ಕೋಲಾರ ಕುರುಕ್ಷೇತ್ರ
ಚಿನ್ನದ ನಾಡು ಕೋಲಾರಿನಲ್ಲಿ ಆರು ಕ್ಷೇತ್ರಗಳಿದ್ದು, ಅದರಲ್ಲಿ ಶ್ರೀನಿವಾಸಪುರ,ಮುಳಬಾಗಿಲು ಮತ್ತು ಕೋಲಾರ ಹೈವೋಲ್ಟ್ ಕ್ಷೇತ್ರಗಳಾಗಿದ್ದರೆ, ಕೆಜಿಎಫ್ ಮಾಲೂರು ಮತ್ತು ಬಂಗಾರ ಪೇಟೆ ಕ್ಷೇತ್ರಗಳೂ ಕೂಡ ಸಾಕಷ್ಟು ಕುತೂಹಲ ಕೆರಳಿಸಿವೆ. ಅದರಲ್ಲಿ ಬಂಗಾರಪೇಟೆಯ SC ಮೀಸಲು ಕ್ಷೇತ್ರದಲ್ಲಿ ಸ್ಪೃಶ್ಯರದ್ದೇ ಮೇಲುಗೈ ಇದ್ದರೆ, ಮುಸ್ಲಿಂ ಬಾಹುಳ್ಯದ ಕೋಲಾರ ಕ್ಷೇತ್ರದಲ್ಲಿ ಯಾವುದೇ ಮುಸ್ಲಿಂ ಪ್ರಾತಿನಿಧ್ಯ ಇಲ್ಲ,ಇನ್ನೂ ಮಾಲೂರು ಕ್ಷೇತ್ರದಲ್ಲಿ ನಾಲ್ವರಲ್ಲಿ ಯಾರು ಗೆಲ್ಲಬಹುದು ಎಂದು ಹೇಳುವುದು ಈಗಲೇ ಕಷ್ಟ ಸಾಧ್ಯ ಇನ್ನೂ ಶ್ರೀನಿವಾಸಪುರದಲ್ಲಿ ರೆಡ್ಡಿ v/s ಸ್ವಾಮಿ ಕದನವಂತೂ ಚುನಾವಣೆಯನ್ನು ಕಾವೇರುವಂತೆ ಮಾಡಿದೆ.
ಕೋಲಾರ ಜಿಲ್ಲಾ ಕುರುಕ್ಷೇತ್ರ
ನಮ್ಮ ಸರ್ಕಾರ ದುಡಿಯುವ ವರ್ಗದ ಎಲ್ಲ ಸಮುದಾಯಗಳಿಗೆ ವಿದ್ಯಾನಿಧಿ ಕೊಡುತ್ತಿದ್ದೇದೆ. ಸ್ತ್ರೀ ಸಾಮರ್ಥ್ಯ ಯೋಜನೆ, ಯುವ ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 54 ಲಕ್ಷ ರೈತರಿಗೆ ವಿಮೆ ಯೋಜನೆಗಾಗಿ 180 ಕೋಟಿ ರೂ ಹಣ ಮೀಸಲಿಟ್ಟಿದ್ದೇನೆ. ಅಷ್ಟೆ ಅಲ್ಲದೆ, ಶಿಗ್ಗಾಂವ್ನಲ್ಲಿ ಟೆಕ್ಸ್ ಟೈಲ್ ಪಾರ್ಕ್ ಮೂಲಕ 10 ಸಾವಿರ ಯುವಕರಿಗೆ ಕೆಲಸ ಸಿಗುತ್ತದೆ. ಇದರ ಜೊತೆ ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇವರ ಯೋಗ್ಯತೆಗೆ ಅಯೋಧ್ಯೆಯಲ್ಲಿ ಮಂದಿರ ಕಟ್ಟಲು ಬಿಟ್ಟಿರಲಿಲ್ಲ. ಕಾಶಿ ಕಾರಿಡಾರ್ ಯೋಜನೆ ಮೋದಿ ಬಂದ ಮೇಲೆ ಆಗಿದ್ದು. ಅವನ್ಯಾರೋ ಆಂಜನೇಯ ಹುಟ್ಟಿದ್ದೇ ಇಲ್ಲಿ ಅಲ್ಲ ಅಂತಾನೆ. ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದವರು, ಇಂದು ಆಂಜನೇಯನನ್ನು ಒಪ್ಪಿಕೊಳ್ಳುತ್ತಾರೆ. ತ್ರೇತಾಯುಗದಲ್ಲಿ ರಾವಣ ಭಜರಂಗಿಯನ್ನು ಕೆಣಕಿದ್ದ, ರಾವಣನ ಸರ್ವ ನಾಶವಾಯ್ತು, ಈಗ ಬಜರಂಗದಳವನ್ನು ಕೆಣಕಿ ಕಾಂಗ್ರೆಸ್ ರಾಜಕೀಯವಾಗಿ ನಾಶವಾಗುತ್ತದೆ ಎಂದು ಶಾಸಕ ಸಿ.ಟಿ. ರವಿ ಗುಡುಗಿದರು.
Karnataka Election 2023 : ಕಾಂಗ್ರೆಸ್ ಮತ್ತು ಜೆಡಿಎಸ್ ಶಾಟ್ ಕರ್ಟ್ ಸರ್ಕಾರ ರಚನೆ ಮಾಡುತ್ತೆ. ಇವರು ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಾರೆ. ಶಾರ್ಟ ಕರ್ಟ್ ರಾಜಕಾರಣಿದಿಂದ ಅಭಿವೃದ್ಧಿ ಆಗಲು ಸಾಧ್ಯ ಇಲ್ಲ ಎಂದು ಕೈ ಮತ್ತು ಜಿಡಿಎಸ್ ಮೈತ್ರಿ ಕುರಿತು ಪಿಎಂ ನರೇಂದ್ರ ಮೋದಿ ಗುಡುಗಿದರು.
Karnataka Election 2023 : ನಾವು ಹನುಮಂತ ಭಕ್ತರು, ನಾವು ಆಂಜನೇಯ ಪ್ರವೃತ್ತಿ ಹೊಂದಿದ್ದೇವೆ. ಹನುಮ ಚಾಲಿಸನ್ನು ನಾವು ದಿನಾ ಪಠಣ ಮಾಡ್ತೀವಿ, ಅವರೊಬ್ಬರೇನಾ ಮಾಡೋದು.? ಎಂದು ಕಮಲಪಾಳಯದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡುಗಿದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸೋದು ಗ್ಯಾರೆಂಟಿಯಾಗಿದೆ. ಜೀ ನ್ಯೂಸ್ ಮತ್ತು ಮ್ಯಾಟ್ರಿಕ್ಸ್ ಸಮೀಕ್ಷೆಯಲ್ಲಿ ಸರಳ ಬಹುಮತದ ಸೂಚನೆ ಸಿಕ್ಕಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಮೋದಿ ಕುರಿತು ಹೇಳಿದ ವಿಷಸರ್ಪ ಮಾತು ಕಾಂಗ್ರೆಸ್ಗೆ ದುಬಾರಿಯಾಗಿದೆ ಅಂತ ಸರ್ವೆ ಹೇಳಿದೆ. ಅಲ್ದೆ ಮುಂದಿನ ಸಿಎಂ ಕೂಡ ಬಸವರಾಜ ಬೊಮ್ಮಾಯಿ ಅನ್ನೋದಿಕೆ ಹೆಚ್ಚಿನ ಅಭಿಮತ ಸಿಕ್ಕಿದೆ.
ಚುನಾವಣೆ ಯಾವಾಗಲೂ ಕೇವಲ ಒಂದೇ ವಿಷಯದ ಮೇಲೆ ಕೇಂದ್ರಿತವಾಗಿರುವುದಿಲ್ಲ, ಇದರಲ್ಲಿ ಹಲವು ಅಂಶಗಳು ಮೇಳೈಸಿರುತ್ತವೆ.ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳು ಕೂಡ ಇವುಗಳ ಲೆಕ್ಕಾಚಾರದ ಮೇಲೆಯೇ ಜನರನ್ನು ತಲುಪುವ ಬಗೆಯನ್ನು ಮತ್ತು ತನ್ನ ಚುನಾವಣಾ ಪ್ರಚಾರದ ವೈಖರಿಯನ್ನು ನಿರ್ಧರಿಸುತ್ತವೆ.