಕ್ರಿಯೆಯು ಜನವರಿ 13 ರಿಂದ ಇಡೀ ದೇಶದಲ್ಲಿ ಪ್ರಾರಂಭವಾಗಬಹುದು ಎಂಬ ಬಗ್ಗೆ ಆರೋಗ್ಯ ಸಚಿವಾಲಯ ಸುಳಿವು ನೀಡಿದೆ. ಈ ಹಿನ್ನಲೆಯಲ್ಲಿ ಲಸಿಕೆ ಸಾಮಾನ್ಯ ಜನರಿಗೆ ಹೇಗೆ ತಲುಪುತ್ತದೆ ಎಂಬ ಪ್ರಶ್ನೆಗಳಿವೆ. ಈ ಪ್ರಕ್ರಿಯೆಯ ಬಗೆಗಿನ ಮಾಹಿತಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಯುಕೆ ಆರೋಗ್ಯ ಇಲಾಖೆಯ ಮಾರ್ಗಸೂಚಿಯ ಪ್ರಕಾರ ಒಬ್ಬ ವ್ಯಕ್ತಿಯು ಮೊದಲಿಗೆ ಒಂದು ಕಂಪನಿಯ ಕರೋನಾ ಲಸಿಕೆ ಡೋಸ್ ತೆಗೆದುಕೊಂಡಿದ್ದು, ಎರಡನೇ ಡೋಸ್ ತೆಗೆದುಕೊಳ್ಳುವ ಹೊತ್ತಿಗೆ ಅದೇ ಕಂಪನಿಯ ಲಸಿಕೆ ಇಲ್ಲದಿದ್ದರೆ ಅಂದರೆ ಸ್ಟಾಕ್ ಇಲ್ಲದಿದ್ದರೆ ಆ ವ್ಯಕ್ತಿಗೆ ಮತ್ತೊಂದು ಕಂಪನಿಯ ಲಸಿಕೆ ಹಾಕಬೇಕು. ಇದಕ್ಕೆ ಮಿಕ್ಸ್ ಮತ್ತು ಮ್ಯಾಚ್ ವ್ಯಾಕ್ಸಿನೇಷನ್ (Mix and Match Vaccination) ಎಂದು ಹೆಸರಿಸಲಾಗಿದೆ.
Corona Vaccine - ಆರೋಗ್ಯ ಕಾರ್ಯಕರ್ತರಲ್ಲದ ದೇಶದ ನಾಗರಿಕರು ಕೋವಿನ್ ಅಪ್ಲಿಕೇಶನ್‌ನಲ್ಲಿ ಲಸಿಕೆಗಾಗಿ ಸ್ವಯಂ ನೋಂದಾಯಿಸಿಕೊಳ್ಳಬಹುದು, ಇದಕ್ಕಾಗಿ ಅವರು ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಇಂದು ದೇಶಾದ್ಯಂತ ನಡೆಯುತ್ತಿರುವ 'ಕೋವಿಡ್ ಡ್ರೈ ರನ್' ವೀಕ್ಷಣೆ ಮಾಡಲು ದೆಹಲಿಯ ಜಿಟಿಬಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಡ್ರೈ ರನ್ ಗೆ ಸಂಬಂಧಿಸಿದಂತೆ ಆರೋಗ್ಯ ಕಾರ್ಯಕರ್ತರಿಗೆ ದೇಶದಲ್ಲಿ ಸಂಪೂರ್ಣ ತರಬೇತಿ ನೀಡಲಾಗಿದೆ. ನಾವು ವಿಶೇಷ ತಂಡವನ್ನು ಸಹ ರಚಿಸಿದ್ದೇವೆ, ಅದು ಸಂಪೂರ್ಣ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಈ ಡ್ರೈ ರನ್ ನಲ್ಲಿ ಲಸಿಕೆ ನೀಡಲಾಗುವುದಿಲ್ಲ, ಜನರ ಡೇಟಾವನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಹೇಳಿದರು.
ಜನವರಿ 2 ರ ಶನಿವಾರದಂದು ಎಲ್ಲಾ ರಾಜ್ಯಗಳಲ್ಲಿ ಕೋವಿಡ್ ಲಸಿಕೆಗಾಗಿ ಡ್ರೈ ರನ್ ನಡೆಯಲಿದೆ ಎಂದು ಮೂಲಗಳು ಇಂದು ತಿಳಿಸಿವೆ. ಈಗ ಲಸಿಕೆಗಾಗಿ ಅನುಮೋದನೆ ಮೂಲೆಗೆ ಸಿಗಬಹುದು ಎಂದು ಅಧಿಕಾರಿಗಳು ಸುಳಿವು ನೀಡಿದ್ದಾರೆ.
ಈಗಾಗಲೇ ಡಿಸೆಂಬರ್ 28 ಮತ್ತು 29ರಂದು ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್ ಮತ್ತು ಪಂಜಾಬ್‌ನ ಎರಡು ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಲಾಗಿತ್ತು. ಅವು ಯಶಸ್ವಿಯಾದ ಹಿನ್ನಲೆಯಲ್ಲಿ ದೇಶಾದ್ಯಂತ ಪ್ರಾಯೋಗಿಕ ಡ್ರೈ ರನ್ ನಡೆಸಲು ನಿರ್ಧರಿಸಲಾಗಿದೆ.