Corona Vaccine - ಆರೋಗ್ಯ ಕಾರ್ಯಕರ್ತರಲ್ಲದ ದೇಶದ ನಾಗರಿಕರು ಕೋವಿನ್ ಅಪ್ಲಿಕೇಶನ್‌ನಲ್ಲಿ ಲಸಿಕೆಗಾಗಿ ಸ್ವಯಂ ನೋಂದಾಯಿಸಿಕೊಳ್ಳಬಹುದು, ಇದಕ್ಕಾಗಿ ಅವರು ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಇಂದು ದೇಶಾದ್ಯಂತ ನಡೆಯುತ್ತಿರುವ 'ಕೋವಿಡ್ ಡ್ರೈ ರನ್' ವೀಕ್ಷಣೆ ಮಾಡಲು ದೆಹಲಿಯ ಜಿಟಿಬಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಡ್ರೈ ರನ್ ಗೆ ಸಂಬಂಧಿಸಿದಂತೆ ಆರೋಗ್ಯ ಕಾರ್ಯಕರ್ತರಿಗೆ ದೇಶದಲ್ಲಿ ಸಂಪೂರ್ಣ ತರಬೇತಿ ನೀಡಲಾಗಿದೆ. ನಾವು ವಿಶೇಷ ತಂಡವನ್ನು ಸಹ ರಚಿಸಿದ್ದೇವೆ, ಅದು ಸಂಪೂರ್ಣ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಈ ಡ್ರೈ ರನ್ ನಲ್ಲಿ ಲಸಿಕೆ ನೀಡಲಾಗುವುದಿಲ್ಲ, ಜನರ ಡೇಟಾವನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಹೇಳಿದರು.
ಜನವರಿ 2 ರ ಶನಿವಾರದಂದು ಎಲ್ಲಾ ರಾಜ್ಯಗಳಲ್ಲಿ ಕೋವಿಡ್ ಲಸಿಕೆಗಾಗಿ ಡ್ರೈ ರನ್ ನಡೆಯಲಿದೆ ಎಂದು ಮೂಲಗಳು ಇಂದು ತಿಳಿಸಿವೆ. ಈಗ ಲಸಿಕೆಗಾಗಿ ಅನುಮೋದನೆ ಮೂಲೆಗೆ ಸಿಗಬಹುದು ಎಂದು ಅಧಿಕಾರಿಗಳು ಸುಳಿವು ನೀಡಿದ್ದಾರೆ.
ಈಗಾಗಲೇ ಡಿಸೆಂಬರ್ 28 ಮತ್ತು 29ರಂದು ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್ ಮತ್ತು ಪಂಜಾಬ್‌ನ ಎರಡು ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಲಾಗಿತ್ತು. ಅವು ಯಶಸ್ವಿಯಾದ ಹಿನ್ನಲೆಯಲ್ಲಿ ದೇಶಾದ್ಯಂತ ಪ್ರಾಯೋಗಿಕ ಡ್ರೈ ರನ್ ನಡೆಸಲು ನಿರ್ಧರಿಸಲಾಗಿದೆ.
ಲಸಿಕೆ ವಿತರಣಾ ವ್ಯವಸ್ಥೆಯ ಎಲ್ಲವನ್ನೂ 'ಕೋ-ವಿನ್' ಆನ್‌ಲೈನ್ ಆ್ಯಪ್ (Co-WIN Online App) ಮೂಲಕವೇ ನಿರ್ವಹಣೆ ಮಾಡಲಾಗುವುದರಿಂದ ನಿಯೋಜಿತಗೊಂಡಿರುವ ಸಿಬ್ಬಂದಿಯ ಜೊತೆಗೆ 'ಕೋ-ವಿನ್' ಆನ್‌ಲೈನ್ ಆ್ಯಪ್ ಕಾರ್ಯಕ್ಷಮತೆಯನ್ನೂ ಸಹ ಪರಿಶೀಲನೆ ಒಳಪಡಿಸಲಾಗುವುದು.
Covaxin trail results: ಕೋವಾಕ್ಸಿನ್ ಸಂಪೂರ್ಣವಾಗಿ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಇದರಲ್ಲಿ ರೋಗನಿರೋಧಕ ಪ್ರೊಫೈಲ್ ಅಭಿವೃದ್ಧಿ ಹೊಂದುತ್ತಿದೆ ಎಂದು ಐಸಿಎಂಆರ್ ತಿಳಿಸಿದೆ.
Covid-19 Vaccination Program: ಕೊವಿಡ್-19 ಲಸಿಕೆ ಹಾಕಿಸಿಕೊಳ್ಳುವುದು ಸ್ವಯಂಪ್ರೇರಣೆಯಿಂದ ಮಾತ್ರ ಎಂದು ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ಹೇಳಿದೆ. ಆದರೆ, ಇದೆ ವೇಳೆ ಯಾವುದೇ ಓರ್ವ ವ್ಯಕ್ತಿ ಸೋಂಕಿನಿಂದ ಪಾರಾಗಲು ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ ಎಂಬ ಸಲಹೆಯನ್ನು ಕೂಡ ಸಚಿವಾಲಯ ನೀಡಿದೆ. ಇದರ ಜೊತೆಗೆ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೂಲಕ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದೂ ಕೂಡ ಸಚಿವಾಲಯ ಹೇಳಿದೆ.
ಡಿಸೆಂಬರ್ 5 ರಂದು ಕರೋನಾವೈರಸ್ ಸೋಂಕಿಗೆ ತುತ್ತಾದ ನಂತರ ಹರಿಯಾಣದ ಆರೋಗ್ಯ ಸಚಿವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಬಳಿಕ ಅವರನ್ನು PGIMS ರೋಹ್ಟಕ್ಗೆ ದಾಖಲಿಸಲಾಯಿತು.
375 ಜನರ ಪೈಕಿ ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಂಡ ಬಳಿಕ ಕೆಲವರು ಇಂಜೆಕ್ಷನ್ ತೆಗೆದುಕೊಂಡ ಜಾಗದಲ್ಲಿ ಸ್ವಲ್ಪ ನೋವು ಉಂಟಾಯಿತು. ಸ್ವಲ್ಪ ಸಮಯದ ನಂತರ ಗುಣವಾಯಿತು. ಲಸಿಕೆಯನ್ನು 2 ರಿಂದ 8 ° Cಗೆ ಸಂಗ್ರಹಿಸಲಾಗಿದೆ ಮತ್ತು ಲಸಿಕೆಯ ಗುಣಮಟ್ಟ ಹಾಗೇ ಉಳಿದಿದೆ.
Mucormycosis: ಕರೋನಾದಿಂದ Covid-19) ಚೇತರಿಸಿಕೊಳ್ಳುವ ರೋಗಿಗಳು ಈಗ ಹೊಸ ಮಾರಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಈ ರೋಗವು ಜನರ ಕಣ್ಣಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮ್ಯೂಕರ್ಮೈಕೊಸಿಸ್ (Mucormycosis) ಹೆಸರಿನ ಈ ರೋಗದಿಂದ ರೋಗಿಗಳ ಸಾವು ಸಂಭವಿಸುವ ಸಾಧ್ಯತೆ ಶೇ.50ರಷ್ಟಿರುತ್ತದೆ.
ಕೆಲ ದಿನಗಳ ಹಿಂದೆಯಷ್ಟೇ ತನ್ನ ದೇಶದ ನಾಗರಿಕರಿಗೆ Sputnik V ಲಸಿಕೆಯನ್ನು ನೀಡಿರುವ ರಷ್ಯಾ ಸರ್ಕಾರ ನಂತರ ಮದ್ಯ ಸೇವಿಸದಂತೆ ಎಚ್ಚರಿಕೆ ನೀಡಿದೆ. ವ್ಯಾಕ್ಸಿನ್ ಶಾಟ್ ನೀಡಿದ ಬಳಿಕ ಮದ್ಯಪಾನದಿಂದ ದೂರವಿರಲು ಸರ್ಕಾರ ಏಕೆ ಹೇಳುತ್ತಿದೆ? ಅದರ ಹಿಂದಿನ ಕಾರಣವಾದರೂ ಎಂದು ತಿಳಿಯೋಣ ಬನ್ನಿ
ಈ ಲಸಿಕೆಯನ್ನು ದೇಶದ ಜನರಿಗೆ ತಲುಪಿಸಲು ಲಸಿಕೆಯ ಬೆಲೆಯನ್ನು (ಕರೋನಾ ಲಸಿಕೆ ಬೆಲೆ) ನಿರ್ಧರಿಸಲು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಕೇಂದ್ರ ಸರ್ಕಾರದ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು.
ಮಾರ್ಗರೇಟ್ ಕೀನನ್ ಮಂಗಳವಾರ ಬೆಳಿಗ್ಗೆ 06:31 ಕ್ಕೆ ಮಧ್ಯ ಇಂಗ್ಲೆಂಡ್‌ನ ಕೊವೆಂಟ್ರಿಯಲ್ಲಿರುವ ತನ್ನ ಸ್ಥಳೀಯ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆದರು. ಅವರು 91 ನೇ ವರ್ಷಕ್ಕೆ ಕಾಲಿಡುವ ಒಂದು ವಾರ ಮೊದಲು ಲಸಿಕೆ ಪಡೆದಿದ್ದು ತಮ್ಮ ಹುಟ್ಟು ಹಬ್ಬಕ್ಕೆ ಇದೊಂದು ಅತ್ಯುತ್ತಮ ಉಡುಗೊರೆ ಎಂದು ಬಣ್ಣಿಸಿದ್ದಾರೆ.
ಸೀರಮ್-ಆಕ್ಸ್‌ಫರ್ಡ್ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆ ಕೋವಿಶೀಲ್ಡ್ ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು ಪ್ರಯೋಗಕ್ಕೂ ಒಳಪಟ್ಟಿದೆ. ಇದಕ್ಕೂ ಮೊದಲು ಅಮೆರಿಕದ ಕಂಪನಿ ಫಿಜರ್ ಭಾರತದಲ್ಲಿ ಕರೋನಾ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದೆ.
ಕೋವಿಡ್–19 ಲಸಿಕೆ ಖರೀದಿಸಿರುವ ರಾಷ್ಟ್ರ ಕೋವಿಡ್ - 19 ಹುಟ್ಟಿದ ಚೀನಾ ಅಲ್ಲ, ಮೊದಲು ಕೊರೋನಾದಿಂದ ತತ್ತರಿಸಿಹೋಗಿದ್ದ ಇಟಲಿಯೂ ಅಲ್ಲ, ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕಾವೂ ಅಲ್ಲ. ಅದು ಭಾರತ!