ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಪಾಕ್ ಪ್ರಧಾನಿಯನ್ನು ಶ್ಲಾಘಿಸುವ ಚರ್ಚೆಗಳ ನಡುವೆ ಭಾರತವು ತನ್ನ ಅನೇಕ ವಿದೇಶಾಂಗ ನೀತಿ ಉಪಕ್ರಮಗಳಿಗಾಗಿ ವಿವಿಧ ವಲಯಗಳಿಂದ ಪ್ರಶಂಸೆ ಪಡೆದಿದೆ ಎಂದು ಸೋಮವಾರ ಹೇಳಿದ್ದಾರೆ.
Pakistan: ಪಾಕ್ (Pakistan) ಪ್ರಧಾನಿ ಇಮ್ರಾನ್ ಖಾನ್ ಗೆ (Imran Khan) ಕೌಂಟ್ಡೌನ್ ಶುರುವಾಗಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಪಾಕ್ ಸೇನೆ ಇಮ್ರಾನ್ ಖಾನ್ ಗೆ IOC ಸಭೆಯ ಬಳಿಕ ಕುರ್ಚಿ ತೊರೆಯುವಂತೆ ಸೂಚಿಸಿದೆ ಎನ್ನಲಾಗಿದೆ.
Serial Blast In Sialkot Of Pakistan - ಪಾಕಿಸ್ತಾನದ (Pakistan) ಸಿಯಾಲ್ಕೋಟ್ನ (Sialkot) ಸೇನಾ ನೆಲೆಯಲ್ಲಿ ಬೆಂಕಿ (Fire) ಕಾಣಿಸಿಕೊಂಡಿದೆ. ಆದರೆ, ಸೇನಾ ನೆಲೆಯಲ್ಲಿ ಬೆಂಕಿ ಹೇಗೆ ಕಾಣಿಸಿಕೊಂಡಿದೆ ಎಂಬುದಕ್ಕೆ ಇದುವರೆಗೆ ಕಾರಣ ತಿಳಿದು ಬಂದಿಲ್ಲ. ಅಷ್ಟೇ ಅಲ್ಲ ಈ ದಾಳಿಯ ಹೊಣೆಯನ್ನೂ ಕೂಡ ಇದುವರೆಗೆ ಯಾರೂ ಹೊತ್ತುಕೊಂಡಿಲ್ಲ.
ಇಮ್ರಾನ್ ಖಾನ್ ಅವರ ನಿಕಟವರ್ತಿ ಹಾಗೂ ಪಾಕಿಸ್ತಾನದ ಸಂಸದರಾಗಿರುವ 49 ವರ್ಷದ ಡಾ.ಅಮೀರ್ ಲಿಯಾಕತ್ ಹುಸೇನ್ ಅವರು ಬುಧವಾರ ಸಯೀದಾ ದಾನಿಯಾ ಶಾ ಅವರೊಂದಿಗೆ 3ನೇ ವಿವಾಹವಾದರು. ಕೇವಲ 18 ವರ್ಷ ವಯಸ್ಸಿನ ಯುವತಿ ಜೊತೆಗೆ ಅವರು ಸಪ್ತಪದಿ ತುಳಿದಿದ್ದಾರೆ.
Pakistan - ಭಯೋತ್ಪಾದಕರ ಅಡ್ಡೆಯಾಗಿ ಮಾರ್ಪಟ್ಟಿರುವ ಪಾಕಿಸ್ತಾನ ಪ್ರತಿ ಬಾರಿಯೂ ಭಾರತದ ಸೇನಾ ದಾಳಿಯ ಭೀತಿಯಲ್ಲಿಯೇ ಬಳಲುತ್ತಿದೆ. ಮತ್ತೊಮ್ಮೆ ಪಾಕಿಸ್ತಾನದ ಈ ಭಯ ಜಗತ್ತಿನ ಮುಂದೆ ಬಹಿರಂಗಗೊಂಡಿದ್ದು, ಭಾರತವು ಯಾವುದೇ ಸಂದರ್ಭದಲ್ಲಿ ಯಾವುದೇ ಕಾರ್ಯಾಚರಣೆ ನಡೆಸಬಹುದು ಎಂದು ಬಹಿರಂಗವಾಗಿ ಒಪ್ಪಿಕೊಂಡಿದೆ.
ಕೆನಡಾ ಮೂಲದ ಅಂತಾರಾಷ್ಟ್ರೀಯ ಚಿಂತಕರ ಚಾವಡಿ - ಇಂಟರ್ನ್ಯಾಷನಲ್ ಫೋರಮ್ ಫಾರ್ ರೈಟ್ಸ್ ಪ್ರಕಾರ, ಇಮ್ರಾನ್ ಖಾನ್ ಅವರು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ), ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (TTP) ಮತ್ತು ಅಫ್ಘಾನ್ ತಾಲಿಬಾನ್ನಂತಹ ಉಗ್ರಗಾಮಿ ಗುಂಪುಗಳ ಜತೆ ಬೆರೆಯುವ ಮೂಲಕ ತಮ್ಮತ್ತಿದ್ದಾರೆ ಎನ್ನಲಾಗಿದೆ.
ಭ್ರಷ್ಟಾಚಾರ ಮತ್ತು ಲೈಂಗಿಕ ಅಪರಾಧಗಳು ಮುಸ್ಲಿಂ ಪ್ರಪಂಚದ ಎರಡು ದೊಡ್ಡ ಕೆಡುಕುಗಳಾಗಿವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಂಬಿದ್ದಾರೆ. ಸಮಾಜದಲ್ಲಿ ಎರಡು ರೀತಿಯ ಅಪರಾಧಗಳು ನಡೆಯುತ್ತಿವೆ ಎಂದರು. ಮೊದಲ ಭ್ರಷ್ಟಾಚಾರ ಮತ್ತು ಎರಡನೇ ಲೈಂಗಿಕ ಅಪರಾಧ. ನಮ್ಮ ಸಮಾಜದಲ್ಲಿ ಲೈಂಗಿಕ ಅಪರಾಧಗಳು ವೇಗವಾಗಿ ಹರಡುತ್ತಿವೆ.
ಇಮ್ರಾನ್ ಸರ್ಕಾರವು 2018ರಲ್ಲಿ ಅಧಿಕಾರಕ್ಕೆ ಬಂದ ಮೊದಲ 3 ವರ್ಷಗಳಲ್ಲಿ ವಿದೇಶಿ ಸರ್ಕಾರಗಳು ಮತ್ತು ಸಂಸ್ಥೆಗಳಿಂದ $34 ಶತಕೋಟಿ ಅಮೆರಿಕನ್ ಡಾಲರ್ ಗಿಂತಲೂ ಹೆಚ್ಚಿನ ಸಾಲವನ್ನು ತೆಗೆದುಕೊಂಡಿದೆ.
Imran Khan blames US: ಅಫ್ಘಾನಿಸ್ತಾನದಲ್ಲಿ (Afghanistan) ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಗೆ ಯುನೈಟೆಡ್ ಸ್ಟೇಟ್ಸ್ ಕಾರಣ. ಇದು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ಕ್ರಿಕೆಟಿಗ-ರಾಜಕಾರಣಿ ಗೌತಮ್ ಗಂಭೀರ್ ಶನಿವಾರ (ನವೆಂಬರ್ 20, 2021) ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು 'ಬಡಾ ಭಾಯ್' ಎಂದು ಕರೆದಿದ್ದಕ್ಕಾಗಿ ನವಜೋತ್ ಸಿಂಗ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಟಿ20 ವಿಶ್ವಕಪ್ನಲ್ಲಿ (T-20 World Cup) ಪಾಕಿಸ್ತಾನದ (Pakistan) ಸೋಲಿಗೆ ಇಮ್ರಾನ್ ಖಾನ್ (Imran Khan) ಅವರ ಮಾಜಿ ಪತ್ನಿ ಲೇವಡಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಖಾನ್ ಸಾಹೇಬ್, ನೀವು ಫೈನಲ್ ನೋಡುವಂತೆ ಹಠ ಮಾಡಬಾರದಿತ್ತು' ಎಂದಿದ್ದಾರೆ. ಸೆಮಿಫೈನಲ್ನಲ್ಲಿ ಪಾಕಿಸ್ತಾನ ಗೆದ್ದರೆ, ಫೈನಲ್ಗೆ ಹೋಗುತ್ತೇನೆ ಎಂದು ಇಮ್ರಾನ್ ಹೇಳಿದ್ದರು.
ಇಸ್ಲಾಮಾಬಾದ್ನ H-9/2 ರಲ್ಲಿ ನಾಲ್ಕು ಕನಾಲ್ (0.5 ಎಕರೆ) ಭೂಮಿಯನ್ನು ಮೊದಲ ಹಿಂದೂ ದೇವಾಲಯ, ಸ್ಮಶಾನ ಮತ್ತು ಸಮುದಾಯ ಕೇಂದ್ರದ ನಿರ್ಮಾಣಕ್ಕಾಗಿ 2016 ರಲ್ಲಿ ಮಂಜೂರು ಮಾಡಲಾಗಿತ್ತು.
Hindu Temple: ಇಸ್ಲಾಮಾಬಾದ್ನಲ್ಲಿ ಹಿಂದೂ ಸಮುದಾಯಕ್ಕೆ ದೇವಸ್ಥಾನ, ಸಮುದಾಯ ಕೇಂದ್ರ ಮತ್ತು ಸ್ಮಶಾನ (ಶ್ಮಶಾನ) ನಿರ್ಮಾಣಕ್ಕಾಗಿ ಇದನ್ನು ಹಂಚಲಾಯಿತು. ಆದರೆ ಈಗ ಹಸಿರು ಪ್ರದೇಶ ಎಂಬ ಕಾರಣ ನೀಡಿ ನಿವೇಶನ ಮಂಜೂರು ಮಾಡುವುದನ್ನು ರದ್ದುಗೊಳಿಸಲಾಗಿದೆ.
Viral Video: ಭಾರತದ (India) ಬಗ್ಗೆ ಪಾಕಿಸ್ತಾನದ (Pakistan) ಜನತೆಗೆ ಸುಳ್ಳು ಮಾಹಿತಿ ನೀಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಾಕ್ ನಲ್ಲಿನ ಪೆಟ್ರೋಲ್ ದರವನ್ನು (Petrol-Diesel Price) ಸಮರ್ಥಿಸಿದ್ದಾರೆ. ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಭಾರಿ ವೈರಲ್ (Viral Video) ಆಗುತ್ತಿದೆ.
Pak CM Calls Imran Khan Imature For PM Post - ಪಾಕಿಸ್ತಾನದ ಪಿಟಿಐ ಸರ್ಕಾರ (PTI Government) ಉಗುಳಲು ಆಗದ ಅಥವಾ ಅರಗಿಸಿಕೊಳ್ಳಲು ಸಾಧ್ಯವಾಗದಂತಹ ಕೆಲಸ ಮಾಡುತ್ತದೆ ಎಂದು ಪಾಕ್ ನಲ್ಲಿ ಮುಖ್ಯಮಂತ್ರಿಯಾಗಿರುವ ಮುರಾದ್ ಅಲಿ ಶಾ ಹೇಳಿದ್ದಾರೆ. ಪಾಕಿಸ್ತಾನದ ಹಿತಾಸಕ್ತಿಯಲ್ಲಿ ಕುಳಿತು ಯೋಚಿಸುವಂತೆ ಅವರು ಎಲ್ಲಾ ಸ್ಟೆಕ್ ಹೋಲ್ಡರ್ ಗಳಿಗೆ ಕರೆ ನೀಡಿದ್ದಾರೆ.
2021 ರ ಟಿ-20 ವಿಶ್ವಕಪ್ನಲ್ಲಿ ಭಾರತದ ವಿರುದ್ಧದ ಗೆಲುವನ್ನು ಆಚರಿಸುವುದರಲ್ಲಿ ಇನ್ನೂ ತಲ್ಲಿನವಾಗಿರುವ ಸಂದರ್ಭದಲ್ಲಿ ಈಗ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ದೇಶವು ಭಾರತದೊಂದಿಗೆ ಕ್ರಿಕೆಟ್ ಅನ್ನು ಮುಂದುವರಿಸಲು ಬಯಸುತ್ತದೆ ಎಂದು ಹೇಳಿದ್ದಾರೆ.
Pakistan: ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯ ಸಚೇತಕ ಅಮೀರ್ ಡೋಗರ್, "ಅಫ್ಘಾನಿಸ್ತಾನದಲ್ಲಿನ ಗಂಭೀರ ಪರಿಸ್ಥಿತಿ" ಯಿಂದಾಗಿ ಲೆಫ್ಟಿನೆಂಟ್ ಜನರಲ್ ಹಮೀದ್ ಅವರನ್ನು ಸ್ವಲ್ಪ ಸಮಯದವರೆಗೆ ಐಎಸ್ಐ ಮುಖ್ಯಸ್ಥರಾಗಿ ಮುಂದುವರಿಸಲು ಪ್ರಧಾನಿ ಬಯಸಿದ್ದರು ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.