Kora Kannada Movie: ರತ್ನಮ್ಮ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ, ಒರಟ ಶ್ರೀ ನಿರ್ದೇಶನದ ಹಾಗೂ ರಿಯಾಲಿಟಿ ಶೋ ಮೂಲಕ ನಾಡಿನ ಜನರ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಾಯಕನಾಗಿ ನಟಿಸಿರುವ "ಕೋರ" ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.
45 movie teaser: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ “ಸೂರಜ್ ಪ್ರೊಡಕ್ಷನ್ ” ಬ್ಯಾನರ್ ನಲ್ಲಿ ಅದ್ದೂರಿಯಾಗಿ ಅಪಾರವೆಚ್ಚದಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಪ್ಯಾನ್ ಇಂಡಿಯಾ “45” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.
Ranbir Kapoor First Wife: ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಇತ್ತೀಚೆಗೆ ಅನಿಮಲ್ ಸಿನಿಮಾದಲ್ಲಿ ನಟಿಸುವ ಮೂಲಕ ಸುದ್ದಿಯಲ್ಲಿದ್ದರಯ.. ನಟ ಇದೀಗ ವೈಯಕ್ತಿಕ ವಿಚಾರವಾಗಿ ಮುಖ್ಯಾಂಶದಲ್ಲಿದ್ದು.. ಆಲಿಯಾ ಇವರ ಮೊದಲ ಪತ್ನಿ ಅಲ್ಲ ಎಂದು ಹೇಳಲಾಗುತ್ತಿದೆ..
Vamana Movie: ವಾಮನ...ನಟ ಧನ್ವಿರ್ ನಟನೆಯ ಸಿನಿಮಾ. ಮುದ್ದುರಾಕ್ಷಸಿ ಹಾಡು ಬಿಡುಗಡೆಯಾದ ಬಳಿಕ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ್ದ ಸಿನಿಮಾ. ಇದೀಗ ಮೊನ್ನೆಯಷ್ಟೇ ತಾಯಿ ಸೆಂಟಿಮೆಂಟಿರೋ ಹಾಡೊಂದು ರಿಲೀಸ್ ಆಗಿದ್ದು ಭರ್ಜರಿ ಕಿಕ್ ಕೊಟ್ಟಿದೆ.
Soothradhari movie: ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಚಿತ್ರರಂಗದ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ನವರಸನ್ ನಿರ್ಮಾಣದ, ಕಿರಣ್ ಕುಮಾರ್ ಚೊಚ್ಚಲ ನಿರ್ದೇಶನದ ಹಾಗೂ ತಮ್ಮ ಗಾಯನದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ "ಸೂತ್ರಧಾರಿ" ಚಿತ್ರ ಮೇ 9 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
Shabana Azmi: ಬೆಂಗಳೂರಿನಲ್ಲಿ ಆಯೋಜಿಸಿದ್ದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಮೇರು ನಟಿ, ಬಹುಭಾಷಾ ಕಲಾವಿದೆ ಶ್ರೀಮತಿ ಶಬಾನಾ ಆಜ್ಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ನೀಡಿ ಗೌರವಿಸಿದರು. ಪ್ರಶಸ್ತಿ ಮತ್ತು 10 ಲಕ್ಷದ ಚೆಕ್ ನೀಡಲಾಯಿತು.
Ramya Post: ನಟಿ ಮೋಹಕ ತಾರೆ ರಮ್ಯಾ ನಮ್ಮೆಲ್ಲರಿಗೂ ಬಹಳ ಪ್ರೀತಿ ಮತ್ತು ಅಚ್ಚುಮೆಚ್ಚು. ಇಂಡಸ್ಟ್ರಿಗೆ ಸಾಕಷ್ಟು ಹಿಟ್ ಸಿನಿಮಾ ಕೊಟ್ಟಿರೋ ಮೋಹಕ ತಾರೆಗೆ ಅಟಿಟ್ಯೂಡ್ ಅನ್ನೋದು ಪಕ್ಕಕ್ಕೂ ಬಂದಿಲ್ಲ.
Actress Ramya: ಮೋಹಕ ತಾರೆ , ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲ ಕರುನಾಡ ಪ್ರೇಕ್ಷಕ ವಲಯದಲ್ಲಿದೆ. ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಕಂಗೋಳಿಸೋದು ಫೈನಲ್ ಆಗಿತ್ತು ; ಆದ್ರೆ ಸ್ಪಷ್ಟ ಉತ್ತರ ಸಿಗ್ಲಿಲ್ಲ. ಈಗ ವಿಚಾರವೆನೆಂದ್ರೆ 'ಮನದ ಕಡಲು' ಡೈರೆಕ್ಟರ್ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ಮೋಹಕ ತಾರೆ ಮಿನುಗಿ ಮಿಂಚೋದು ಪಕ್ಕಾ ಆಗಿದೆ.
Nodidavaru En Anthare: ಸಿನಿಮಾ ಮಾಡುವುದಕ್ಕಿಂತ ಸಿನಿಮಾವನ್ನು ಜನರಿಗೆ ತಲುಪಿಸುವುದೇ ದೊಡ್ಡ ಸವಾಲಾಗಿದೆ. ಕನ್ನಡ ಚಿತ್ರರಂಗದ ಸದ್ಯದ ಇಂಥಹ ಪರಿಸ್ಥಿತಿಯಲ್ಲಿ ನೋಡಿದವರು ಏನಂತಾರೆ ಚಿತ್ರ ಹಾಫ್ ಸೆಂಚುರಿಯತ್ತ ಸಾಗುತ್ತಿದೆ. ಈ ಮೂಲಕ ಒಂದೊಳ್ಳೆ ಕಂಟೆಂಟ್ ಸಿನಿಮಾವನ್ನು ಪ್ರೇಕ್ಷಕ ಯಾವತ್ತು ಕೈಬಿಡೋದಿಲ್ಲ ಎಂಬುವುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ.
Rashmika Mandaana Threat: ರಶ್ಮಿಕಾ ಮಂದಣ್ಣ ಗೆ ಖ್ಯಾತ ನಟಿಯೊಬ್ಬರು ಬೆದರಿಕೆ ಹಾಕಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೌದು ಖ್ಯಾತ ನಟಿಗೆ ನಟಿಯರಿಂದಲೇ ಬೆದರಿಕೆ ಹಾಕಿದ್ದು ಕೇಳಿದರೆ ಎಲ್ಲರಿಗೆ ಸಾಮಾನ್ಯವಾಗಿಯೇ ಭಯ ಬೀಳುತ್ತಾರೆ. ಹೀಗಿರುವಾಗ ಆ ಇಬ್ಬರು ಖ್ಯಾತ ನಟಿಯರು ಯಾರು ಗೊತ್ತಾ?
The rise of Ashoka: ”ದಿ ರೈಸ್ ಆಫ್ ಅಶೋಕ“ ಸಿನಿಮಾದ ಶೂಟಿಂಗ್ ಶುರುವಾಗಿದೆ. ಚಾಮರಾಜನಗರ ವ್ಯಾಪ್ತಿಯಲ್ಲಿ ಭರದಿಂದ ಸಾಗುತ್ತಿರೋ ಶೂಟಿಂಗ್ ಸಾಗುತ್ತಿದ್ದು ಹೈ ಬಜೆಟ್ ಭಾಗದ ಶೂಟಿಂಗ್ ಯಶಸ್ವಿಯಾಗಿ ನಡೆಯುತ್ತಿದೆ.
Paraak: ರೋರಿಂಗ್ ಸ್ಟಾರ್ ಶ್ರೀಮುರುಳಿಯ ‘ಬಘೀರ’ ಸಿನಿಮಾವನ್ನ ಮಕ್ಕಳಿಂದ ಹಿಡಿದು ಹಿರಿಯವರೆಗೂ ನೋಡಿ ಕೊಂಡಾಡಿದ್ದಾರೆ.ಯಾಕಂದ್ರೆ ಮುರುಳಿಅವರ ಎಫರ್ಟ್ ಎದ್ದುಕಾಣುತ್ತಿತ್ತು. ಬಘೀರ ಪಾತ್ರಕ್ಕೆ ಜೀವ ಕೊಡಲು ತಮ್ಮ ಜೀವವನ್ನೇ ಮೂಡಿಪಾಗಿಟ್ಟಿದ್ದರು ಅಂದ್ರೆ ತಪ್ಪಿಲ್ಲ ನೋಡಿ. ಸಿನಿಮಾ ಪ್ರಮೋಷನ್ ಅಂತ ಬಂದಾಗಲೂ ಕಾಲಿಗೆ ಗಂಟೆ ಕಟ್ಟಿಕೊಂಡವರಂತೆ ಓಡಾಡಿ ಸಿನಿಮಾ ಪ್ರಚಾರ ಮಾಡಿದ್ದರು ರೋರಿಂಗ್ ಸ್ಟಾರ್ ಶ್ರೀಮುರುಳಿ.
Sathi Sulochana: 3.3.1934 ಅಂದರೆ ಸರಿಯಾಗಿ 91 ವರ್ಷಗಳ ಹಿಂದೆ ಕನ್ನಡದ ಮೊದಲ ವಾಕ್ಚಿತ್ರ "ಸತಿ ಸುಲೋಚನ" ಬಿಡುಗಡೆಯಾಗಿತ್ತು. ನಾಟಕದಲ್ಲಿ ಕಲಾವಿದರ ಅಭಿನಯವನ್ನು ನೋಡಿದ ಜನರು ತೆರೆಯ ಮೇಲೆ ಮೊದಲ ವಾಕ್ಚಿತ್ರವನ್ನು ನೋಡಿ ಮೂಕ ವಿಸ್ಮಿತರಾದರು.
Bhargavi LLB: ‘ಭಾರ್ಗವಿ LL. B.’, ತನ್ನ ತಂದೆಯ ಘನತೆಯನ್ನು ಮರಳಿ ಗಳಿಸಲು ಕಾನೂನಿನ ಪ್ರಪಂಚದಲ್ಲಿ ಎಲ್ಲ ಅಡೆತಡೆಗಳನ್ನು ಮೀರಿ ಬಲಿಷ್ಠ ಪ್ರಭಾವಶಾಲಿಗಳ ವಿರುದ್ಧ ಹೋರಾಡುವ ಧೀರ ಯುವತಿಯ ಸ್ಪೂರ್ತಿದಾಯಕ ಕತೆ.
D Imran: ಕನ್ನಡದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ತರುಣ್ ಸುಧೀರ್ ಬಳಗದಲ್ಲಿ ಕೆಲಸ ಮಾಡಿರುವ ಪುನೀತ್ ರಂಗಸ್ವಾಮಿ ಎಂಬುವವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ನೈಜ ಘಟನೆಯ "ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ"ಗೆ ಈಗ ಸಂಗೀತ ನಿರ್ದೇಶಕರು ಸಿಕ್ಕಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಮ್ಯೂಸಿಕ್ ಮಾಂತ್ರಿಕ ಡಿ.ಇಮ್ಮಾನ್ ತರುಣ್ ನಿರ್ಮಾಣದ ಚಿತ್ರಕ್ಕೆ ಟ್ಯೂನ್ ಹಾಕಲಿದ್ದಾರೆ.
Vidhyapathi: ಇಶಾಂ ಮತ್ತು ಹಸೀಂ ಖಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವಿದ್ಯಾಪತಿ' ಸಿನಿಮಾ ಸ್ಯಾಂಪಲ್ ಗಳಿಂದಲೇ ಸುದ್ದಿ ಮಾಡುತ್ತಿದೆ. ಧನಂಜಯ ಅವರ ಡಾಲಿ ಪಿಕ್ಚರ್ಸ್ನಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ನಾಗಭೂಷಣ್ ಕರಾಟೆ ಕಿಂಗ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
Sita Payana: ದಕ್ಷಿಣ ಭಾರತದ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಎನಿಸಿಕೊಂಡಿರುವ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಇದೀಗ ಮತ್ತೆ ನಿರ್ದೇಶಕನ ಕ್ಯಾಪ್ ಧರಿಸುತ್ತಿದ್ದಾರೆ. ಸೀತಾ ಪಯಣ ಸಿನಿಮಾ ಮೂಲಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ, ಚಿತ್ರಕಥೆ ಬರೆದು, ತಮ್ಮದೇ ಹೋಮ್ ಬ್ಯಾನರ್ ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
Paraak Movie: ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರ ‘ಬಘೀರ’ ಚಿತ್ರ ಸಖತ್ ಸಕ್ಸಸ್ ಆದ ಮ್ಯಾಟರ್ ನಿಮ್ಗೆಲ್ಲಾ ಗೊತ್ತೇ ಇದೆ. ಮುಂದ್ಯಾವ ಸಿನ್ಮಾ ಅನ್ನೋ ಕ್ವಾಶ್ಚನ್ಗೆ ಆನ್ಸರ್ ಕೂಡ ಪಕ್ಕಾ ಸಿಕ್ಕಾ ಆಯ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.