ಜಿಬಿಎ ಬೆಂಗಳೂರು ನಗರವನ್ನ ಸುಂದರವಾಗಿ ಕಾಣುವಂತೆ ಮಾಡ್ತಿದ್ದೇವೆ.. ಕಸದ ಸಮಸ್ಯೆಯನ್ನ ನಿವಾರಣೆ ಮಾಡಿದ್ದೇವೆ.. ಜನ ಕೂಡ ನಮ್ಮಜೊತೆ ಇರಬೇಕು ಅಂತಾರೆ.. ಅದ್ರೇ ನಗರದ ಕೇಂದ್ರ ಬಿಂದು ಮೆಜೆಸ್ಟಿಕ್ ಸ್ಕೈವಾಕ್ ನಲ್ಲಿ ಕಸದ ರಾಶಿ ಬಿದ್ದಿದೆ..
ನಾಯಕತ್ವ ಬದಲಾವಣೆ, ನವೆಂಬರ್ ಕ್ರಾಂತಿ ಚರ್ಚೆ ನಡುವೆ ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಅಭಯ ನೀಡಿದೆ. ನಿಮ್ಮ ಅಧಿಕಾರದಲ್ಲಿ ನೀವೇ ಸುಪ್ರೀಂ, ನಿಮ್ಮ ನೇತೃತ್ವದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ, ಬಿಬಿಎಂಪಿ ಚುನಾವಣೆ ನಡೆಯಲಿ. ನೀವು ಯಾವುದೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಮ್ಮ ಸಹಮತವಿದೆ ಎಂದು ಕೈಕಮಾಂಡ್ ಒಂದು ಲೈನ್ ಅಭಯ ನೀಡಿದೆ.
GBA ವ್ಯಾಪ್ತಿಯಲ್ಲಿ ಖಾತಾ ಬದಲಾವಣೆಗೆ ಅಸ್ತು
ಆನ್‌ಲೈನ್ ವ್ಯವಸ್ಥೆ ಉದ್ಘಾಟಿಸಿದ ಶಿವಕುಮಾರ್
5 ನಗರ ಪಾಲಿಕೆಗಳಲ್ಲಿ A ಖಾತೆ ಮಾಡಲು ತೀರ್ಮಾನ
7 ಲಕ್ಷ A ಖಾತೆ ನಿವೇಶನ, 7.5 Bಖಾತಾ ನಿವೇಶನಗಳು
ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ಜಾತಿ ಗಣತಿ ಚುರುಕು ಪಡೆಡಿದೆ. ಈವರೆಗೂ 13 ಲಕ್ಷಕ್ಕೂ ಅಧಿಕ ಮನೆಗಳ ಸಮೀಕ್ಷೆ ನಡೆಸಲಾಗಿದ್ದು, ಉತ್ತರ, ಪಶ್ಚಿಮ ನಗರ ಪಾಲಿಕೆಗಳಲ್ಲಿ ದಾಖಲೆ ಸೃಷ್ಟಿಯಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಕ್ಷೆ ಕಾರ್ಯ ಗಮನಿಸುವುದಾದರೆ, 5 ನಗರ ಪಾಲಿಕೆಗಳಲ್ಲಿ ನಿನ್ನೆ ಒಂದೇ ದಿನ ರಾತ್ರಿ 07.30 ಗಂಟೆಯವರೆಗೆ 1,19,303 ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ. ಗಮನಾರ್ಹವಾಗಿ, ಕಳೆದ 10 ದಿನಗಳಲ್ಲಿ ಜಿಬಿಎ 5 ನಗರ ಪಾಲಿಕೆಗಳ ಪೈಕಿ 13,16,183 ಮನೆಗಳ ಸಮೀಕ್ಷೆಯಷ್ಟೇ ಪೂರ್ಣಗೊಂಡಿತ್ತು.
ಈ ಸರ್ಕಾರದಲ್ಲಿ ಎಲ್ಲವೂ ಕೂಡ ಆತುರದ ನಿರ್ಧಾರ. ಜಾತಿ ಗಣತಿ ವಿಚಾರದಲ್ಲಿ ಕೂಡ ತಯಾರಿ ಇರಲಿಲ್ಲ. ಶಿಕ್ಷಕರು ಮನೆಮಠ ಬಿಟ್ಟು ಕೆಲಸ ಮಾಡ್ತಿದ್ದಾರೆ, ರಜೆಯನ್ನು ಕೂಡ ವಿಸ್ತರಣೆ ಮಾಡಿದ್ದಾರೆ. ಅದು ಮಕ್ಕಳಿಗೆ ಬಹಳ ತೊಂದರೆ ಆಗುತ್ತಿದೆ, ಶಾಲಾ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಇಂದು ಜಿಬಿಎ ಮೊದಲ ಸಭೆ ನಡೆಯುತ್ತಿದೆ. ಆದರೆ, ಇವತ್ತಿನ ಜಿಬಿಎ ಸಭೆಯ ಅಜೆಂಡಾನೇ ಕೊಟ್ಟಿಲ್ಲ, ಶಾಸಕರಿಗೆ ಮೊದಲ ಸಭೆಯ ಅಜೆಂಡಾ ನೀಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಕೆಲಸದ ಜೊತೆಗೆ ಪಾಲಿಕೆಯ ಕೆಲಸಗಳನ್ನೂ ಮಾಡುವಂತೆ ಜಿಬಿಎ ಟಾಸ್ಕ್ ನೀಡುತ್ತಿದೆ. ಇದರಿಂದ ಅತಿಯಾದ ಕೆಲಸ, ಮಾನಸಿಕ ಒತ್ತಡಕ್ಕೆ ಒಂದೇ ತಿಂಗಳಲ್ಲಿ ಐದು ಸಾವಾಗಿದೆ ಎಂದು ಆರೋಪಿಸಲಾಗಿದೆ.
ಕಾಮಗಾರಿ ನಡೆಯೋ ಜಾಗದಲ್ಲಿ ತಾತ್ಕಾಲಿಕ ಮೇಲ್ಸೇತುವೆ
ಕೋಲ್ಕತ್ತಾ ಕಂಪನಿ ಜೊತೆ ಹೊಸ ಪ್ರಯೋಗದಲ್ಲಿ GBA
ಬೆಂಗಳೂರಿನ ವಿವಿಧೆಡೆ ಕಾಮಗಾರಿಗಳಿಂದ ಜನರಿಗೆ ಸಮಸ್ಯೆ
ತಾತ್ಕಾಲಿಕ ಪರಿಹಾರ ಕಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ
ರಸ್ತೆಗಳು ಅಗೆದು ವಾಹನ ಸಂಚಾರಕ್ಕೆ ಆಗುತ್ತಿರುವ ಅಡಚಣೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.