ವಾಟ್ಸಾಪ್ ನ ಹೊಸ ನೀತಿಯಲ್ಲಿ, ಬಳಕೆದಾರರನ್ನು ಸಂಪೂರ್ಣವಾಗಿ ತೃಪ್ತಿಪಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಬಳಕೆದಾರರ ಗೌಪ್ಯತೆ ಹಕ್ಕನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದು ವಾಟ್ಸಾಪ್ ಹೇಳಿದೆ. ಬಳಕೆದಾರರ ಒಪ್ಪಿಗೆಯಿಲ್ಲದೆ ಡೇಟಾವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳ ದಿಗ್ಗಜ್ಜರಾದ ಫೇಸ್ ಬುಕ್, ಟ್ವಿಟರ್ ನ ನಿದ್ದೆಗೆಡಿಸುತ್ತಿದೆ ಕ್ಲಬ್ ಹೌಸ್ .. ಇದ್ದಕ್ಕಿದ್ದಂತೆ ಕ್ಲಬ್ ಹೌಸ್ ಜನಪ್ರಿಯತೆ ಹೇಗೆ ಎನ್ನುವುದೇ ಸದ್ಯಕ್ಕೆ ಚರ್ಚೆಯ ವಿಷಯ..
WhatsApp Privacy Policy:ಜನರ ಸಂದೇಶಗಳನ್ನು ಓದಲಾಗುವುದಿಲ್ಲ ಎಂದು ಲಿಖಿತವಾಗಿ ನೀಡುವಂತೆ ಸುಪ್ರೀಂ ಕೋರ್ಟ್ ವಾಟ್ಸಾಪ್ / ಫೇಸ್ಬುಕ್ಗೆ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಮುಂದಿನ ನಾಲ್ಕು ವಾರಗಳ ನಂತರ ನಡೆಯಲಿದೆ. ಯುರೋಪ್ ಮತ್ತು ಭಾರತಕ್ಕೆ ವಿಭಿನ್ನ ಮಾಪಕಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅರ್ಜಿಯಲ್ಲಿ ಅರ್ಜಿದಾರದು ವಾದಿಸಿದ್ದರು. ಭಾರತದಲ್ಲಿ ಡೇಟಾ ಸಂರಕ್ಷಣಾ ಕಾಯ್ದೆ ಬರುವ ಮೊದಲೇ ವಾಟ್ಸ್ ಆಪ್ ತನ್ನ ನೂತನ ನೀತಿ ಪ್ರಕಟಿಸಿದೆ ಎಂದು ಅರ್ಜಿದಾರರು ಸುಪ್ರೀಂಗೆ ತಿಳಿಸಿದ್ದಾರೆ.
Facebook New Feature - ಫೇಸ್ಬುಕ್ ತನ್ನ ಬಳಕೆದಾರರಿಗೆ ಅನುಕೂಲಕ್ಕಾಗಿ ತನ್ನ ಅಪ್ಲಿಕೇಶನ್ ಅನ್ನು ನವೀಕರಿಸುತ್ತಲೇ ಇರುತ್ತದೆ. ಸದ್ಯ ಫೇಸ್ ಬುಕ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕೆಲಸ ಮಾಡುತ್ತಿದ್ದು, ಈ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ಅಪರಿಚಿತರಿಂದ ಬರುವ ಸಂದೇಶಗಳನ್ನು ಏಕಕಾಲಕ್ಕೆ ಹಾಗೂ ಅತ್ಯಂತ ಸುಲಭವಾಗಿ ಡಿಲೀಟ್ ಮಾಡಬಹುದು.
ಸೆನ್ಸಾರ್ ಟವರ್ನ (Sensor Tower) ವರದಿಯ ಪ್ರಕಾರ, ವಿಶ್ವದಾದ್ಯಂತ ಸುಮಾರು 63 ಮಿಲಿಯನ್ ಜನರು ಟೆಲಿಗ್ರಾಮ್ ಡೌನ್ಲೋಡ್ ಮಾಡಿದ್ದಾರೆ. ಇದರೊಂದಿಗೆ ಈಗ ನಂಬರ್ -1 ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ವಾಟ್ಸಾಪ್, ಸಿಗ್ನಲ್ ನಂತಹ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ.
ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಮೋಸಮಾಡಿ ಹುಬ್ಬಳ್ಳಿ ತಾಲೂಕಿನ ಗುತ್ತಿಗೆದಾರನಿಂದ ಸುಮಾರು 15 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದ ಹಾಸನ ಮೂಲದ ವ್ಯಕ್ತಿಯನ್ನು ಪೊಲೀಸ್ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಮಾರ್ಗದರ್ಶನದಲ್ಲಿ ಧಾರವಾಡ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಡೇಟಾ ಪ್ರೈವಿಸಿಗೆ ಸಂಬಂಧಪಟ್ಟಂತೆ ಚರ್ಚೆಗಳು ಎಲ್ಲೆಂದರಲ್ಲಿ ನಡೆಯುತ್ತಿದೆ. ಯಾವಾಗ ವ್ಯಾಟ್ಸ್ ಆಪ್ ಪ್ರೈವೆಸಿ ಪಾಲಿಸಿ ಬದಲಾಯಿಸುವ ಬಗ್ಗೆ ಹೇಳಿತ್ತೋ ಜನತೆ ಕಳವಳಗೊಂಡಿದ್ದಾರೆ.
ಸುಮಾರು 500 ಮಿಲಿಯನ್ ಫೇಸ್ಬುಕ್ ಬಳಕೆದಾರರ ಮೊಬೈಲ್ ಫೋನ್ ಸಂಖ್ಯೆಗಳು ಟೆಲಿಗ್ರಾಮ್ ಬೋಟ್ ಮೂಲಕ ಮಾರಾಟಕ್ಕೆ ಬಂದಿವೆ ಎಂದು ಮದರ್ಬೋರ್ಡ್ ವರದಿ ತಿಳಿಸಿದೆ.ದತ್ತಾಂಶವು ಸುಮಾರು 6 ಲಕ್ಷ ಭಾರತೀಯ ಬಳಕೆದಾರರ ಸಂಖ್ಯೆಯನ್ನು ಒಳಗೊಂಡಿದೆ ಎಂದು ಭದ್ರತಾ ಸಂಶೋಧಕ ಅಲೋನ್ ಗಾಲ್ ಹೇಳಿದ್ದಾರೆ, ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಸಮಸ್ಯೆಯನ್ನು ಮೊದಲು ಎತ್ತಿ ತೋರಿಸಿದ್ದಾರೆ.
ಇಂದು ಸಂಸದೀಯ ಸಮಿತಿಯ ಮುಂದೆ ಹಾಜರಾದ ಫೇಸ್ಬುಕ್ ಮತ್ತು ಟ್ವಿಟರ್ನ ಕಾರ್ಯನಿರ್ವಾಹಕರು ನವೆಂಬರ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಖಾತೆಗಳನ್ನು ಏಕೆ ನಿರ್ಬಂಧಿಸಿದ್ದಾರೆ ಎಂಬ ಬಗ್ಗೆ ಕಠಿಣ ಪ್ರಶ್ನೆಗಳನ್ನು ಎದುರಿಸಿದರು.
ನಾಗರಿಕರ ಹಕ್ಕುಗಳನ್ನು ಕಾಪಾಡುವುದು, ಸಾಮಾಜಿಕ ಸುದ್ದಿ ಮಾಧ್ಯಮ ವೇದಿಕೆಗಳ ದುರುಪಯೋಗವನ್ನು ತಡೆಗಟ್ಟುವುದು ಮತ್ತು ಡಿಜಿಟಲ್ ಜಾಗದಲ್ಲಿ ಮಹಿಳಾ ಸುರಕ್ಷತೆ ಕುರಿತು ಚರ್ಚಿಸಲು ಸಂಸದೀಯ ಸಮಿತಿಯು ಫೇಸ್ಬುಕ್ ಮತ್ತು ಟ್ವಿಟರ್ ಅಧಿಕಾರಿಗಳನ್ನು ಕರೆಸಿದೆ. ಸಭೆ ಜನವರಿ 21 ರಂದು ನಡೆಯಲಿದೆ.ಮಾಹಿತಿ ಗೌಪ್ಯತೆ ಕುರಿತು ಭಾರಿ ಚರ್ಚೆ ನಡೆದಿರುವ ಮಧ್ಯೆ ಈಗ ಮಾಹಿತಿ ತಂತ್ರಜ್ಞಾನದ ಸ್ಥಾಯಿ ಸಮಿತಿಯಿಂದ ಸಮನ್ಸ್ ಬಂದಿದೆ.
ಪಾಕಿಸ್ತಾನದಲ್ಲಿ ಕುಳಿತಿರುವ ಭಯೋತ್ಪಾದಕರು ಫೋನ್ ಅಥವಾ ಉಪಗ್ರಹ ಬಳಕೆ ಸುರಕ್ಷಿತವಲ್ಲ ಎಂಬ ಭಯದಲ್ಲಿದ್ದಾರೆ. ಆದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ಹೆಸರಿನಲ್ಲಿ ಖಾತೆಗಳನ್ನು ರಚಿಸಲಾಗಿದೆ. ಭದ್ರತಾ ಏಜೆನ್ಸಿಗಳು ಈ ಖಾತೆಗಳ ಮೇಲೆ ಸಂಪೂರ್ಣ ಕಣ್ಣಿಟ್ಟಿವೆ.
ಕಳೆದ ವರ್ಷ ಭಾರತ-ಚೀನಾ ಗಡಿ ವಿವಾದದ ನಂತರ ಸರ್ಕಾರ 200ಕ್ಕೂ ಹೆಚ್ಚು ಚೀನೀ ಆ್ಯಪ್ಗಳನ್ನು ನಿಷೇಧಿಸಿತ್ತು. ಆದಾಗ್ಯೂ, ಕಳೆದ ಹಲವಾರು ತಿಂಗಳುಗಳಿಂದ ಚೀನಾದ ಅಪ್ಲಿಕೇಶನ್ ಟಿಕ್ ಟಾಕ್ ಭಾರತದಲ್ಲಿ ಮರುಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಆದರೆ ಪ್ರಸ್ತುತ ಈ ವಿಷಯದಲ್ಲಿ ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.