ನಟ-ರಾಜಕಾರಣಿ ಮನೋಜ್ ತಿವಾರಿ ( Manoj Tiwari ) ಅವರು ದೆಹಲಿ ಬಿಜೆಪಿ ಮುಖ್ಯಸ್ಥ ಸ್ಥಾನದಿಂದ ನಿರ್ಗಮಿಸಿದ್ದಾರೆ.ಈಗ ಅವರ ಸ್ಥಾನದಲ್ಲಿ ಆದೇಶ್ ಕುಮಾರ್ ಗುಪ್ತಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ಪಕ್ಷ ತಿಳಿಸಿದೆ.
ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮಂಗಳವಾರ ದೆಹಲಿಯಲ್ಲಿ ನಡೆದಿರುವ ಮತ ಎಣಿಕೆ ಪ್ರಕ್ರಿಯೆಯ ವೇಳೆ ಮತ್ತೊಮ್ಮೆ EVM ವಿಚಾರವಾಗಿ ಹೇಳಿದೆ ನೀಡಿದ್ದಾರೆ. ಆರಂಭಿಕ ಟ್ರೆಂಡ್ಸ್ ಗಳಲ್ಲಿ ಆಮ್ ಆದ್ಮಿ ಪಕ್ಷ ಮುಂಚೂಣಿಯಲ್ಲಿ ಇದ್ದರೆ, ಭಾರತೀಯ ಜನತಾ ಪಕ್ಷ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಪಕ್ಷ ಇದುವರೆಗೆ ಒಂದೂ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿಲ್ಲ. ಈ ಸಂದರ್ಭದಲ್ಲಿ ಮಾತನಾಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ, 'EVM ಟ್ಯಾಂಪರ್ ಪ್ರೂಫ್ ಆಗಿಲ್ಲ ಮತ್ತು ಹಲವು ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಇವುಗಳನ್ನು ಬಳಸಲಾಗುವುದಿಲ್ಲ' ಎಂದಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಅವರ ಹಾಡುಗಳಿಗಾಗಿ ಅಪಹಾಸ್ಯ ಮಾಡುವುದಿಲ್ಲ ಅವರು ಚೆನ್ನಾಗಿ ನೃತ್ಯ ಮಾಡುತ್ತಾರೆ ಎಂದು ಹೇಳಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ದೆಹಲಿ ಚುನಾವಣೆಗೆ ಮುನ್ನ ಬಿಜೆಪಿ ಅಭೂತ ಪೂರ್ವ 5,000 ಸಣ್ಣ ರ್ಯಾಲಿಗಳನ್ನು ಯೋಜಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆ ಮೂಲಕ ದೆಹಲಿಯಲ್ಲಿ ಆಡಳಿತಾರೂಡ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಸೋಲಿಸಲು ಬಿಜೆಪಿ ರಣತಂತ್ರವನ್ನು ರೂಪಿಸಿಸುತ್ತಿದೆ ಎನ್ನಲಾಗಿದೆ.
ಎನ್‌ಆರ್‌ಸಿಯನ್ನು ದೆಹಲಿಯಲ್ಲಿ ಜಾರಿಗೆ ತರಬೇಕು. ದೆಹಲಿಯಲ್ಲಿ ಎನ್‌ಆರ್‌ಸಿ ಜಾರಿಗೆ ಬಂದರೆ ಮನೋಜ್ ತಿವಾರಿ ಅವರೇ ಮೊದಲು ಹೊರಹೋಗಬೇಕಾಗುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಉತ್ತರಾಖಂಡದ ಖಾತಿಮಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಮನೋಜ್ ತಿವಾರಿ ಅವರ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.