LSG vs MI-IPL 2023: ಮುಂಬೈ ಇಂಡಿಯನ್ಸ್ ನ ಮಾರಕ ಬೌಲಿಂಗ್ ದಾಳಿಯ ಮುಂದೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬ್ಯಾಟ್ಸ್ ಮನ್ ಗಳು ಕೇವಲ 101 ರನ್ ಗಳಿಸಲಷ್ಟೇ ಶಕ್ತರಾದರು. ಈ ಸ್ಕೋರ್ ನೊಂದಿಗೆ ಲಕ್ನೋ ತಂಡ ಐಪಿಎಲ್ ಪ್ಲೇ ಆಫ್ ನಲ್ಲಿ ಅತಿ ಕಡಿಮೆ ರನ್ ಗಳಿಸಿದ ಮೂರನೇ ತಂಡ ಎನಿಸಿಕೊಂಡಿದೆ. 2010ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಕ್ಕನ್ ಚಾರ್ಜರ್ಸ್ ಗಳಿಸಿದ 82 ರನ್ ಗಳು ಐಪಿಎಲ್ ಪ್ಲೇ ಆಫ್ಗಳಲ್ಲಿ ತಂಡದ ಅತ್ಯಂತ ಕಡಿಮೆ ಮೊತ್ತವಾಗಿದೆ.
Mumbai Indians Player Eat Sweet Mango For Naveen Ul Haq: ಈ ಐಪಿಎಲ್ ಸೀಸನ್ ನಲ್ಲಿ ಬಹಳ ವೈರಲ್ ಆದ ‘ಸ್ವೀಟ್ ಮ್ಯಾಂಗೊ’ ಎಂಬ ಪದವನ್ನು ನೀವೆಲ್ಲರೂ ಕೇಳಿರಬಹುದು. ಹೌದು ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ನಡೆದ ಚರ್ಚೆಯ ಬಳಿಕ ಈ ಪದ ಕಾಣಿಸಿಕೊಂಡಿತ್ತು. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (GT vs RCB) ಗುಜರಾತ್ ಟೈಟಾನ್ಸ್ ಕೈಯಲ್ಲಿ ಸೋಲನ್ನು ಎದುರಿಸಿತ್ತು.
MI vs LSG: ಈ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ದೊಡ್ಡ ತಪ್ಪು ಮಾಡಿದ್ದಾರೆ. ಅದೇನೆಂದರೆ ಅವರು ಫಾರ್ಮ್-11 ರಲ್ಲಿ ಕ್ವಿಂಟನ್ ಡಿಕಾಕ್ ಅವರನ್ನು ಸೇರಿಸಿಕೊಂಡಿರಲಿಲ್ಲ. ಅವರ ಸ್ಥಾನದಲ್ಲಿ ಕೈಲ್ ಮೇಯರ್ಸ್ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರು. ಡಿಕಾಕ್ ಕೇವಲ 4 ಪಂದ್ಯಗಳಲ್ಲಿ 143 ರನ್ ಗಳಿಸಿದರು.
IPL 2023: ಈ ಘಟನೆಗೆ ಸಂಬಂಧಿಸಿದ ಟ್ವೀಟ್ ಗೆ ಪ್ರತಿಕ್ರಿಯಿಸಿದ ಜಾಂಟಿ ರೋಡ್ಸ್, “ಡಗೌಟ್ನಲ್ಲಿ ಮಾತ್ರವಲ್ಲ ಅಲ್ಲ, ಆಟಗಾರರ ಮೇಲೆ ಎಸೆದಿದ್ದಾರೆ. ಪ್ರೇರಕ್ ಮಂಕಡ್ ಫೀಲ್ಡಿಂಗ್ ಮಾಡುತ್ತಿದ್ದಾಗ ಅಭಿಮಾನಿಗಳು ಅವರ ತಲೆಗೆ ನಟ್ ಮತ್ತು ಬೋಲ್ಟ್ ಗಳಿಂದ ಹೊಡೆದಿದ್ದಾರೆ” ಎಂದು ಹೇಳಿದರು.
WTC ಫೈನಲ್ 2023: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಆಘಾತಗಳು ಹೆಚ್ಚುತ್ತಿದೆ. ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಹಾಗೂ ಟೀಂ ಇಂಡಿಯಾ ತಂಡದ ಭಾಗವಾಗಿರುವ ಕೆ.ಎಲ್.ರಾಹುಲ್ ಗಾಯದ ಸಮಸ್ಯೆಯಿಂದ ಎರಡೂ ಟೂರ್ನಿಗಳಿಂದ ಹೊರಗುಳಿದಿದ್ದಾರೆ. ಈಗ ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ತಂಡಕ್ಕೆ ಸೇರಿಸಲು ಭಾರೀ ಬೇಡಿಕೆ ಬಂದಿದೆ.
ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಲಕ್ನೋ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬೆಂಗಳೂರು ತಂಡವು ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ 31 ಹಾಗೂ ಫ್ಯಾಫ್ ದುಪ್ಲೆಸಿಸ್ 44 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರನು ಕೂಡ 20 ರ ಗಡಿ ದಾಟಲಿಲ್ಲ ಇದರ ಪರಿಣಾಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂತಿಮವಾಗಿ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ ಕೇವಲ 126 ಗಳನ್ನು ಗಳಿಸಿತು.ಇದಕ್ಕೆ ಉತ್ತರವಾಗಿ ಲಕ್ನೋ ತಂಡವು 20 ಓವರ್ ಗಳಲ್ಲಿ 108 ರನ್ ಗಳಿಗೆ ಸರ್ವಪತನವನ್ನು ಕಂಡಿತು.
Punjab Kings vs Lucknow Super Giants: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನ ಅತ್ಯುತ್ತಮ ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಗಾಯಗೊಂಡಿದ್ದಾರೆ. ಮಾರ್ಕಸ್ ಸ್ಟೊಯಿನಿಸ್ ಬೆರಳಿನ ಗಾಯದಿಂದ ಮೈದಾನದಿಂದ ಹೊರಗುಳಿದಿದ್ದರು. ಅಷ್ಟೇ ಅಲ್ಲದೆ ಇಡೀ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇನ್ನು ಪಂದ್ಯ ಮುಗಿದ ನಂತರ, ಅವರ ಗಾಯಕ್ಕೆ ಸಂಬಂಧಿಸಿದ ಅಪ್ಡೇಟ್ ಮುನ್ನೆಲೆಗೆ ಬಂದಿದೆ.
IPL 2023: ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ನಾಯಕ ಕೆಎಲ್ ರಾಹುಲ್ ಅತ್ಯುತ್ತಮ ಇನ್ನಿಂಗ್ಸ್ ಅಂದರೆ. 68 ರನ್’ಗಳ ಇನ್ನಿಂಗ್ಸ್ನಲ್ಲಿ ಅರ್ಧಶತಕವನ್ನು ಬಾರಿಸಿದರು. ಈ ಮೂಲಕ ಕನ್ನಡಿಗ ರಾಹುಲ್ ಅದ್ಭುತ ದಾಖಲೆ ಬರೆದಿದ್ದಾರೆ. ಭಾರತದ ಪರ ಟಿ20 ಕ್ರಿಕೆಟ್’ನಲ್ಲಿ ವೇಗವಾಗಿ 7000 ರನ್ ಗಳಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ.
Jos Buttler's statement about the commentator: ಐಪಿಎಲ್ ರಾಜಸ್ಥಾನ್ ರಾಯಲ್ಸ್ ಮತ್ತು ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಮಾತನಾಡಿದ್ದು, “ಕಾಮೆಂಟೇಟರ್ ಒಬ್ಬ ಆಟಗಾರನನ್ನು ಟೀಕಿಸಿದರೆ, ಅದು ಅವನ ಕೆಲಸ ಎಂದು ಮುನ್ನಡೆಯಬೇಕು. ಪರಿಸ್ಥಿತಿಗಳನ್ನು ಒಪ್ಪಿಕೊಳ್ಳುವುದು ಪ್ರತೀ ಕ್ರಿಕೆಟಿಗನ ವೃತ್ತಿಜೀವನದ ಅವಿಭಾಜ್ಯ ಅಂಗವಾಗಿರಬೇಕು” ಎಂದು ಹೇಳಿದ್ದಾರೆ.
RR vs LSG: ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎರಡೂ ತಂಡಗಳ ಬ್ಯಾಟಿಂಗ್ ಬಹಳ ನಿಧಾನವಾಗಿತ್ತು. ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಇದರ ನಂತರ ಕಣಕ್ಕಿಳಿದ ರಾಜಸ್ಥಾನ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಲಕ್ನೋ ಪರ ಬೌಲಿಂಗ್ ಮಾಡಿದ ಆವೇಶ್ ಖಾನ್ 4 ಓವರ್ಗಳಲ್ಲಿ 25 ರನ್ ನೀಡಿ 3 ವಿಕೆಟ್ ಕಬಳಿಸಿದರು
RR vs LSG IPL 2023: ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ (LSG) ನ ವಿಕೆಟ್ ಕೀಪರ್ ಕಂ ಬ್ಯಾಟ್ಸ್’ಮನ್ ಕ್ವಿಂಟನ್ ಡಿ ಕಾಕ್ ಈ ಸೀಸನ್’ನಲ್ಲಿ ಮೊದಲ ಅವಕಾಶ ಪಡೆಯಲು ಕಾಯುತ್ತಿದ್ದಾರೆ. ಕ್ವಿಂಟನ್ ಡಿ ಕಾಕ್ ಅವರು ಟಿ20ಯಲ್ಲಿ ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟ್ಸ್’ಮನ್’ಗಳಲ್ಲಿ ಒಬ್ಬರಾಗಿದ್ದಾರೆ. ಆದರೆ 2023ರ ಐಪಿಎಲ್’ನಲ್ಲಿ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿಲ್ಲ.
LSG vs RR IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16ರ 26 ನೇ ಪಂದ್ಯವು ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG vs RR) ನಡುವೆ ಇಂದು ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನೊಬ್ಬ ತನ್ನ ಪತ್ನಿಯನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾನಂತೆ. ಅಷ್ಟೇ ಅಲ್ಲ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿರುವ ಆತ ವಿಶೇಷ ಸಂದೇಶವನ್ನೂ ಬರೆದು ಕಣ್ಣೀರು ಹಾಕಿದ್ದಾನೆ.
Indian Premier League, CSK Team: ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK), ಈ ಋತುವಿನಲ್ಲಿ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡರಲ್ಲಿ ಗೆದ್ದರೆ ಎರಡರಲ್ಲಿ ಸೋತಿದೆ. ಈ ತಂಡದ ಆಟಗಾರನೊಬ್ಬ ತನ್ನ ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದಿದ್ದಾನೆ.
LSG Players Emotional Story: ಇತ್ತೀಚೆಗೆ ಆರ್ ಸಿ ಬಿ ವಿರುದ್ಧ ಕೊನೆಯ ಓವರ್’ನಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ್ದ ಈತ ತಂಡದ ಗೆಲುವಿಗೆ ಕೊಡುಗೆ ನೀಡಿದ್ದ. ಲಕ್ನೋ ಸೂಪರ್ ಜೈಂಟ್ಸ್ (ಎಲ್ ಎಸ್ ಜಿ) ಪರ ಆಡುತ್ತಿರುವ ನಿಕೋಲಸ್ ಪೂರನ್ ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.
RCB vs LSG, IPL 2023: IPL 2023 ರ ಅತ್ಯಂತ ರೋಚಕ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪಂದ್ಯದ ಕೊನೆಯ ಎಸೆತದಲ್ಲಿ 1 ವಿಕೆಟ್ನಿಂದ ಸೋಲಿಸಿತು.
RCB vs LSG: ಪಂದ್ಯದಲ್ಲಿ ಆರ್’ಸಿಬಿ ಪರ ಮೈದಾನಕ್ಕೆ ಬಂದ ಮೂವರು ಆಟಗಾರರು ಭರ್ಜರಿ ಆಟವಾಡಿದ್ದಾರೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್’ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಮೂವರೂ ಸಹ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಸಿಕ್ಸ್, ಫೋರ್’ಗಳ ಅಬ್ಬರಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ನಡುಗಿದೆ. ಅಷ್ಟೇ ಅಲ್ಲ ಕೇವಲ 48 ಎಸೆತಕ್ಕೆ 108 ರನ್’ಗಳ ಭರ್ಜರಿ ಜೊತೆಯಾಟವನ್ನು ಮ್ಯಾಕ್ಸ್’ವೆಲ್ ಮತ್ತು ಡು ಪ್ಲೆಸಿಸ್ ಆಡಿದ್ದಾರೆ.