ಅರಣ್ಯ ಇಲಾಖೆ ಮೂವತ್ತಕ್ಕೂ ಹೆಚ್ಚು ಸಿಬ್ಬಂದಿಗಳನ್ನ ಚಿರತೆ ಸೆರೆ ಕಾರ್ಯಚರಣೆಗೆ ನಿಯೋಜನೆ ಮಾಡಿ ಮೊನ್ನೆಯಿಂದಲ್ಲೂ ಸತತ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡುತ್ತಿದೆ
ಭಾನುವಾರದಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಬಾಲಕನೊರ್ವನ ಮೇಲೆ ಏಕಾಏಕಿ ಚಿರತೆಯೊಂದು ದಾಳಿ ಮಾಡಿ ರಕ್ತ ಹೀರಿ ಕೊಂದಿದೆ. ಮಾದಪ್ಪನ ಪುಣ್ಯ ನೆಲೆಯಲ್ಲಿ ಈವರೆಗೆ ಮೂವರ ಮೇಲೆ ಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದರೇ ಓರ್ವ ಬಾಲಕ ಗಾಯಗೊಳಿಸಿರುವ ಘಟನೆ ನಡೆದಿದೆ
ಇತ್ತೀಚೆಗಷ್ಟೇ ಶಿವರಾತ್ರಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ತಾಳಬೆಟ್ಟದ ಬಳಿ ಚಿರತೆಯೊಂದು ಪಾದಯಾತ್ರಿಯನ್ನು ಕೊಂದಿತ್ತು. ಆ ಘಟನೆ ಮಾಸುವ ಮುನ್ನವೇ ಈಗ ಬಾಲಕನ ಬಲಿಯಾಗಿರುವುದು ಭಕ್ತರಲ್ಲಿ ಮತ್ತು ಪಾದಯಾತ್ರಿಕರಲ್ಲಿ ತೀವ್ರ ಭೀತಿ ಹುಟ್ಟಿಸಿದೆ.