ಲಾಕ್ ಡೌನ್ ನಡುವೆಯೇ ಎದ್ದಿರುವ ದೊಡ್ಡ ಸವಾಲು ಯಾವುದೆಂದರೆ ಲಾಕ್ ಡೌನ್ ಬಳಿಕ ಲೋನ್ ಮೊರಟೋರಿಯಂ ಘೋಷಣೆ ಮಾಡುತ್ತಾ ಸರ್ಕಾರ ಅನ್ನೋದು. ಕಳೆದ ವರ್ಷ ಲಾಕ್ ಡೌನ್ ಮಾಡಿದಾಗ ಸರ್ಕಾರ ಮತ್ತು ಆರ್ ಬಿಐ 6 ತಿಂಗಳ ಲೋನ್ ಮೊರೊಟೋರಿಯಂ ಘೋಷಣೆ ಮಾಡಿತ್ತು.
Loan Moratorium ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಮೊರಟೋರಿಯಂ ಅವಧಿಯನ್ನು ಆಗಸ್ಟ್ 31 ರ ನಂತರ ವಿಸ್ತರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೆ ವೇಳೆ ಈ ಆರು ತಿಂಗಳ ಅವಧಿಯಲ್ಲಿ ಯಾವುದೇ ಸಾಲಗಾರರಿಂದ ಪಡೆದ ಬಡ್ಡಿಗೆ ಮೇಲೆ ಯಾವುದೇ ಬಡ್ಡಿ ವಿಧಿಸಲಾಗುವುದಿಲ್ಲ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ಶೀಘ್ರದಲ್ಲಿಯೇ ಸಾಲ ಪಡೆದ ಜನರು ಬ್ಯಾಂಕ್ ಅಥವಾ ಇತರೆ ಆರ್ಥಿಕ ಸಂಸ್ಥೆಗಳಿಗೆ ಭೇಟಿ ನೀಡಿ ತಮ್ಮ EMIಗಳನ್ನು ಕಡಿಮೆಗೊಳಿಸಬಹುದಾಗಿದೆ. ಇದರಿಂದ ನಿಮ್ಮ ಸಿಬಿಲ್ ಸ್ಕೋರ್ ಮೇಲೂ ಕೂಡ ಯಾವುದೇ ರೀತಿಯ ಪ್ರನಿನಾಮ ಉಂಟಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.