ಒಂದು ಬಾರಿ ಓಡಿಹೋಗಲು ಯತ್ನಿಸಿದ್ದಾಗ ಪೋಷಕರ ದೂರಿನ ಮೇರೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಮನವೊಲಿಸಿ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು ಎಂಬುದು ತಿಳಿದುಬಂದಿದೆ. ಆದರೆ, ನಂತರ ಅಲ್ಲಿಂದಲೂ ಹೇಗೋ ತಪ್ಪಿಸಿಕೊಂಡ ಆಕೆ, ಪ್ರಿಯಕರನ ಜತೆ ಓಡಿಹೋಗಿ ಕಾರಿನಲ್ಲೇ ಮದುವೆಯಾಗಿದ್ದಾರೆ!
Hassan Marriage Incident: ಸಿನಿಮಾ ಸ್ಟೈಲ್ನಲ್ಲಿ ನಡೆದ ಈ ಮದುವೆಯ ವಿಡಿಯೋಗಳು ಈಗ ಸದ್ದು ಮಾಡುತ್ತಿವೆ. ಪ್ರಿಯಕರನ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಆತ ಈಕೆಗೆ ತಾಳಿ ಕಟ್ಟಿ, ಕಾಲಿಗೆ ಕಾಲುಂಗರ ತೊಡಿಸಿದ್ದಾನೆ. ಮಗು ಮತ್ತು ಪತಿಯನ್ನು ತೀರಾ ನಿರ್ಲಕ್ಷಿಸಿ ಈಕೆ ಮಾಡಿರುವ ಈ "ನೌಟಂಕಿ" ಆಟ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ