ಮೇ 4 ರಂದು ಪಂಜಾಬ್‌ನ ಅಮೃತಸರದಲ್ಲಿ ಸೇನಾ ಶಿಬಿರ ಮತ್ತು ವಾಯುನೆಲೆಗಳ ಮಾಹಿತಿಯನ್ನು ಐಎಸ್‌ಐಗೆ ಕೊಟ್ಟ ಆರೋಪದ ಮೇಲೆ ಪಾಲಕ್ ಶೇರ್ ಮಸೀಹ್ ಮತ್ತು ಸೂರಜ್ ಮಸೀಹ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇವರನ್ನು ಐಎಸ್‌ಐಗೆ ಸಂಪರ್ಕಿಸಿದ ಹರಪ್ರೀತ್ ಎಂಬಾತನನ್ನು ಜೈಲಿನಿಂದ ಕರೆತರಲಾಗುವುದು ಎಂದು ಎಸ್‌ಎಸ್‌ಪಿ ಮನಿಂದರ್ ಸಿಂಗ್ ಹೇಳಿದ್ದಾರೆ.
S-400 ಟ್ರಯಂಫ್ (ಭಾರತದಲ್ಲಿ "ಸುದರ್ಶನ ಚಕ್ರ") ರಷ್ಯಾದ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯಾಗಿದೆ. ಭಾರತವು 2018ರಲ್ಲಿ ₹35,000 ಕೋಟಿಗೆ ಐದು ಘಟಕಗಳನ್ನು ಖರೀದಿಸಿತು. ಇದು 400 ಕಿಮೀ ದೂರದ ಯುದ್ಧವಿಮಾನ, ಡ್ರೋನ್, ಕ್ಷಿಪಣಿಗಳನ್ನು ನಾಶಪಡಿಸಬಲ್ಲದು.
ಭಾರತೀಯ ವಾಯುಸೇನೆಯು ಆಪರೇಷನ್ ಸಿಂದೂರ್‌ನಲ್ಲಿ ರಾಷ್ಟ್ರೀಯ ಉದ್ದೇಶಗಳಿಗೆ ತಕ್ಕಂತೆ ನಿಖರತೆ ಮತ್ತು ವೃತ್ತಿಪರತೆಯೊಂದಿಗೆ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಐಎಎಫ್ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.