Make In India: ಯುಪಿಎ ಅವಧಿಯಲ್ಲಿ ಉತ್ಪಾದನಾ ವಲಯದಲ್ಲಿನ ಅಭಿವೃದ್ಧಿಯ ಕಾರಣದಿಂದ, ಉದ್ಯೋಗಾವಕಾಶಗಳೂ ಹೆಚ್ಚಾಗಿದ್ದವು. ಕಾರ್ಖಾನೆಗಳಲ್ಲಿನ ಉದ್ಯೋಗ ದರ ವಾರ್ಷಿಕವಾಗಿ 6.2% ಹೆಚ್ಚಳ ಕಂಡಿತ್ತು. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ ಈ ಉದ್ಯೋಗ ದರ 2.8%ಕ್ಕೆ ಕುಸಿತ ಕಂಡಿದೆ. ಅದೇ ರೀತಿ, ಯುಪಿಎ ಆಡಳಿತದ ಅವಧಿಯಲ್ಲಿ ಉದ್ಯೋಗಿಗಳ ಸಂಬಳ ವಾರ್ಷಿಕವಾಗಿ 17.1% ದರದಲ್ಲಿ ಹೆಚ್ಚುತ್ತಿದ್ದರೆ, 2014ರ ಬಳಿಕ ಸಂಬಳ ಹೆಚ್ಚಳದ ದರ 8.4%ಗೆ ಇಳಿಕೆ ಕಂಡಿದೆ.
ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ ನೀಡುವ ದಿಸೆಯಲ್ಲಿ ಕೇಂದ್ರ ಸರಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 12 ಸುಖೋಯ್- 30 ಎಂಕೆಐ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಖರೀದಿಸಲು ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ
Laptop computer import ban : ಈ ನಿಷೇಧದ ಅಡಿಯಲ್ಲಿ ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳು, ಪರ್ಸನಲ್ ಕಂಪ್ಯೂಟರ್ಗಳು, ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್ಗಳು ಮತ್ತು ಸರ್ವರ್ಗಳು ಸೇರಿವೆ.
ಪ್ರಧಾನಿ ನರೇಂದ್ರ ಮೋದಿಯನ್ನು ರಷ್ಯಾದ "ದೊಡ್ಡ ಸ್ನೇಹಿತ ಎಂದು ಕರೆದಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅವರ 'ಮೇಕ್ ಇನ್ ಇಂಡಿಯಾ' ಅಭಿಯಾನವು ದೇಶದ ಆರ್ಥಿಕತೆಯ ಮೇಲೆ "ನಿಜವಾದ ಪ್ರಭಾವಶಾಲಿ ಪರಿಣಾಮವನ್ನು" ಹೊಂದಿದೆ ಎಂದು ಹೇಳಿದ್ದಾರೆ.
ಕಸ್ಟಮ್ ಡ್ಯೂಟಿ ಬಜೆಟ್ 2023: ಡೆಲಾಯ್ಟ್ ತನ್ನ ವರದಿಯೊಂದರಲ್ಲಿ ಚಾಲ್ತಿ ಖಾತೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು. ಆಮದು ಬಿಲ್ ಅಪಾಯದ ಹೊರತಾಗಿ 2023-24ರಲ್ಲಿ ರಫ್ತಿನ ಮೇಲೆ ಹಣದುಬ್ಬರದ ಪರಿಣಾಮ ಸಾಧ್ಯತೆಯಿದೆ.
ಭಾರತೀಯ ವಾಯುಪಡೆಗೆ ತನ್ನ ಆವ್ರೋ ಸಾಗಾಣಿಕಾ ವಿಮಾನಗಳಿಗೆ ವಯಸ್ಸಾಗುತ್ತಿದೆ, ತಮ್ಮ ಕಾರ್ಯಾಚರಣೆಯ ಅಂತ್ಯಕ್ಕೆ ಬರುತ್ತಿವೆ ಎಂದು ಅರಿವಾದಾಗ ಅವುಗಳ ಬದಲಿಗೆ ಇನ್ನೂ ಆಧುನಿಕ, ಹೆಚ್ಚು ಸಮರ್ಥವಾದ, ಭಾರತದಲ್ಲಿ ಮತ್ತು ವಿದೇಶಗಳಲ್ಲಿ ವಾಯುಪಡೆಯ ಬೇರೆ ಬೇರೆ ಕಾರ್ಯಗಳನ್ನು ನಡೆಸಬಲ್ಲ ಸಾಗಾಣಿಕಾ ವಿಮಾನದ ಅಗತ್ಯವಿದೆ ಎಂದು ತಿಳಿಯಿತು.
ಸೆಪ್ಟೆಂಬರ್ 2021ರಲ್ಲಿ, ಭಾರತ ಏರ್ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಸಂಸ್ಥೆಯೊಡನೆ 21,935 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಭಾರತದ ಬಳಿ ಇರುವ ಹಳೆಯದಾದ, 1960ರ ದಶಕದಲ್ಲಿ ಸೇವೆಗೆ ಲಭ್ಯವಾಗಿದ್ದ ಆವ್ರೋ-748 ವಿಮಾನಗಳ ಬದಲಿಗೆ 56 ಸಿ295 ವಿಮಾನಗಳ ನಿರ್ಮಾಣಕ್ಕೆ ನಿರ್ಧರಿಸಿತು.
ಗುಜರಾತಿನ ವಡೋದರಾದಲ್ಲಿ ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ, ಇದು ವಾಯುಯಾನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವತ್ತ ಭಾರತದ ದೈತ್ಯ ಜಿಗಿತ ಎಂದು ಹೇಳಿದರು.
Make In India Booster - ಮೇಕ್ ಇನ್ ಇಂಡಿಯಾವನ್ನು (Make In India) ಉತ್ತೇಜಿಸಲು, ಭಾರತೀಯ ಸೇನೆಯು (Indian Army) 14,000 ಕೋಟಿ ಮೌಲ್ಯದ ಸ್ವದೇಶಿ ಕ್ಷಿಪಣಿಗಳು ಮತ್ತು ಹೆಲಿಕಾಪ್ಟರ್ಗಳನ್ನು ಖರೀದಿಸಲು ನಿರ್ಧರಿಸಿದೆ.
ಹೆಚ್ಚು ಹೆಚ್ಚು ಗ್ರಾಹಕರನ್ನು ಹೊಂದುವ ಉದ್ದೇಶದಿಂದ ಬ್ಲ್ಯಾಕ್ಟ್ರೀ ಇಂಡಿಯಾ ಕಂಪನಿ ಆಫರ್ ನೀಡುತ್ತಿದೆ. ಈ ಆಫರ್ ಪ್ರಕಾರ, ಪ್ರತಿ ಬಟ್ಟೆ ಖರೀದಿಯಲ್ಲೂ ಡಬಲ್ ಸಿಮ್ ಮೊಬೈಲ್ ಫೋನ್ ಅನ್ನು ಉಚಿತವಾಗಿ ನೀಡಲು ಕಂಪನಿ ನಿರ್ಧರಿಸಿದೆ.
ನೆಕ್ಸ್ಜು ಮೊಬಿಲಿಟಿ ರೊಂಪಸ್ + ಅನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗಿದೆ. ಇದರರ್ಥ ಮೇಕ್ ಇನ್ ಇಂಡಿಯಾ ಮತ್ತು ವೋಕಲ್ ಫಾರ್ ಲೋಕಲ್ (Vocal for Local) ಎರಡೂ ಉದ್ದೇಶವನ್ನು ಪೂರೈಸುತ್ತವೆ.
ಹಬ್ಬದ ಋತುವಿನಲ್ಲಿ ಹೊಸ ಗ್ರಾಹಕರನ್ನು ರಚಿಸುವ ಬಗ್ಗೆ ಕಂಪನಿಗಳಿಗೆ ಹೆಚ್ಚಿನ ಭರವಸೆ ಇದೆ. ಪ್ರಸ್ತುತ ಅಂತಹ ಕಂಪನಿಗಳು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳತ್ತ ಗಮನ ಹರಿಸುತ್ತಿವೆ. ಕೆಲವು ಸ್ಟಾರ್ಟ್ಅಪ್ಗಳು 4 ವೀಲರ್ಗಾಗಿ ತಯಾರಿ ನಡೆಸುತ್ತಿವೆ.
ಈ ಯೋಜನೆಯ ಮೂಲಕ ರಾಷ್ಟ್ರದ ರಾಜಧಾನಿ ದೆಹಲಿ ಮತ್ತು ಅದರ ಸುತ್ತಲಿನ ಎನ್ಸಿಆರ್ ಪ್ರದೇಶದಲ್ಲಿ ಬರುವ ಜಿಲ್ಲೆಗಳನ್ನು ಸಂಪರ್ಕಿಸುವುದು ಮೋದಿ ಸರ್ಕಾರದ ಅತಿದೊಡ್ಡ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ.
ಭಾರತದಲ್ಲಿ ಆಪಲ್ ಐಫೋನ್ 11 ತಯಾರಿಸಲು ಪ್ರಾರಂಭಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದ್ದಾರೆ. ಇದು ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಮಹತ್ವದ ಉತ್ತೇಜನ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.
ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕುರಿತಂತೆ ಹೆಚ್ಚಾಗುತ್ತಿರುವ ಬೇಡಿಕೆಗಳ ಹಿನ್ನೆಲೆ ಸರ್ಕಾರ ಕೂಡ ಚೀನಾದಿಂದ ಆಮದು ಕಡಿಮೆ ಮಾಡಲು ದೊಡ್ಡ ಯೋಜನೆಗಳನ್ನು ರೂಪಿಸುತ್ತಿದೆ. ಚೀನಾದಿಂದ ಆಮದಾಗುತ್ತಿರುವ ಸರಕುಗಳ ಮೇಲೆ ಕಸ್ಟಮ್ ಸುಂಕವನ್ನು ಹೆಚ್ಚಿಸಲು ಇದೀಗ ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ವೆಂಟಿಲೇಟರ್ ಅನ್ನು ತಾಂತ್ರಿಕವಾಗಿ ಸುಮಾರು ಎರಡೂವರೆ ತಿಂಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ. ಏಮ್ಸ್ ರಿಷಿಕೇಶ ಪರೀಕ್ಷೆಯಲ್ಲಿ ಸಂಪೂರ್ಣ ಸ್ಥಳೀಯ ವೆಂಟಿಲೇಟರ್ 'ಪ್ರಾಣವಾಯು' ಯಶಸ್ವಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.