ತುಳಸಿ ಎಲೆಗಳು ಆಯುರ್ವೇದದಲ್ಲಿ ಶತಮಾನಗಳಿಂದ ಬಳಸಲಾಗುತ್ತಿರುವ ಔಷಧೀಯ ಗಿಡವಾಗಿದೆ.ಆಮ್ಲೀಯತೆಗೆ ಪರಿಹಾರವಾಗಿ 4-5 ತಾಜಾ ತುಳಸಿ ಎಲೆಗಳನ್ನು ಚೆನ್ನಾಗಿ ಜಗಿಯುವುದು ಅಥವಾ ಒಂದು ಲೋಟ ನೀರಿನಲ್ಲಿ ಕುದಿಸಿ ಕುಡಿಯುವುದು ಉತ್ತಮ. ತುಳಸಿಯಲ್ಲಿ ಆಂಟಿ-ಇನ್ಫ್ಲಮೇಟರಿ ಮತ್ತು ಆಂಟಿ-ಆಕ್ಸಿಡೆಂಟ್ ಗುಣಗಳಿದ್ದು, ಹೊಟ್ಟೆಯಲ್ಲಿ ಉಂಟಾಗುವ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡುತ್ತವೆ.