ಕರ್ನಾಟಕ ಮತ್ತು ಕನ್ನಡಿಗರಿಗೆ ತಾರತಮ್ಯವಾಗುತ್ತಿರುವುದು, ಗುಜರಾತ್ ಮೇಲೆ ಅತಿಯಾದ ಪ್ರೀತಿ ತೋರುತ್ತಿರುವುದು ಕೇಂದ್ರದ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳಿಂದಲೇ ಬಹಿರಂಗವಾಗಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಕೇಂದ್ರದಿಂದ ಆಗುತ್ತಿರುವ ಈ ತಾರತಮ್ಯ ಮನುಷ್ಯತ್ವ ವಿರೋಧಿ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಟಿವಿಯಲ್ಲಿ ಕಾಣಿಸಿಕೊಂಡು ವೀರಾವೇಶದಿಂದ 18ರಿಂದ 45 ವಯಸ್ಸಿನವರಿಗೆ ಮೇ ಒಂದರಿಂದ ಲಸಿಕೆ ಹಾಕುವುದಾಗಿ ಘೋಷಿಸಿದರು. ಆದರೀಗ ರಾಜ್ಯದ ಬಿಜೆಪಿ ಸರ್ಕಾರ ಲಸಿಕೆ ಹಾಕಯವ ಕೆಲಸವನ್ನು ಮುಂದೂಡಿದೆ. ಮಾತಿನ ಶೂರ ಮೋದಿ ಈಗ ಎಲ್ಲಿದ್ದಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕರೋನಾ ವಿರುದ್ಧ ಮಹಾ ಲಸಿಕಾ ಅಭಿಯಾನ ನಡೆಯುತ್ತಿದೆ. ಮೇ 1 ರಿಂದ ಈ ಅಭಿಯಾನ ಆರಂಭವಾಗಲಿದೆ. ಈ ನಡುವೆಯೂ, ಕೆಲವರು ವ್ಯಾಕ್ಸಿನ್ ನಲ್ಲಿ ಸೈಡ್ ಅಫೆಕ್ಟ್ ಇರುತ್ತವೆ ಎಂದು ಗಾಬರಿಯಾಗಿದ್ದಾರೆ.
ಭಾರತದಲ್ಲಿ ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಮಾರೋಪಾದಿಯಲ್ಲಿ ಪ್ರಯತ್ನಗಳು ಮುಂದುವರೆದಿದೆ. ಈ ಸರಣಿಯಲ್ಲಿ, ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕರೋನಾ ಲಸಿಕೆ ಪಡೆಯಬಹುದು ಎಂದು ಸರ್ಕಾರ ಘೋಷಿಸಿದೆ, ಇದಕ್ಕಾಗಿ ಬುಧವಾರದಿಂದ ನೋಂದಣಿ ಪ್ರಾರಂಭವಾಯಿತು.
ಮೇ 1 ರಿಂದ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ಅಭಿಯಾನ ಮೇ 1 ರಿಂದ ಆರಂಭವಾಗಲಿದೆ. ಆದರೆ ಈ ಮಧ್ಯೆ 4 ರಾಜ್ಯಗಳಲ್ಲಿ ಮೇ 1 ರಿಂದ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಕರೋನಾ ಹರಡುವ ರೀತಿ ನೋಡಿದರೆ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ಹೋದರೆ ಉಳಿಗಾಲ ಇಲ್ಲ ಎನ್ನುವಂತೆಯೇ ತೋರುತ್ತದೆ. ಹಾಗಾಗಿ, ಲಸಿಕೆ ಹಾಕಲು ಹೆದರುವವರು ಕೂಡಾ ಲಸಿಕೆ ಹಾಕಿಸಿಕೊಳ್ಳಲು ಧಾವಿಸುತ್ತಿದ್ದಾರೆ. ಆದರೆ, ಸರ್ಕಾರ ಹಾಗೆಲ್ಲಾ ಲಸಿಕೆ ಹಾಕುವುದಿಲ್ಲ.
Google Map ಮೂಲಕ ನಿಮ್ಮ ಸುತ್ತ ಕರೋನಾ ವ್ಯಾಕ್ಸಿನೇಷನ್ ಎಲ್ಲಿ ನಡೆಯುತ್ತಿದೆ ಎಂಬುದರ ಕುರಿತು ನಿಖರ ಮಾಹಿತಿ ಪಡೆಯಬಹುದು. ಗೂಗಲ್ ಮ್ಯಾಪ್ ನಲ್ಲಿ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಸರ್ಚ್ ಮಾಡಿದರೆ, ಹತ್ತಿರದ ಎಲ್ಲಾ ಕೇಂದ್ರಗಳ ಮಾಹಿತಿ ನಿಮ್ಮ ಸ್ಕ್ರೀನ್ ನಲ್ಲಿ ಕಾಣಿಸಿತ್ತದೆ.
ಬೆಂಬಿಡದೆ ಕಾಡುತ್ತಿರುವ ಕರೋನಾವೈರಸ್ ಎಂಬ ಮಹಾಮಾರಿಯನ್ನು ನಿರ್ಮೂಲನೆ ಮಾಡಲು ದೇಶಾದ್ಯಂತ ಈಗಾಗಲೇ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು ಇದುವರೆಗೆ ಕೊರೊನಾ ವಾರಿಯರ್ಸ್, 60 ವರ್ಷ ಮೇಲ್ಪಟ್ಟವರು ಹಾಗೂ ಅನಾರೋಗ್ಯಪೀಡಿತರಿಗೆ ಲಸಿಕೆ ನೀಡಲಾಗಿತ್ತು.
ಭಾರತದಲ್ಲಿ ಕರೋನಾ ವ್ಯಾಕ್ಸಿನೇಷನ್ ಎರಡನೇ ಹಂತವು (2nd Phase of Corona Vaccination) ಪ್ರಾರಂಭವಾಗಲಿದೆ. ಈಗ 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಕರೋನಾ ಲಸಿಕೆ ನೀಡಲಾಗುವುದು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಸೌಲಭ್ಯ ಲಭ್ಯವಿರುತ್ತದೆ. ನಿಮ್ಮ ಹತ್ತಿರದ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಬಹುದು.
ಕೋವಿಡ್ -19 ನ ಮಧ್ಯಮದಿಂದ ತೀವ್ರವಾದ ಸೋಂಕುಗಳನ್ನು ತಡೆಗಟ್ಟಲು ಲಸಿಕೆ ಸುಮಾರು 66 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಎಫ್ಡಿಎ ವಿಜ್ಞಾನಿಗಳು ದೃಢಪಡಿಸಿದ್ದಾರೆ. ಈ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗೆ (Johnson & Johnson vaccine) ಎರಡರ ಬದಲು ಕೇವಲ ಒಂದು ಡೋಸ್ ಮಾತ್ರ ಬೇಕಾಗುತ್ತದೆ ಮತ್ತು ಅದನ್ನು ಬಳಸುವುದು ಸುರಕ್ಷಿತ ಎಂದು ಎಫ್ಡಿಎ ಹೇಳಿದೆ.
Covid-19 Vaccine: ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ, ರಾಜ್ಯಗಳು ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಐಪಿಸಿಯ ನಿಬಂಧನೆಗಳ ಪ್ರಕಾರ, ಕರೋನಾ ವ್ಯಾಕ್ಸಿನೇಷನ್ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿರುವ ಜನರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.